ಕನ್ನಡಪ್ರಭ ವಾರ್ತೆ ಐಗಳಿ
ಉತ್ತರ ಕರ್ನಾಟಕದ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದಕ್ಕಾಗಿ ಉಚ್ಚಾಟನೆಯನ್ನು ಮರುಪರಿಶೀಲಿಸಲು ಬಿಜೆಪಿ ಕೇಂದ್ರ ನಾಯಕರ ಗಮನ ಸೆಳೆಯಲು ಅಥಣಿ ಮತಕ್ಷೇತ್ರದ ಸಮಸ್ತ ಹಿಂದೂ ಬಾಂಧವರಿಂದ ಬೃಹತ್ ಪ್ರತಿಭಟನೆಯನ್ನು ಏ.1 ರಂದು ಸಂಜೆ 4 ಗಂಟೆಗೆ ಅಥಣಿಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ಮುಖಂಡ ಧರೆಪ್ಪ ಠಕ್ಕಣ್ಣವರ ಮನವಿ ಮಾಡಿದರು.ಸಮೀಪದ ಯಲಿಹಡಲಗಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೃಹತ್ ಪ್ರತಿಭಟನೆಯೂ ಶಿವಾಜಿ ಸರ್ಕಲ್‌ದಿಂದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ವರೆಗೆ ಜರುಗಲಿದೆ. ಅಥಣಿ ಪೂರ್ವಭಾಗದ ಯಲಿಹಡಲಗಿ, ಅಡಹಳ್ಳಿ, ಅಡಹಳ್ಳಟ್ಟಿ, ಕೋಹಳ್ಳಿ, ಕಕಮರಿ, ಕೊಟ್ಟಲಗಿ, ಕನ್ನಾಳ, ತೆಲಸಂಗ, ಝಂಜರವಾಡ, ಶಿರಹಟ್ಟಿ, ಸವದಿ, ನಂದೇಶ್ವರ, ಸತ್ತಿ, ಮಹಿಷವಾಡಗಿ, ಹುಲಬಾಳ ಸೇರಿದಂತೆ ಎಲ್ಲ ಹಳ್ಳಿಗಳಲ್ಲಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಏ.1 ರಂದು ತಾಲೂಕಿನ ಎಲ್ಲ ಹಿಂದೂ ಬಾಂಧವರು, ಯುವಕರು, ಯತ್ನಾಳ ಗೌಡರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಪೂರ್ವಬಾವಿ ಸಭೆ ನಡೆಸಲಾಗುತ್ತಿದೆ. ಉಚ್ಚಾಟನೆಯಿಂದ ಯತ್ನಾಳ್ ಗೌಡರಿಗೆ ಅಷ್ಟೇ ಅನ್ಯಾಯವಲ್ಲ, ಅದು ಪ್ರತಿಯೊಬ್ಬ ಹಿಂದು ಧರ್ಮಿಗೂ, ಯತ್ನಾಳ ಗೌಡರ ಅಭಿಮಾನಿಗಳಿಗೆ ಆದಂತ ಅನ್ಯಾಯವಾಗಿದೆ. ಇವತ್ತು ಈ ಅನ್ಯಾಯವನ್ನು ಪ್ರಶ್ನಿಸದೇ ಇದ್ದರೆ ಮುಂಬರುವ ದಿನಗಳಲ್ಲಿ ಇಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರುವುದು ವಿರಳವಾಗುತ್ತದೆ. ಯತ್ನಾಳ್ ಗೌಡರು ಏನು ಮಾತನಾಡಿದರೂ ಅದು ಎಲ್ಲರ ಹಿತಕ್ಕಾಗಿ ಮಾತನಾಡಿರುತ್ತಾರೆ ಹೊರತು, ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ. ಇಂತಹ ಮಹಾನ್ ವ್ಯಕ್ತಿಗಾಗಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯತ್ನಾಳ್ ಗೌಡರ ಪರವಾಗಿ ನಿಲ್ಲಬೇಕು. ಅವರಿಗೆ ತಮ್ಮ ಭಾಗವಹಿಸುವಿಕೆಯಿಂದ ನ್ಯಾಯ ಒದಗಿಸಬೇಕೆಂದು ಅಥಣಿ ಮತಕ್ಷೇತ್ರದ ಜನತೆಯ ಪ್ರತಿಯೊಬ್ಬರ ಮನೆಯವರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಸತ್ಯಪ್ಪ ಭಾಗೆಣ್ಣವರ, ನಿಶಾಂತ್ ದಳವಾಯಿ, ವೀರೇಂದ್ರ ಕಾಗವಾಡೆ, ಹರೀಶ್ ಶಿರೂರ್, ವಿರಾಜ ಪಾಟೀಲ, ಚೇತನ್ ಪಾಟೀಲ, ವಿವೇಕ್ ಯಲಗುದ್ರಿ, ಅಶೋಕ ಯಲಹಡಗಿ, ಸಂತೋಷ ಗಾಳಿ, ರಾಜು ಬಸಗೌಡರ್, ಅವಿನಾಶ್ ಜಾದವ್ ಸೇರಿದಂತೆ ಉಪಸ್ಥಿತರಿದ್ದರು.