ಯಶವಂತರಾಯಗೌಡರ ಪರಿಸರ ಕಾಳಜಿ ಶ್ಲಾಘನೀಯ

KannadaprabhaNewsNetwork |  
Published : Aug 10, 2025, 02:17 AM IST
ಪರಿಸರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಒಂದು ಕಡೆ ಅಧ್ಯಾತ್ಮ, ಶರಣ ತತ್ವ, ಇನ್ನೊಂದು ಕಡೆ ಪರಿಸರ ಸಂರಕ್ಷಣೆ, ಬೆಳವಣಿಗೆಗೆ ಶ್ರಮಿಸುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪರಿಸರ ಕಾಳಜಿ ಮೆಚ್ಚುವಂತದ್ದು ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಒಂದು ಕಡೆ ಅಧ್ಯಾತ್ಮ, ಶರಣ ತತ್ವ, ಇನ್ನೊಂದು ಕಡೆ ಪರಿಸರ ಸಂರಕ್ಷಣೆ, ಬೆಳವಣಿಗೆಗೆ ಶ್ರಮಿಸುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪರಿಸರ ಕಾಳಜಿ ಮೆಚ್ಚುವಂತದ್ದು ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಸಾವಳಸಂಗ ಅರಣ್ಯ ಪ್ರದೇಶದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನಕ್ಕೆ ಭೇಟಿ ನೀಡಿ ಸ್ಮೃತಿ ವನದಲ್ಲಿ ಸಸಿ ನೆಟ್ಟು ಪ್ರಕೃತಿಯ ಮಡಿಲಲ್ಲಿ ಆಶೀರ್ವಚನ ನೀಡಿದರು. ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಿಸಿ, ವೃಕ್ಷೋಧ್ಯಾನಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರು ನಾಮಕರಣ ಮಾಡಿಸಿದ್ದು ನೋಡಿದರೆ, ಸಂತರು, ಶರಣರು ಹಾಗೂ ಪರಿಸರದ ಮೇಲಿನ ಶಾಸಕರ ಕಾಳಜಿ ಗೊತ್ತಾಗುತ್ತದೆ. ಅಂತಹ ಹೃದಯ ಶ್ರೀಮಂತಿಕೆ ಶಾಸಕರಲ್ಲಿದೆ ಎಂದರು.

ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ನಾವು ಬದುಕಲು ಬೇಕಾದ ಎಲ್ಲವನ್ನು ನಮ್ಮ ಪರಿಸರ ನಮಗೆ ಒದಗಿಸುತ್ತದೆ. ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಲಿ. ಪ್ರಕೃತಿಯು ನಮ್ಮ ಪರಿಸರ ವ್ಯವಸ್ಥೆಯನ್ನು ನಿಖರವಾಗಿ ವಿನ್ಯಾಸಗೊಳಿಸಿದೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಮುಖ್ಯ ಎಂದು ಎಚ್ಚರಿಕೆಯನ್ನು ನೀಡಿದರು.

ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ಬೆಳೆಯುತ್ತದೆ. ಅರಣ್ಯ ಇಲಾಖೆ ಗಿಡ, ಮರ ಬೆಳೆಸುತ್ತಿರುವುದು ಸಂತಸದ ಸಂಗತಿ ಎಂದರು.ಆರ್.ಎಫ್.ಒ ಮಂಜುನಾಥ ಧೂಳೆ ಸೇರಿದಂತೆ ಸಾವಳಸಂಗ, ಇಂಚಗೇರಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ