ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಯಶೋಧಮ್ಮ, ಉಪಾಧ್ಯಕ್ಷರಾಗಿ ಎಂ.ಎಲ್.ದಿನೇಶ್ ಆಯ್ಕೆ

KannadaprabhaNewsNetwork |  
Published : Feb 11, 2025, 12:48 AM IST
10ಕೆಎಂಎನ್ ಡಿ15 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ಪುರಸಭೆ ನಡೆದ ಚುನಾವಣೆಯಲ್ಲಿ ಪಟ್ಟಣದ 8ನೇ ವಾರ್ಡ್‌ನ ಸದಸ್ಯೆ ಯಶೋಧಮ್ಮ ಹಾಗೂ 11ನೇ ವಾರ್ಡ್‌ನ ಸದಸ್ಯ ಎಂ.ಎಲ್.ದಿನೇಶ್ ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ ಅವಿರೋಧ ಆಯ್ಕೆ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಯಶೋಧಮ್ಮ, ಉಪಾಧ್ಯಕ್ಷರಾಗಿ ಎಂ.ಎಲ್.ದಿನೇಶ್ ಅವಿರೋಧವಾಗಿ ಆಯ್ಕೆಗೊಂಡರು.

ಸೋಮವಾರ ನಡೆದ ಚುನಾವಣೆಯಲ್ಲಿ ಪಟ್ಟಣದ 8ನೇ ವಾರ್ಡ್‌ನ ಸದಸ್ಯೆ ಯಶೋಧಮ್ಮ ಹಾಗೂ 11ನೇ ವಾರ್ಡ್‌ನ ಸದಸ್ಯ ಎಂ.ಎಲ್.ದಿನೇಶ್ ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ ಘೋಷಿಸಿದರು.

ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್‌ನಿಂದ 12, ಕಾಂಗ್ರೆಸ್ 8, ಪಕ್ಷೇತರ 2 ಹಾಗೂ ಬಿಜೆಪಿ 1 ಸದಸ್ಯರಿದ್ದರು. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲು ಪುನರಾವರ್ತನೆಯಾಗಿತ್ತು.

ಮೀಸಲು ಬದಲಾವಣೆ ಮಾಡುವಂತೆ ಕೆಲ ಸದಸ್ಯರು ನ್ಯಾಯಾಲಯ ಮೆಟ್ಟಿಲೇರಿದ್ದರು. ಅಂತಿಮವಾಗಿ ನ್ಯಾಯಾಲಯ ಪುನರಾವರ್ತನೆಯಾಗಿರುವ ಮೀಸಲನ್ನೇ ಅಂತಿಮಗೊಳಿಸಿತು. ಉಳಿದಿರುವ 9 ತಿಂಗಳ ಅವಧಿಗೆ ಪುರಸಭೆ ಗದ್ದುಗೆ ಅಲಂಕರಿಸಲು ಚುನಾವಣೆ ನಡೆಯಿತು.

ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರನ್ನು ಹೈಜಾಕ್ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ಗುಗೆ ಹಿಡಿಯಿತು. ಈ ಹಿಂದೆ ಜೆಡಿಎಸ್ ಅಧಿಕಾರ ಹಿಡಿಯಲು ಸಹಕರಿಸಿದ್ದ ಜೆಡಿಎಸ್‌ನ ನಿರ್ಮಲಾ ವೇಣುಗೋಪಾಲ್, ಎಂ.ನಂದೀಶ್, ವನಿತಾ, ನರಸಿಂಹೇಗೌಡ ಸೇರಿದಂತೆ ಬಿಜೆಪಿಯ ಪೂರ್ಣಿಮಾ ಪರಮಶಿವ, ಪಕ್ಷೇತರ ಪೂರ್ಣಿಮಾ ಪ್ರಕಾಶ್ ಬದಲಾದ ರಾಜಕೀಯ ಚಿತ್ರಣದಲ್ಲಿ ‘ಕೈ’ ವಶವಾದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ಸ್ಪಷ್ಟ ಬಹುಮತವಿದ್ದರೂ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರವನ್ನು ಕೈ ಚೆಲ್ಲುವ ಮೂಲಕ ‘ಕೈ’ಗೆ ಅಧಿಕಾರ ಬಿಟ್ಟುಕೊಟ್ಟಿತು.ಸಿ.ಎಂ.ಶಿವಕುಮಾರ್‌ಗೆ ಪಿಎಚ್‌.ಡಿ ಪದವಿ

ಕೆ.ಆರ್.ಪೇಟೆ:

ತಾಲೂಕಿನ ಚೀಕನಹಳ್ಳಿಕೊಪ್ಪಲು ಗ್ರಾಮದ ಸರೋಜಮ್ಮ ಮಾದೇಗೌಡ ದಂಪತಿ ಪುತ್ರ ಮಂಡ್ಯದ ಕಾವೇರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಎಂ. ಶಿವಕುಮಾರ್ ಅವರು ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪರ ಮಾರ್ಗದರ್ಶನದಲ್ಲಿ ಎ ಸ್ಟಡಿ ಆನ್ ಎವಾಲುಏಶನ್ ಆಫ್ ಟೂಲ್ ಕ್ಯಾರೆಕ್ಟೀರಿಸ್ಟಿಕ್ಸ್ ಆಫ್ ಕೋಟೆಡ್ ಅಂಡ್ ಅನ್ ಕೋಟೆಡ್ ಕಾರ್ಬೈಡ್ ಟಿಪ್ಪುಡ್ ಇನ್ಸರ್ಟ್ಸ್ ಇನ್ ಮೆಷನಿಂಗ್ ಸ್ಟೀಲ್ ಎಂಬ ಪ್ರಬಂಧ ಮಂಡಿಸಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ 24ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿ ಪಡೆದುಕೊಂಡಿದ್ದಾರೆ.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ