ವೈಜಯಂತಿ ಪಂಚಾಂಗ ಸಂಪಾದಕ ಯರ್ಮುಂಜ ಶಂಕರ ಜೋಯಿಸ್‌ ನಿಧನ

KannadaprabhaNewsNetwork |  
Published : Feb 10, 2025, 01:45 AM IST
32 | Kannada Prabha

ಸಾರಾಂಶ

108 ವರ್ಷಗಳ ಇತಿಹಾಸವುಳ್ಳ ‘ವೈಜಯಂತೀ ಪಂಚಾಂಗ’ದ ಸಂಪಾದಕ ಯರ್ಮುಂಜ ಶಂಕರ ಜೋಯಿಸ (72) ಬಂಟ್ವಾಳ ತಾಲೂಕು ಅಂಗರಜೆಯ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಕನ್ನಡಪ್ರಭ ವಾರ್ತೆ ಪುತ್ತೂರು

108 ವರ್ಷಗಳ ಇತಿಹಾಸವುಳ್ಳ ‘ವೈಜಯಂತೀ ಪಂಚಾಂಗ’ದ ಸಂಪಾದಕ ಯರ್ಮುಂಜ ಶಂಕರ ಜೋಯಿಸ (72) ಬಂಟ್ವಾಳ ತಾಲೂಕು ಅಂಗರಜೆಯ ಸ್ವಗೃಹದಲ್ಲಿ ಶನಿವಾರ ನಿಧನರಾದರು.ಯರ್ಮುಂಜ ಭೀಮ ಜೋಯಿಸರ ಪುತ್ರರಾದ ಅವರು ವೈಜಯಂತೀ ಪಂಚಾಂಗದ ಆದ್ಯಪ್ರವರ್ತಕರಾದ ಯರ್ಮುಂಜ ಶಂಕರ ಜೋಯಿಸರ ಮೊಮ್ಮಗ. ಧರ್ಮಶಾಸ್ತ್ರದಲ್ಲಿಯೂ ಇವರ ಪಾಂಡಿತ್ಯ ಅಗಾಧವಾಗಿತ್ತು. ಹಲವು ಜೋತಿಷ ವಿದ್ವತ್ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ವಾಸ್ತುಪ್ರಕಾರ ಅನೇಕ ಗೃಹನಿರ್ಮಾಣಕ್ಕೆ ಮಾರ್ಗದರ್ಶನ ನೀಡಿರುವರು.

ಅವರು ಬೈಲೂರು ಅನಂತಪದ್ಮನಾಭ ತಂತ್ರಿ ಸಂಸ್ಮರಣಾ ಪ್ರಶಸ್ತಿ(2018), ಪೋಳ್ಯ ಲ. ವೆಂ. ಮಠ-ತತ್ತ್ವ ಧರ್ಮ ಸಭಾ-ಸನ್ಮಾನ ಪತ್ರ (2019), ಮಿತ್ತೂರು ಸಂಪ್ರತಿಷ್ಠಾನ- ವಿದ್ವತ್‌ ಪ್ರಶಸ್ತಿ(2019),ಕಿಳಿಂಗಾರು ವಸಿಷ್ಠ ಪ್ರಶಸ್ತಿ 2022 ಮುಂತಾದ ಪ್ರಶಸ್ತಿ ಭಾಜನರು. ಉಡುಪಿಯ ಪುತ್ತಿಗೆ ಮಠದ ಮುಖ್ಯ ಪ್ರಾಣ ಶ್ರೀಕೃಷ್ಣ ಪಂಚಾಂಗಕ್ಕೆ ಗಣಿತ, ಸುಪ್ರಸಿದ್ದ ಶಾರದಾ, ಹೊಸ ದಿಗಂತ, ಬೆಂಗಳೂರು ಮುದ್ರಣಾಲಯ, ಪ್ರಜಾವಾಣಿ ಇತ್ಯಾದಿ ಹತ್ತು ಹಲವು ಕ್ಯಾಲೆಂಡರ್ ಹಾಗೂ ಡೈರಿಗಳಿಗೆ ಸಂಪೂರ್ಣ ಪಂಚಾಂಗ ಮಾಹಿತಿಗಳನ್ನು ನೀಡುತ್ತಿದ್ದರು.

......................

ಜಾಮೀನಿಗೆ ನಕಲಿ ಆಧಾರ್ ನೀಡಿದ ಆರೋಪಿ ಬಂಧನಮೂಡುಬಿದಿರೆ: ಆರೋಪಿಗೆ ನಿರಕ್ಷೇಪಣಾ ಜಾಮೀನು ಪಡೆಯುವ ಸಂದರ್ಭ ನಕಲಿ ಆಧಾರ್ ಕಾರ್ಡ್ ನೀಡಿ ನ್ಯಾಯಾಲಯವನ್ನು ವಂಚಿಸಲು ಯತ್ನಿಸಿದ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಮಂಗಳೂರು ಕಂಕನಾಡಿ ಸುಲ್ತಾನ್‌ಗೋಲ್ಡ್ ಹತ್ತಿರದ ಸಿಟಿ ರೆಸಿಡೆನ್ಸಿ ನಿವಾಸಿ ಮೊಹಮ್ಮದ್ ಶರೀಫ್ ಬಂಧಿತ ಆರೋಪಿ. ಇನ್ನೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ಇರ್ಫಾನ್ ಎಂಬವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಆತನಿಗೆ ನಿರಪೇಕ್ಷಣಾ ಜಾಮೀನು ಪಡೆಯುವ ಸಲುವಾಗಿ ಶಮೀರ್ ಬಷೀರ್ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್, ಬಂಟ್ವಾಳದ ತುಂಬೆ ಗ್ರಾಮದ ಸರ್ವೆ ನಂಬ್ರ 77/10 ಇದರ ನಕಲು ಪಹಣಿ ಪತ್ರ ಹಾಜರುಪಡಿಸಿದ್ದರು. ಮೂಡುಬಿದಿರೆ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕೆ. ಮಧುಕರ್ ಪಿ. ಭಾಗವತ್ ಅವರು ಮೊಹಮ್ಮದ್ ಶರೀಫ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ಅಸ್ಪಷ್ಟ ಉತ್ತರ ನೀಡಿದ್ದು, ಸಂದೇಹಕ್ಕೆ ಕಾರಣವಾಗಿತ್ತು. ಆರೋಪಿಯಿಂದ ಬೇರೆ ಬೇರೆಯಾದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ದೊರೆತ್ತಿದ್ದು, ಈ ಹಿಂದೆಯೂ ಸಹ ನ್ಯಾಯಾಲಯಗಳಿಗೆ ವಂಚನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ.ನ್ಯಾಯಾಲಯದ ಶಿರಸ್ತೇದಾರರಾದ ಪ್ರಸನ್ನ ಬಿ. ಅವರು ನ್ಯಾಯಾಲಯಕ್ಕೆ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ