ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ವಿವಿಧ ಅನುದಾನಗಳಡಿ ಪುರಸಭಾ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆಯ 5 ವರ್ಷದ ಆಡಳಿತ ಅವಧಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು, ಈ ಅವಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಜನತೆಗೆ ಉತ್ತಮ ಆಡಳಿತ ನೀಡುವ ಪ್ರಯತ್ನವನ್ನು ಶ್ಲಾಘಿಸುವುದಾಗಿ ತಿಳಿಸಿದ ಅವರು ಪಟ್ಟಣದ ಪ್ರಮುಖ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ ಸಹಿತ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಕುಟುಂಬದ ವತಿಯಿಂದ ಪ್ರತಿಷ್ಠಾಪಿಸಲಾಗಿದೆ ಎಂದರು.ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಟ್ಟಣದ ಸೌಂದರ್ಯ ಹೆಚ್ಚಳಕ್ಕೆ ಕೋಟ್ಯಂತರ ರು. ವೆಚ್ಚದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿ ನಂತರದಲ್ಲಿ ರಸ್ತೆ, ಪೈಪ್‌ಲೈನ್, ಚರಂಡಿ ಮತ್ತಿತರ ವ್ಯವಸ್ಥೆಗೆ ಹೆಚ್ಚುವರಿಯಾಗಿ ಅನುದಾನ ನೀಡಲಾಗಿದ್ದು ಪ್ರತಿ ಮನೆಗೆ ಸಂಪರ್ಕಕ್ಕೆ ಕನಿಷ್ಠ 2 ಸಾವಿರ ರು. ಹೊರೆಯಾಗದಂತೆ ಪುನಃ ಪುರಸಭೆ ಮೂಲಕ ಸಂಪರ್ಕ ನೀಡುವಂತೆ ಸೂಚಿಸಲಾಗಿದೆ ಎಂದರು.
ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್ ವಹಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಬೀದಿಬದಿ 950 ವ್ಯಾಪಾರಿಗಳಿಗೆ 50 ಸಾವಿರ ರು. ಕಿರುಸಾಲದ ಚೆಕ್, ಡಿಜಿಟಲೀಕರಣಕ್ಕೆ ಕ್ಯೂಆರ್ ಕೋಡ್, ವೈಜ್ಞಾನಿಕವಾಗಿ ಹಸಿ, ಒಣ ಕಸ ಬೇರ್ಪಡಿಸುವ 10 ಸಾವಿರ ಮನೆಗೆ ಡಸ್ಟ್‌ಬಿನ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.