ಬದುಕಿನ ಸನ್ನಡತೆಗೆ ಯೋಗ-ಅಧ್ಯಾತ್ಮ ಸಹಕಾರಿ: ಸ್ವಾಮೀಜಿ

KannadaprabhaNewsNetwork |  
Published : Oct 28, 2026, 01:15 AM IST
ಪೋಟೋ 7 : ಟಿ.ಬೇಗೂರು ಸಮೀಪದ ಬೈರನಹಳ್ಳಿ ಗ್ರಾಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಳಿಂದ ತಾಲೂಕು ಪ್ರವಾಸ, ಗುರುಭಕ್ತಿ ಸಮರ್ಪಣೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ಮನಸ್ಸಿನ ನಿಯಂತ್ರಣದಿಂದ ನಿಗದಿತ ಗುರಿ ತಲುಪಲು ಸಾಧ್ಯ. ಅಂತಹ ಮನಸ್ಸಿನ ನಿಯಂತ್ರಣಕ್ಕೆ ಯೋಗ ಮತ್ತು ಆಧ್ಯಾತ್ಮಿಕ ಸಹಕಾರಿ ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು

ದಾಬಸ್‍ಪೇಟೆ: ಮನಸ್ಸಿನ ನಿಯಂತ್ರಣದಿಂದ ನಿಗದಿತ ಗುರಿ ತಲುಪಲು ಸಾಧ್ಯ. ಅಂತಹ ಮನಸ್ಸಿನ ನಿಯಂತ್ರಣಕ್ಕೆ ಯೋಗ ಮತ್ತು ಆಧ್ಯಾತ್ಮಿಕ ಸಹಕಾರಿ ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಟಿ.ಬೇಗೂರು ಸಮೀಪದ ಬೈರನಹಳ್ಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಳಿಂದ ತಾಲೂಕು ಪ್ರವಾಸ, ಗುರುಭಕ್ತಿ ಸಮರ್ಪಣೆ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,

ಅಧ್ಯಾತ್ಮಕ್ಕೆ ಮನುಷ್ಯನನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿಯಿದೆ. ಯೋಗಕ್ಕೆ ಮನಸ್ಸನ್ನು ನಿಯಂತ್ರಿಸುವ ಶಕ್ತಿಯಿದೆ. ಆದ್ದರಿಂದ ಯೋಗ ಮತ್ತು ಅಧ್ಯಾತ್ಮ ವ್ಯಕ್ತಿಯ ಬದುಕನ್ನು ಉತ್ತಮಗೊಳಿಸಲು ಸಹಕಾರಿಯಾಗಿವೆ. ದೋಣಿ ಮುಂದೆ ಸಾಗಬೇಕಾದರೆ ಕಟ್ಟಿರುವ ಹಗ್ಗವನ್ನು ಬಿಚ್ಚಿ ನಂತರ ಹುಟ್ಟನ್ನು ಹಾಕಬೇಕು. ಇಲ್ಲದಿದ್ದರೆ ಎಲ್ಲ ಶ್ರಮ ವ್ಯರ್ಥವಾಗುತ್ತದೆ. ಹಾಗೆಯೇ ಸಾಧನೆಗೆ ಮುನ್ನ ಮನಸ್ಸು ಶುದ್ಧವಾಗಿರಬೇಕು ಎಂದು ಹೇಳಿದರು.

ಸಮಾಜದಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಸೇವಾ ಮನೋಭಾವ, ಭಕ್ತಿಯ ಮಾರ್ಗ ಸೇರಿದಂತೆ ಜ್ಞಾನ ಎಂಬ 3 ರೀತಿಯ ತತ್ವಗಳನ್ನು ಮೈಗೂಡಿಸಿಕೊಂಡಲ್ಲಿ ಅಧ್ಯಾತ್ಮವಾಗಿ ಸನ್ಮಾರ್ಗ ಲಭಿಸುತ್ತದೆ. ಜತೆಗೆ ಮನಸ್ಸು ಮಲ್ಲಿಗೆಯಂತಿರಬೇಕು. ಮಾತು ಪರಿಮಳದಿಂದ ಕೂಡಿರಬೇಕು. ಮುಖದ ನಗುವಿಗಿಂತ ಮನಸ್ಸಿನ ನಗು ಮುಖ್ಯ ಎಂದು ಹೇಳಿದರು.

ವಿಜ್ಞಾನ ಬೈರವ ಯೋಗ:

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಶಿಕ್ಷಣದ ಜತೆಗೆ ವಿಶೇಷವಾಗಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರತಿಯೊಬ್ಬರು ಯೋಗಾ ಹಾಗೂ ಪ್ರಾಣಾಯಾಮ ಮಾಡಬೇಕು. ಜತೆಗೆ ಶ್ರೀ ಮಠದಿಂದ ವಿಜ್ಞಾನ ಭೈರವ ಯೋಗವನ್ನು ನಡೆಸುತ್ತಿದ್ದು ಅದನ್ನು ಮಾಡುವ ಮೂಲಕ ಉತ್ಸಾಹ ಹಾಗೂ ಆರೋಗ್ಯ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ದಿನದ ಒಂದು ಗಂಟೆಯನ್ನು ಯೋಗಕ್ಕೆ ಮೀಸಲಿಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಬಸವನಹಳ್ಳಿ ಶಿವಾನಂದಾಶ್ರಮದ ಶ್ರೀ ರಾಮಾನಂದನಾಥ ಸ್ವಾಮೀಜಿ, ಡಿವೈಎಸ್ ಪಿ ಉಮಾರಾಣಿ, ಎನ್ ಪಿಎ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಾಗರಾಜು, ನಾರಾಯಣಗೌಡ, ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಸ್.ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸಿ.ಎಂ.ಗೌಡ, ಉದ್ಯಮಿ ಚಿಕ್ಕಹನುಮೇಗೌಡ, ವಕೀಲ ರಘುನಾಥ್, ಪ್ರೇಸ್ ಕ್ಲಬ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಕೋಟ್ರೇಶ್, ತಾಲೂಕು ಅಧ್ಯಕ್ಷ ವಿಜಯ್ ಹೊಸಪಾಳ್ಯ, ಮಾಜಿ ಅಧ್ಯಕ್ಷ ಗಂಗಾಧರ್, ಮುಖಂಡರುಗಳಾದ ಲಕ್ಷ್ಮೀನಾರಾಯಣ್, ಚಂದ್ರಶೇಖರ್, ವೆಂಕಟೇಶ್, ಎಚ್.ಜಿ.ರಾಜು, ವಕೀಲ ನಾರಾಯಣಗೌಡ, ಕೆಂಪರಾಜು, ಮಂಜುನಾಥ್, ಮುನಿರಾಜು, ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ 7 :

ಟಿ.ಬೇಗೂರು ಸಮೀಪದ ಬೈರನಹಳ್ಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಳಿಂದ ತಾಲೂಕು ಪ್ರವಾಸ, ಗುರುಭಕ್ತಿ ಸಮರ್ಪಣೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲು ವಿಫಲ
ಗ್ರಾಮಾಂತರ ಪ್ರದೇಶಗಳಿಗೂ ಸಂಗೀತ, ನೃತ್ಯ ಅಕಾಡೆಮಿ ಕಾರ್ಯಕ್ರಮ ವಿಸ್ತರಣೆ