ಯಕ್ಷಗಾನದಿಂದ ಪ್ರೌಢ ವ್ಯಕ್ತಿತ್ವ ರೂಪು: ರಮೇಶ್ ಭಟ್ ಎಸ್.ಜಿ

KannadaprabhaNewsNetwork |  
Published : Oct 19, 2026, 02:45 AM IST
ಸುರತ್ಕಲ್ ಬಂಟರ ಸಂಘದಲ್ಲಿ ಯಕ್ಷಸಿರಿಯ  ನಾಲ್ಕನೇ ವಾರ್ಷಿಕೋತ್ಸವ | Kannada Prabha

ಸಾರಾಂಶ

ಯಕ್ಷಗಾನ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು ಮಕ್ಕಳು ಯಕ್ಷಗಾನ ಕಲಿಯವುದರಿಂದ ವ್ಯಕ್ತಿತ್ವ ಪ್ರೌಢವಾಗುತ್ತದೆ ಎಂದು ಸುರತ್ಕಲ್‌ ಗೋವಿಂದ ದಾಸ್ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ ಹೇಳಿದರು.

ಮೂಲ್ಕಿ : ಯಕ್ಷಗಾನ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು ಮಕ್ಕಳು ಯಕ್ಷಗಾನ ಕಲಿಯವುದರಿಂದ ವ್ಯಕ್ತಿತ್ವ ಪ್ರೌಢವಾಗುತ್ತದೆ ಎಂದು ಸುರತ್ಕಲ್‌ ಗೋವಿಂದ ದಾಸ್ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ ಹೇಳಿದರು. ಸುರತ್ಕಲ್ ಬಂಟರ ಸಂಘದಲ್ಲಿ ಜರಗಿದ ಸುರತ್ಕಲ್ ಬಂಟರ ಸಂಘದ ಯಕ್ಷಗಾನ ತರಬೇತಿ ಕೇಂದ್ರ ಯಕ್ಷಸಿರಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಈ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ಸನ್ಮಾನಿಸಲಾಯಿತು.

ಯಕ್ಷಗಾನ ಕಲಾ ಸಂಘಟಕ ಮಾಧವ ಎಸ್.ಶೆಟ್ಟಿ ಬಾಳ ಮಾತನಾಡಿ, ಮೊದಲ ಮಹಿಳಾ ಯಕ್ಷಗಾನ ತಂಡ ಸ್ಥಾಪನೆಯಾಗಿದ್ದು ಬಾಳದಲ್ಲಿ ಮಹಾಗಣಪತಿ ಯಕ್ಷಗಾನ ತಂಡ. ನಂತರದ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಮಹಿಳಾ ಯಕ್ಷಗಾನ ತಂಡಗಳು ಆರಂಭವಾಗಿದೆ ಎಂದರು.

ಇಡ್ಯ ಕಟ್ಲ ಶ್ರೀ ಸತ್ಯನಾರಾಯಣ ಮತ್ತು ಶನಿದೇವರ ಪೂಜಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ, ಇಂಡಿಯನ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಏರಿಯ ಡೆವಲಪ್ ಮೆಂಟ್ ಅಧಿಕಾರಿ ಸುಮಾ ಚಂದ್ರಶೇಖರ್ ಎಂ.ಎ, ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಯಕ್ಷಧ್ರುವ ಪಟ್ಲಫೌಂಡೇಶನ್ ಟ್ರಸ್ಟ್ ನ ಕೇಂದ್ರಿಯ ಮಹಿಳಾ ಘಟಕದ ಸಂಚಾಲಕಿ ಸಹನಾ ರಾಜೇಶ್ ರೈ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ತಾರಾನಾಥ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಯಕ್ಷಸಿರಿ ಸಂಚಾಲಕಿ ಕವಿತಾ ಪುಷ್ಪರಾಜ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅನೂಪ್ ಶೆಟ್ಟಿ ಕಟ್ಲ ದೇವರನ್ನು ಸ್ತುತಿಸಿದರು. ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ ಸ್ವಾಗತಿಸಿ,ಪ್ರಸ್ತಾವನೆಗ್ಯೆದರು. ಡಾ ಸುಧಾ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಬಳಿಕ ಯಕ್ಷಸಿರಿ ಸಂಘಟನೆಯ ರಾಕೇಶ್ ರೈ ಅಡ್ಕ ಅವರ ಶಿಷ್ಯ ವೃಂದದಿಂದ ದಶಾವತಾರ ಯಕ್ಷಗಾನ ಬಯಲಾಟ ನಡೆಯಿತು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ
ಬಲಮುರಿ ಅಗಸ್ತೇಶ್ವರ ದೇವಾಲಯದಲ್ಲಿ ಪುಣ್ಯ ತೀರ್ಥಸ್ನಾನ, ಜಾತ್ರಾ ಮಹೋತ್ಸವ