ನೇಚರ್ ಎಂದರೆ ಸೆಲೆಬ್ರೇಶನ್’: ಚಂದ್ರಶೇಖರ್

KannadaprabhaNewsNetwork |  
Published : Nov 28, 2026, 02:45 AM IST
ಚಂದ್ರಶೇಖರ್ | Kannada Prabha

ಸಾರಾಂಶ

ಉಜಿರೆ ಶ್ರೀ ಧ ಮಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು 18ರಂದು ಮಾತೃಶ್ರೀ ಡಿ. ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಆಚರಿಸಲಾಯಿತು.

ಬೆಳ್ತಂಗಡಿ: ನೇಚರ್ ಎಂದರೆ ಸೆಲೆಬ್ರೇಶನ್’ , ಪ್ರಕೃತಿಯೊಂದಿಗೆ ಬೆರೆತು ಬದುಕುವುದನ್ನು ಸಂಭ್ರಮವನ್ನಾಗಿ ಸ್ವೀಕರಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ್ ಹೇಳಿದರು.

ಉಜಿರೆ ಶ್ರೀ ಧ ಮಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು 18ರಂದು ಮಾತೃಶ್ರೀ ಡಿ. ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಆಚರಿಸಲಾಯಿತು.

ಬೆಂಗಳೂರಿನ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಸಂಸ್ಥೆಯ ಸಂಶೋಧನೆ ಮತ್ತು ಸಮಗ್ರ ಔಷಧ ವಿಭಾಗದ ಉಪಾಧ್ಯಕ್ಷ ಡಾ. ರಾಘವೇಂದ್ರ ರಾವ್ ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲ ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಡಾ. ಸುಜಾತಾ ಕೆ.ಜೆ. ದಿನಾಚರಣೆಯ ವರದಿ ಮಂಡಿಸಿದರು.

ಮುಖ್ಯ ಅತಿಥಿ ಡಾ. ರಾಘವೇಂದ್ರ ರಾವ್ ವಿಶೇಷ ಉಪನ್ಯಾಸ ನೀಡಿ, ಪ್ರಕೃತಿ ಚಿಕಿತ್ಸೆಯ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು.

ಡಾ. ಬಿಂದು (ಡೀನ್) ಮತ್ತು ಡಾ. ಹರ್ಷಿಣಿ (ಸಹಾಯಕ ಪ್ರಾಧ್ಯಾಪಕರು) ವಂದಿಸಿದರು. ಡಾ. ಅನನ್ಯಾ ಮತ್ತು ಡಾ. ಮನಿರಾಜ್ ಬಿ. ಕಾರ್ಯಕ್ರಮ ನಿರೂಪಿಸಿದರು.

ದಿನಾಚರಣೆಯ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪದವಿ ವಿದ್ಯಾರ್ಥಿಗಳು, ಇಂಟರ್ನ್‌ಗಳು ಮತ್ತು ಸ್ನಾತಕೋತ್ತರ ವಿದ್ವಾಂಸರು ಒಟ್ಟು 35 ಸಮುದಾಯ ಸಂಪರ್ಕ ಶಿಬಿರಗಳನ್ನು ನಡೆಸಿದರು. ಈ ಶಿಬಿರಗಳ ಮೂಲಕ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ನೇಪಾಳದ 593ಕ್ಕೂ ಹೆಚ್ಚು ಜನರನ್ನು ತಲುಪಲಾಯಿತು.

ಉಚಿತ ಆಹಾರ ಸಮಾಲೋಚನೆ, ಪ್ರಕೃತಿ ಚಿಕಿತ್ಸಾ ಸಲಹೆ, ಮನೆಮದ್ದುಗಳು, ವೈಯಕ್ತಿಕ ಯೋಗ ತರಬೇತಿ ಮತ್ತು ಆರೋಗ್ಯ ಶಿಕ್ಷಣ ನೀಡಲಾಯಿತು.

ವಿದ್ಯಾರ್ಥಿಗಳೇ ತಯಾರಿಸಿದ 12 ಮಾದರಿಗಳ ‘ಪ್ರಕೃತಿ’ ಮಾದರಿ ಪ್ರದರ್ಶನದ ಮೂಲಕ ಪ್ರಕೃತಿ ಚಿಕಿತ್ಸಾ ತತ್ವಗಳನ್ನು ವಿವರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಕ್ಕಳು ಮನಸು ಮಾಡಿದರೇ ಯಾವುದೂ ಅಸಾಧ್ಯವಲ್ಲ
ಕಸಾಪ ಸೇವೆಗೆ ತೃಪ್ತಿಯಿದೆ, ಸಂತೃಪ್ತಿಯಿಲ್ಲ