ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ನೀರಿನ ಮಾದರಿ ಸಂಗ್ರಹ
ಇದನ್ನು ಶುಕ್ರವಾರ ಕನ್ನಡಪ್ರಭ ವಿವರವಾಗಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಮತ್ತು ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ತಂಡ ಸತ್ಯಾಸತ್ಯತೆಯನ್ನು ತಿಳಿಯಲು ಪಟ್ಟಣದ ಅಮರಾವತಿ ಬಡಾವಣೆಯ ಕೆಲ ಮನೆಗಳಿಗೆ ಭೇಟಿ ನೀಡಿ ನೀರನ್ನು ಪರಿಶೀಲನೆ ಮಾಡಿದರು.ಅಲ್ಲದೆ ಯರಗೋಳ್ ನೀರನ್ನು ಸಹ ಬಾಟಲಿಯಲ್ಲಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿ ಬಂದ ಬಳಿಕ ಮುಂದಿನ ಕ್ರಮವಹಿಸುವುದಾಗಿ ತಿಳಿಸಿದರು. ಸೋಮವಾರ ಮತ್ತಷ್ಟು ಬಡಾವಣೆಗಳಿಗೆ ತೆರಳಿ ನಾಗರೀಕರಿಂದ ಯರಗೋಳ್ ನೀರು ಕಂದು ಬಣ್ಣಕ್ಕೆ ಬದಲಾಗುತ್ತಿದೆಯೇ ಇಲ್ಲ ಮತ್ತೇನು ಸಮಸ್ಯೆ ಇದೆ ಎಂಬುದನ್ನು ತಿಳಿಯು ಸಲುವಾಗಿ ಕೋಲಾರದಿಂದ ನಗರ ನೀರು ಸರಬರಾಜು ಇಲಾಖೆಯ ಹಿರಿಯ ಎಂಜಿನಿಯರ್‌ಗಳ ತಂಡ ಬರಲಿದೆ.ಯರಗೋಳ್ ಡ್ಯಾಂಗೆ ಭೇಟಿ
ಆ ತಂಡವು ಯರಗೋಳ್ ನೀರನ್ನು ಶುದ್ದೀಕರಿಸುವ ಕೇಂದ್ರಕ್ಕೂ ತೆರಳಿ ಪರಿಶೀಲನೆ ಮಾಡಲಿದೆ ಎಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಯಲಿದೆ. ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್,ಸಹಾಯಕ ಅಭಿಯಂತರು ಶಿವಕುಮಾರ್,ಅಶೋಕ್,ನಗರಾಭಿವೃದ್ದಿ ಕೋಶ ಯೋಜನ ನಿರ್ದೇಶಕರಾದ ಅಂಬಿಕಾ ಇದ್ದರು.