ಉತ್ತಮ ಆರೋಗ್ಯಕ್ಕೆ ಯೋಗ, ಧ್ಯಾನ ಅತ್ಯಂತ ಮುಖ್ಯ

KannadaprabhaNewsNetwork |  
Published : Aug 14, 2024, 12:50 AM IST
ಸಿಂದಗಿ | Kannada Prabha

ಸಾರಾಂಶ

ಇಂದಿನ ನಮ್ಮ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯಂತ ಮುಖ್ಯವಾಗಿವೆ ಎಂದು ಸಿಂದಗಿ ಯೋಗೋತ್ಸವ ಸಮಿತಿ ಸದಸ್ಯ ಅಶೋಕ ಅಲ್ಲಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಇಂದಿನ ನಮ್ಮ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯಂತ ಮುಖ್ಯವಾಗಿವೆ ಎಂದು ಸಿಂದಗಿ ಯೋಗೋತ್ಸವ ಸಮಿತಿ ಸದಸ್ಯ ಅಶೋಕ ಅಲ್ಲಾಪೂರ ಹೇಳಿದರು.

ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಅತೀ ಮುಖ್ಯವಾಗಿದೆ. ಆ ಹಿನ್ನೆಲೆಯಲ್ಲಿ ಸಿಂದಗಿಯ ಯೋಗೋತ್ಸವ ಸಮಿತಿ ಪಟ್ಟಣದ ಎಚ್.ಜಿ.ಹೈಸ್ಕೂಲ್‌ ಮೈದಾನದಲ್ಲಿ ಆಗಸ್ಟ್‌ ೧೬ ರಿಂದ ಸೆಪ್ಟಂಬರ್ ೫ ರವರೆಗೆ ಸುಮಾರು ೨೧ ದಿನ ಉಚಿತ ಯೋಗ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಏರ್ಪಡಿಸಿದ್ದಾರೆ. ಸಿಂದಗಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಜನತೆ ಅದರಲ್ಲಿ ಯುವಜನಾಂಗ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಭ್ಯಾಸ ಮಾಡಿದ ನಿರಂಜನಶ್ರೀಗಳಿಂದ ಈ ಕಾರ್ಯಕ್ರಮ ಜರುಗುವುದು. ಪ್ರತಿ ದಿನ ಬೆಳಗ್ಗೆ ೫.೩೦ ಗಂಟೆಯಿಂದ ೬.೩೦ ಗಂಟೆಯವರೆಗೆ ಯೋಗ ಶಿಬಿರ ಮತ್ತು ಪ್ರತಿ ದಿನ ಸಂಜೆ ೭.೦೦ ಗಂಟೆಯಿಂದ ೮.೦೦ ಯವರೆಗೆ ಆಧ್ಯಾತ್ಮಿಕ ಪ್ರವಚನ, ಭಜನೆ ನಡೆಯುವುದು. ಯೋಗ ಶಿಬಿರಕ್ಕೆ ಬರುವ ಜನತೆಗೆ ನೆಲಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ಧ ನೀರು, ಉತ್ತಮ ಬೆಳಕಿನ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ, ಉತ್ತಮ ಧ್ವನಿವರ್ಧಕ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳ ಕಾರ್ಯ ಭರದಿಂದ ಸಾಗಿವೆ ಎಂದು ತಿಳಿಸಿದರು.

ಅಂದು ಬೆಳಗ್ಗೆ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಯೋಗಗುರು ಶ್ರೀನಿರಂಜನ ಶ್ರೀಗಳ ಸಮ್ಮುಖದಲ್ಲಿ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ಯೋಗ ಶಿಬಿರ ಉದ್ಘಾಟನೆ ನೆರವೇರುವುದು. ಅಂದು ಸಂಜೆ ೭.೦೦ ಗಂಟೆಗೆ ಸ್ಥಳೀಯ ಊರಿನಹಿರಿಯ ಮಠದ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಹಾಗೂ ಭೀಮಾಶಂಕರ ಮಠದ ಶ್ರೀದತ್ತ ಯೋಗೀಶ ಶ್ರೀಗಳು, ರಾಂಪೂರ ಆರೂಡ ಮಠದ ನಿತ್ಯಾಂದ ಮಹಾರಾಜರು, ಆದಿಶೇಷ ಸಂಸ್ಥಾನಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಶ್ರೀಗಳು, ಗುರುದೇವಾಶ್ರಮದ ಶಾಂತಗಂಗಾಧರ ಶ್ರೀಗಳ ಸಮ್ಮುಖದಲ್ಲಿ ಪ್ರವಚನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.ಸಿಂದಗಿ ಮತ್ತು ಸುತ್ತ-ಮುತ್ತಲಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಯೋಗೋತ್ಸವ ಸಮಿತಿ ವಿನಂತಿಸಿದೆ. ಗೋಷ್ಠಿಯಲ್ಲಿ ಯೋಗೋತ್ಸವ ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಅರವಿಂದ ಮನಗೂಳಿ, ಬಸವರಾಜ ಕಕ್ಕಳಮೇಲಿ, ಸುರೇಶ ಪೂಜಾರಿ, ಎಂ.ಎಂ.ಹಂಗರಗಿ, ಎಂ.ಎಂ.ಮುಂಡೇವಾಡಗಿ, ಶ್ರೀಶೈಲಗೌಡ ಮಾಗಣಗೇರಿ, ಡಾ.ಮಹಾಂತೇಶ ಹಿರೇಮಠ, ಶಿವಕುಮಾರ ಶಿವಶಿಂಪೀಗೇರ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಬಸವರಾಜ ತಾಳಿಕೋಟಿ, ಸಂಗು ಬಿರಾದಾರ, ಎಂ.ಎ.ಖತೀಬ್‌, ಆನಂದ ಶಾಬಾದಿ, ಭೀಮನಗೌಡ ಬಿರಾದಾರ, ಮುತ್ತು ಪಟ್ಟಣಶೆಟ್ಟಿ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಪ್ರತಿಭಾ ಚಳ್ಳಗಿ, ರಾಜು ನರಗೋದಿ, ಸಿದ್ದಲಿಂಗ ಕಿಣಗಿ, ಸುಭಾಸ ಪಾಟೀಲ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ