ರಾಜ್ಯಾದ್ಯಂತ ಯಶ್‌ ಟಾಕ್ಸಿಕ್ ಸಂಭ್ರಮ

KannadaprabhaNewsNetwork |  
Published : Aug 27, 2026, 02:30 AM IST
Toxic

ಸಾರಾಂಶ

ನಟ ಯಶ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ‘ಟಾಕ್ಸಿಕ್’ ಬುಧವಾರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದೆ. ಥಿಯೇಟರ್‌ಗಳ ಮುಂದೆ ಹಾಕಲಾಗಿದ್ದ ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಹೂಮಾಲೆ‌ ಹಾಕಿ, ಆರತಿ ಬೆಳಗಿ, ಕುಂಬಳಕಾಯಿ ಒಡೆದು ಅಭಿಮಾನಿಗಳು ಸಂಭ್ರಮಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು

ಬೆಂಗಳೂರು : ನಟ ಯಶ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಲನಚಿತ್ರ ‘ಟಾಕ್ಸಿಕ್’ ಬುಧವಾರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದೆ.

ಬಹುತೇಕ ಕಡೆಗಳಲ್ಲಿ ಥಿಯೇಟರ್‌ಗಳ ಮುಂದೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದು, ಸಿನೆಮಾ ಟಿಕೆಟ್‌ಗೆ ಮುಗಿಬಿದ್ದ ದೃಶ್ಯ ಕಂಡು ಬಂತು. ಥಿಯೇಟರ್‌ಗಳ ಮುಂದೆ ಹಾಕಲಾಗಿದ್ದ ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಹೂಮಾಲೆ‌ ಹಾಕಿ, ಆರತಿ ಬೆಳಗಿ, ಕುಂಬಳಕಾಯಿ ಒಡೆದು ಅಭಿಮಾನಿಗಳು ಸಂಭ್ರಮಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಮಟೆ ಬಾರಿಸಿ, ಪಟಾಕಿ ಸಿಡಿಸಿ, ಸಂಭ್ರಮ

ಹಾಸನದ ಎಸ್‌ಬಿಜಿ ಮತ್ತು ಗುರು ಚಿತ್ರಮಂದಿರಗಳ ಎದುರು ಅಭಿಮಾನಿಗಳು ತಮಟೆ ಬಾರಿಸಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಪಟಾಕಿ‌ ಸಿಡಿಸಿ, ಕುಂಬಳಕಾಯಿ ಒಡೆದು ಮೊದಲ ಶೋಗೆ ಸ್ವಾಗತ ಕೋರಿದರು. ಕಲಬುರಗಿಯ ಶೆಟ್ಟಿ ಮಲ್ಟಿಪ್ಲೆಕ್ಸ್‌ನಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಶೋ ಆರಂಭವಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಅಭಿಮಾನಿಗಳು ಟಾಕ್ಸಿಕ್‌ ಟೀ ಶರ್ಟ್‌ ಧರಿಸಿ, ಥಿಯೇಟರ್‌ನತ್ತ ಆಗಮಿಸತೊಡಗಿದ್ದರು. ಟಾಕ್ಸಿಕ್‌, ಟಾಕ್ಸಿಕ್‌, ರಾಕಿಭಾಯ್ ಯಶ್ ಎಂದು ಜೈಕಾರ ಕೂಗುತ್ತಿದ್ದರು. ಚಿತ್ರ ಶತದಿನೋತ್ಸವ ಪೂರೈಸಲೆಂದು ಹಾರೈಸಿದರು. ಕೋಲಾರದ ನಾರಾಯಣಿ ಚಿತ್ರಮಂದಿರಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದಿಂದ ಅಲಂಕಾರ ಮಾಡಲಾಗಿತ್ತು. ಹುಬ್ಬಳ್ಳಿಯ ಸುಧಾ-ಅಪ್ಸರಾ ಚಿತ್ರಮಂದಿರಗಳಲ್ಲಿ ಯಶ್ ಕಟೌಟ್‌ಗೆ ಈಡುಗಾಯಿ ಒಡೆದು ಅಭಿಮಾನಿಗಳು ಸಂಭ್ರಮಪಟ್ಟರು.

ಅಭಿಮಾನಿಗಳಿಗೆ ಅನ್ನದಾನ

ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಧಾರವಾಡದ ಸಂಗಮ್‌ ಚಿತ್ರಮಂದಿರಕ್ಕೆ ಅಭಿಮಾನಿಗಳು ಕಾರ್‌ಗಳಲ್ಲೂ ಟಾಕ್ಸಿಕ್‌ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಬಂದಿದ್ದರು. ದಾವಣಗೆರೆಯಲ್ಲಿ ಅಭಿಮಾನಿಯೊಬ್ಬ ಅಪಘಾತದಲ್ಲಿ ಗಾಯವಾದರೂ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಸ್ನೇಹಿತರ ಸಹಾಯದಿಂದ ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮುದ್ದೇನಹಳ್ಳಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ
ನಭದಲ್ಲಿ ಸೂರ್ಯಕಿರಣ್ ಜೆಟ್ ಗಳಿಂದ ಚಮತ್ಕಾರದ ಚಿತ್ತಾರ!