ಉಪಚುನಾವಣೆ ಟಿಕೆಟ್‌ ನೀಡಲು ಯಲಿಗಾರ ಮನವಿ

KannadaprabhaNewsNetwork |  
Published : Aug 14, 2024, 12:56 AM IST
ಪೊಟೋ ಪೈಲ್ ನೇಮ್ ೧೩ಎಸ್‌ಜಿವಿ೩   ತಾಲೂಕಿನ ಗಂಗಿಭಾವಿ ಸಿ.ಬಿ. ಯಲಿಗಾರ ಸೇವಾ ಸಂಸ್ಥೆಯ ರೇಸಾರ್ಟನಲ್ಲಿ ಜರುಗಿದ ಪತ್ರಿಕಾ ಗೋಷ್ಠೀಯಲ್ಲಿ  ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡುತ್ತಿರುವದು. | Kannada Prabha

ಸಾರಾಂಶ

ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಆದ್ದರಿಂದ ಉಪಚುನಾವಣೆ ಟಿಕೆಟ್‌ ನನಗೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿ.ಬಿ. ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ಶಿಗ್ಗಾಂವಿ: ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಆದ್ದರಿಂದ ಉಪಚುನಾವಣೆ ಟಿಕೆಟ್‌ ನನಗೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿ.ಬಿ. ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ತಾಲೂಕಿನ ಗಂಗಿಬಾವಿ ಸಿ.ಬಿ. ಯಲಿಗಾರ ಸೇವಾ ಸಂಸ್ಥೆಯ ರೆಸಾರ್ಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಸದ ಬಸವರಾಜ ಬೋಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪಕ್ಷವನ್ನು ಸೇರುವಾಗಲೇ ಅವರು ತಮ್ಮ ಜನಪರವಾದ ಸೇವೆಯ ಜೊತೆಗೆ ರಾಜಕೀಯದಲ್ಲಿ ಸೇವೆಯನ್ನು ಮಾಡಬೇಕು ಎಂದಿದ್ದರು. ಎರಡು ಇಬ್ಬರ ಮೇಲೆ ವಿಶ್ವಾಸವಿದ್ದು, ಟಿಕೆಟ್‌ಗಾಗಿ ಮನವಿ ಮಾಡಿರುವುದಾಗಿ ಹೇಳಿದರು.

ಹಲವಾರು ಜನಪರ ಸೇವೆಯನ್ನು ಮಾಡಿದ್ದನ್ನು ಶಿಗ್ಗಾಂವಿ ಸವಣೂರ ಮತಕ್ಷೇತ್ರದ ಜನತೆಯೂ ಗುರ್ತಿಸಿದ್ದು ಅವುಗಳ ಆಧಾರದಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದು, ನೀಡುವದು ನಮ್ಮ ನಾಯಕರ ಹಾಗೂ ಪಕ್ಷದ ತೀರ್ಮಾನಕ್ಕೆ ಸದಾ ಸಿದ್ಧವಿದ್ದೇನೆ ಎಂದರು.

ಈ ಹಿಂದೆ ಶಿಗ್ಗಾಂವಿ-ಸವಣೂರ ವಿಧಾನಸಭೆಯಲ್ಲಿ ಜೆಡಿಎಸ್‌ದಿಂದ ಸ್ಪರ್ದಿಸಿದ್ದು ೧೫ ಸಾವಿರ ಮತಗಳನ್ನು ಪಡೆದು ಪರಾಭವಗೊಂಡಿದ್ದು ಆದ್ದರಿಂದ ಬಿಜೆಪಿದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

ಭರತ ಬೊಮ್ಮಾಯಿಯವರಿಗೆ ಪಕ್ಷ ಟಿಕೆಟ್‌ ನೀಡಿದರೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವಿರಾ ಎಂದ ಪ್ರಶ್ನೆಗೆ ಭರತ ಬೊಮ್ಮಾಯಿ ಅವರಷ್ಟೇ ಅಲ್ಲ ಯಾರಿಗಾದರೂ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸವನ್ನು ಮಾಡಿ ಬಿಜೆಪಿ ಗೆಲ್ಲಿಸುವುದಾಗಿ ಹೇಳಿದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ ಅಂಗಡಿ, ಬಂಕಾಪುರ ಪುರಸಭೆಯ ಸದಸ್ಯ ರಾಜು ಬಡ್ಡಿ, ಮಾಜಿ ಸದಸ್ಯ ಸೋಮಶೇಖರ ಗೌರಿಮಠ, ಶಶಿಧರ ಹೋಣ್ಣನವರ, ಬಸವರಾಜ ಕುರುಗೋಡಿ ಇದ್ದರು, ಪೊಟೋ ಪೈಲ್ ನೇಮ್ ೧೩ಎಸ್‌ಜಿವಿ೩

ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!