ಕನ್ನಡಪ್ರಭ ವಾರ್ತೆಶಿಡ್ಲಘಟ್ಟ: ಮುಂದಿನ ಒಂದು ವರ್ಷದೊಳಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಆಶಾ ಭಾವನೆ ಇದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು. ತಾಲೂಕಿನ ಮೇಲೂರು ಗ್ರಾಮದಲ್ಲಿ ಗಂಗಾದೇವಿ ಕಲ್ಯಾಣ ಮಂಟಪದ, ನೂತನ ಕಟ್ಟಡ ನಿರ್ಮಾಣಕ್ಕೆ ಗುರುವಾರ ಶಿಡ್ಲಘಟ್ಟದ ಶಾಸಕ ಬಿ ಎನ್ ರವಿಕುಮಾರ್ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಯೋಜನೆಗೆ 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 13 ಸಾವಿರ ಕೋಟಿ ವೆಚ್ಚದಲ್ಲಿ ಚಾಲನೆ ನೀಡಿದ್ದರು. ಈಗ 25 ಸಾವಿರ ಕೋಟಿಗೆ ತಲುಪಿದೆ ಎಂದರು. ಶಾಸಕರ ಕಾರ್ಯಕ್ಕೆ ಶ್ಲಾಘನೆ
ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕ ಬಿ. ಎನ್ . ರವಿಕುಮಾರ್ ಅವರೊಂದಿಗೆ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಹಾಗೂ ಅನುದಾನಕ್ಕೆ ಬೇಡಿಕೆ ಸಲ್ಲಿಸುತ್ತೇವೆಂದ ಅವರು, ಶಾಸಕ ಬಿ ಎನ್ ರವಿಕುಮಾರ್ ಈ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ಇನ್ನೂ ಉತ್ತುಂಗಕ್ಕೇರಬೇಕೆಂದರು.ಅನುದಾನ ನೀಡಲು ಮನವಿಶಾಸಕ ಬಿ. ಎನ್. ರವಿಕುಮಾರ್ ಮಾತನಾಡಿ, ಸಚಿವ ಕೆ.ಎಚ್ ಮುನಿಯಪ್ಪ ಲೋಕಸಭಾ ಸಂಸದರಾಗಿ 7 ಬಾರಿ ಆಯ್ಕೆಯಾಗಿದ್ದರು. ಹಿಂದುಳಿದಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ತಾಲೂಕು ಕೇಂದ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿವೆ. ಇದಕ್ಕೆಲ್ಲ ಸಚಿವರ ಆಶೀರ್ವಾದ ಬೇಕು. 2028ಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿ ರೂಪಗೊಳ್ಳುವ ಮುನ್ಸೂಚನೆಗಳು ಕಾಣುತ್ತಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ನೀಡುವಂತೆ ಮಾಡಬೇಕೆಂದು ಮುನಿಯಪ್ಪಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆಜೆ ಗೌಡ ರಾಮಕೃಷ್ಣಪ್ಪ, ಹೆಚ್ ಟಿ ಪ್ರಭು, ಎಂ ಜೆ ಶ್ರೀನಿವಾಸ್, ಬಿ ಸಿ ವೆಂಕಟೇಶಪ್ಪ, ಕರಗಪ್ಪ, ಜಿ ಎಂ ಶಿವಾನಂದ, ಜಿ ಎಂ ನಾಗರಾಜ್, ರಾಮಾಂಜಿನಪ್ಪ, ವಿ ಕೆಂಪಯ್ಯ, ಮಂಜುನಾಥ್, ಮೂರ್ತಿ, ರಾಮ್ ಪ್ರಸಾದ್,ತಾದೂರು ರಘು ಗ್ರಾ ಪಂ ಸದಸ್ಯ ಆರ್ ಎ ಉಮೇಶ್, ಕೆ ಎಸ್ ಮಂಜುನಾಥ್, ಪಿಡಿಓ ಕೆ ವಿ ಶಾರದಾ, ಕೃಷ್ಣಪ್ಪ, ಮತ್ತಿತರರು ಇದ್ದರು.ಸುದ್ದಿ ಚಿತ್ರ ೧ ......ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರವಿಕುಮಾರ್ ಭೂಮಿ ಪೂಜೆ ನೆರವೇರಿಸಿದರು.