ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಊರಿನ ಭಕ್ತರು ಮೊದಲ ದಿನ ಸೋಮವಾರ ಘಟಪ್ರಭಾ ನದಿಯಲ್ಲಿ ಪವಿತ್ರ ಸ್ಥಾನ ಮಾಡಿ ತಾಯಿಯ ಗುಡಿಯವರೆಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮಂಗಳವಾರ ದೇವಿ ವಿಶೇಷ ಹೂವಿನ ಅಲಂಕಾರ ಮಾಡಿ ದೇವಿಯನ್ನು ಪೂಜಿಸಿ, ನೈವೇದ್ಯ ಅರ್ಪಿಸಿದರು.
ಬುಧವಾರ ಕುಂಭಮೇಳ, ದೇವಿ (ಜಗ )ಪಲ್ಲಕ್ಕಿಯನ್ನು ಸಕಲ ಮಂಗಳವಾದ್ಯಗಳೊಂದಿಗೆ ನದಿವರೆಗೆ ಭವ್ಯ ಮೆರವಣಿಗೆ ಮೂಲಕ ಒಯ್ಯಲಾಯಿತು. ಮೆರವಣಿಯುದ್ದಕ್ಕೂ ಭಕ್ತರು ಭಂಡಾರದ ಮಳೆಗರೆದರು. ನದಿ ತಲುಪಿದ ಬಳಿಕ ಮುತ್ತೈದೆಯರಿಗೆ ಉಡಿ ತುಂಬಿ ಮರಳಿ ದೇವಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಮಹಾಮಂಗಳಾರತಿ, ಬಳಿಕ ಮಹಾಪ್ರಸಾದದೊಂದಿಗೆ ಜಾತ್ರೆ ಸಂಪನ್ನಗೊಂಡಿತು.