12ನೇ ಶತಮಾನದಲ್ಲಿ ಶಿವಶರಣರಿಗೆ ಬಹಳಷ್ಟು ಅನಾನಕೂಲತೆಗಳಿದ್ದರೂ ಮಾಡುವ ಕಾಯಕ ಹಾಗೂ ದಾಸೋಹಗಳ ಮಹತ್ವಗಳನ್ನು ನಮ್ಮೆಲ್ಲರಿಗೆ ತಿಳಿಸಿ ಹೋಗಿದ್ದಾರೆ. ಇಂತಹ ಕಾಯಕ ಹಾಗೂ ದಾಸೋಹಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕು ಎಂದು ತಾಲೂಕಿನ ಕದಳಿ ಮಹಿಳಾ ವೇದಿಕೆ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
12ನೇ ಶತಮಾನದಲ್ಲಿ ಶಿವಶರಣರಿಗೆ ಬಹಳಷ್ಟು ಅನಾನಕೂಲತೆಗಳಿದ್ದರೂ ಮಾಡುವ ಕಾಯಕ ಹಾಗೂ ದಾಸೋಹಗಳ ಮಹತ್ವಗಳನ್ನು ನಮ್ಮೆಲ್ಲರಿಗೆ ತಿಳಿಸಿ ಹೋಗಿದ್ದಾರೆ. ಇಂತಹ ಕಾಯಕ ಹಾಗೂ ದಾಸೋಹಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕು ಎಂದು ತಾಲೂಕಿನ ಕದಳಿ ಮಹಿಳಾ ವೇದಿಕೆ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಹೇಳಿದರು.ಪಟ್ಟಣದ ಗಿರಿಜಾ ರಮೇಶ ಕಂಠಿಯವರ ಮನೆಯಲ್ಲಿ ಮುದ್ದೇಬಿಹಾಳ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಆಯೋಜಿಸಿರುವ ಹುಣ್ಣಿಮೆಯ ಶರಣ ಬೆಳಗು ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ಕಾಯಕತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ ಮೇದಾರವರು ಸಮಾಜದ ಜನರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಾಮಾಜಿಕ, ಶೈಕ್ಷಣಿಕ ಬದಲಾವಣೆಗಳಿಗೆ ಸೌಲಭ್ಯಗಳನ್ನು ಒದಗಿಸುವಂತ ವ್ಯವಸ್ಥೆಗಳಾಗಬೇಕು ಎಂದು ಆಗ್ರಹಿಸಿದರು.ಶರಣ ಸಾಹಿತ್ಯ ಪರಿಷತ್ನ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ನಾಗರಾಳ ಮಾತನಾಡಿ, ಹೆಣ್ಣು ಮಕ್ಕಳು ಚೆನ್ನಾಗಿದ್ದರೇ ಇಂಥ ಒಂದು ಒಳ್ಳೆ ಯ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ಮೂಡಿ ಬರುತ್ತವೆ. ಇದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕೆಂದರೇ ಮನೆಯ ಹೆಣ್ಮಕ್ಕಳು ಶಾಂತ ರೀತಿಯಿಂದದ್ದರೇ ಎಲ್ಲವೂ ಸರಿಯಾಗಿ ಇರುತ್ತದೆ ಎಂದರು.ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಅನ್ನಪೂರ್ಣ ರುದ್ರೇಶ ಕಿತ್ತೂರ ಶಿವಶರಣ ಮೇದಾರ ಕೇತಯ್ಯನವರ ವಚನಾನುಭವ ಕುರಿತು ಮೇದಾರ ಕೆತಯ್ಯನವರ ಬಗ್ಗೆ ಅವರ ವೃತ್ತಿಯಾದಂತ ಬಿದರು ಕಡೆದು ಬುಟ್ಟಿ ಮಾಡಿ ಮಾರಿ ಬಂದಂತ ಹಣದಿಂದ ದಾಸೋಹ ಮಾಡುವುದರ ಬಗ್ಗೆ ಅನುಭವ ಹಂಚಿಕೊಂಡರು. ಶಿವಶರಣ ಮೇದಾರ ಕೇತಯ್ಯನವರ 896ನೇ ಜಯಂತ್ಯುತ್ಸವ ನಿಮಿತ್ತ ಕೇತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. ಒಂದು ಹೆಣ್ಣು ಮನಸು ಮಾಡಿದರೇ ಏನೆಲ್ಲ ಮಾಡಬಹುದು ಅನ್ನುವುದಕ್ಕೆ ಇಂಥ ಒಳ್ಳೊಳ್ಳೆಯ ಕಾರ್ಯಕ್ರಮ ಬರುವುದೇ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಣ್ಮಕ್ಕಳು ಟಿವಿ ಸೀರಿಯಲ್ಗಳನ್ನು ನೋಡುವುದನ್ನು ಬಿಟ್ಟು ತಮ್ಮ ಜೊತೆ ಮಕ್ಕಳನ್ನು ಕರೆದುಕೊಂಡು ಬರುವುದರಿಂದ ತಮಗೂ ಒಂದು ಒಳ್ಳೆಯ ಸಂದೇಶ, ನೆಮ್ಮದಿ ಸಿಗುತ್ತದೆ ಹಾಗೂ ಮಕ್ಕಳಿಗೂ ಒಳ್ಳೆಯ ಸಂದೇಶ ಸಿಗುತ್ತದೆ. ನಾವು ಇಂಥ ಕಾರ್ಯಕ್ರಮ ಮಾಡಿರುವುದಕ್ಕೂ ಸಾರ್ಥಕವಾಗುತ್ತದೆ.
-ಕಾಶಿಬಾಯಿ ಶಿವಯೋಗಪ್ಪ ರಾಂಪೂರ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಶರಣ ಸಾಹಿತ್ಯ ಪರಿಷತ್ ಮುದ್ದೇಬಿಹಾಳ.