ಗೋಲ್ಡನ್ ಬುಕ್ ಆಫ್‌ನಲ್ಲಿ ವರ್ಲ್ಡ್ ರೆಕಾರ್ಡ್ ವಿಕಾಸ್‌ಗೆ ಬಿಲ್ಲವ ಸಂಘಟನೆಗಳಿಂದ ಗೌರವಾರ್ಪಣೆ

KannadaprabhaNewsNetwork |  
Published : Oct 08, 2026, 02:45 AM IST
ಗೋಲ್ಡನ್ ಬುಕ್ ಆಫ್‌ನಲ್ಲಿ ವರ್ಲ್ಡ್ ರೆಕಾರ್ಡ್ವಿಕಾಸ್‌ಗೆ ಬಿಲ್ಲವ ಸಂಘಟನೆಗಳಿAದ ಗೌರವಾರ್ಪಣೆ | Kannada Prabha

ಸಾರಾಂಶ

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ಬಾರ್ಯ ಗ್ರಾಮದ ಪಂರ್ದ ಗುತ್ತುವಿನ ವಿಕಾಸ್ ಗೆ ಜಾಗತಿಕ ಬಿಲ್ಲವ ಮಹಾ ಮಂಡಲ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಉಪ್ಪಿನಂಗಡಿ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ಬಾರ್ಯ ಗ್ರಾಮದ ಪಂರ್ದ ಗುತ್ತುವಿನ ವಿಕಾಸ್ ಗೆ ಜಾಗತಿಕ ಬಿಲ್ಲವ ಮಹಾ ಮಂಡಲ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪ೦ರ್ದ ಗುತ್ತು ಕೃಷ್ಣಪ್ಪ ಪೂಜಾರಿ ಹಾಗೂ ಬಾರ್ಯ ಗ್ರಾಮ ಪಂಚಾಯತ್‌ನ ಪಿಡಿಓ ಲೀಲಾ ದಂಪತಿಯ ಪುತ್ರನಾಗಿರುವ ವಿಕಾಸ್ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆಯ ತೃತೀಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಮೂಡುಬಿದ್ರೆ ಕಾಲೇಜಿನಲ್ಲಿ ನಡೆದ ಯೋಗದಲ್ಲಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ದಾಖಲೆಯನ್ನು ಮಾಡಿದ್ದರು. ಗೌರವಾರ್ಪಣೆ ಸಂದರ್ಭ ಜಾಗತಿಕ ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಎಂ., ಗುರು ಚಾರಿಟೇಬಲ್‌ನ ಕೋಶಾಧಿಕಾರಿ ಭಾಸ್ಕರ ಅಮೀನ್, ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ನಿರ್ದೇಶಕಿ ಉಷಾ ಶರತ್ ಬಾರ್ಯ, ಬಾರ್ಯ- ತೆಕ್ಕಾರ್ ಬಿಲ್ಲವ ಸಂಘದ ಅಧ್ಯಕ್ಷ ದಿನೇಶ್ ಸುಣ್ಣಾಜೆ, ತೆಕ್ಕಾರ್ ಸಿಎ ಬ್ಯಾಂಕ್ ಉಪಾಧ್ಯಕ್ಷ ಶೇಖರ ಪೂಜಾರಿ ಆನಳಿಕೆ ಹಾಗೂ ಸಾಧಕನ ಹೆತ್ತವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ
ತಾಪಂ: ಬೆಳಗಾವಿಯಲ್ಲಿ ಮಹಿಳೆಯರಿಗೆ ಸಿಂಹಪಾಲು