ಯೋಗ ಎಂಬ ಶಬ್ದವೇ ಒಂದು ಎಂದರ್ಥ. ಜೋಡಿಸು, ಒಂದಾಗು, ಐಕ್ಯಗೊಳ್ಳು ಎಂಬರ್ಥದ ಯೋಗ. ಆತ್ಮವನ್ನು ಪರಮಾತ್ಮನನೊಂದಿಗೆ ಐಕ್ಯಗೊಳಿಸುವ ವಿದ್ಯೆ ಎಂದರೆ ಯೋಗ. ಇಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಪ್ರಕೃತಿಯ ಸ್ವರೂಪ. ಇಂದು ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ. ತನ್ನಿಮಿತ್ತ ಈ ಲೇಖನ.
‘ಒಂದು ಭೂಮಿ, ಒಂದು ಆರೋಗ್ಯ-ಯೋಗ’ ಅಂತಾರಾಷ್ಟ್ರೀಯ ಯೋಗ ದಿನ ೨೦೨೫ ರ ಘೋಷ ವಾಕ್ಯ.
ಯೋಗ ಎಂಬ ಶಬ್ದವೇ ಒಂದು ಎಂದರ್ಥ. ಜೋಡಿಸು, ಒಂದಾಗು, ಐಕ್ಯಗೊಳ್ಳು ಎಂಬರ್ಥದ ಯೋಗ. ಆತ್ಮವನ್ನು ಪರಮಾತ್ಮನನೊಂದಿಗೆ ಐಕ್ಯಗೊಳಿಸುವ ವಿದ್ಯೆ ಎಂದರೆ ಯೋಗ. ಇಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಪ್ರಕೃತಿಯ ಸ್ವರೂಪ. ಯೋಗ ಸಾಧನೆ ಎಂದರೆ ಪ್ರಕೃತಿಯೊಂದಿಗಿನ ಬದುಕು. ಪ್ರಕೃತಿಯ ನಿಯಮಾನುಸಾರ ಜೀವನ ನಡೆಸಿ, ಪ್ರಕೃತಿಯೊಂದಿಗೆ ಬೆರೆಯುವುದು ಸಾರ್ಥಕ ಜೀವನದ ದ್ಯೇಯ ಇದನ್ನು ಮೋಕ್ಷ ಎಂದು ಅರಿಯಬಹುದು. ಭಾರತದ ಋಷಿ ಪರಂಪರೆ ಜಗತ್ತಿಗೆ ಪರಿಚಯಿಸಿದ ಯೋಗ ವಿದ್ಯೆಯು ವಿಶ್ವಕ್ಕೆ ಪರಿಚಿತವಾಗಿರುವುದು. ಇಂದು ಯೋಗ ದಿನಾಚರಣೆಯಲ್ಲಿ ಜನ ಸಂಭ್ರಮಿಸುವ ರೀತಿಯಲ್ಲಿ ಅದರ ವಿಶಾಲತೆಯನ್ನು ಅರಿಯಬಹುದು. ಇಡೀ ವಿಶ್ವವೇ ಒಂದುಗೂಡಿ ಈ ಭೂಮಿಯಲ್ಲಿ ಯೋಗದ ಅನುಷ್ಠಾನಕ್ಕೆ ತೊಡಗಿಕೊಂಡಿರುವುದನ್ನು ಗಮನಿಸುದಾಗಿ ಯೋಗ ಮುನಿ ಮಹರ್ಷಿ ಪತಂಜಲಿಯವರು ತಮ್ಮ ಪತಂಜಲಿ ಯೋಗ ಸೂತ್ರದಲ್ಲಿ ಉಲ್ಲೇಖಿಸಿದಂತೆ ಯೋಗವು ಯಾವುದೇ ಜಾತಿ, ಕಾಲ, ದೇಶ, ಮಿತಿಗಳಿಗೆ ಸೀಮಿತವಾಗುವುದಿಲ್ಲ. ಇದು ಇಡೀ ಪ್ರಪಂಚಕ್ಕೆ ಹರಡಿ ಮಾನವ ಜೀವಿಯನ್ನು ಒಗ್ಗೂಡಿಸಿ ಇಡೀ ವಿಶ್ವವನ್ನು ಐಕ್ಯಗೊಳಿಸಲು ಪ್ರೇರಕವಾಗುತ್ತದೆ. ಎಂದಿದ್ದಾರೆ. ಇದನ್ನೇ ಒಂದು ಭೂಮಿ ಎಂದು ಅರ್ಥೈಸಿಕೊಳ್ಳಬಹುದು. ಇಂದು ಯೋಗವು ಜಾತಿ, ಮತ, ಧರ್ಮ, ಲಿಂಗ, ಪ್ರಾಯ, ದೇಶ, ಕಾಲದ ಬೇಧವಿಲ್ಲದೆ ಪ್ರಪಂಚಕ್ಕೆ ತಲುಪಿರುವುದು. ಯೋಗದಿಂದ ಆರೋಗ್ಯಕ್ಕೆ ಸಿಕ್ಕ ಪ್ರಯೋಜನ. ಜೀವನ ಸಾರ್ಥಕತೆಯಲ್ಲಿ ಆರೋಗ್ಯದ ಪಾತ್ರ ಮಹತ್ವದಾಗಿದೆ. ದೈಹಿಕ ಆರೋಗ್ಯ ಸಾರ್ಥಕ ಬದುಕಿಗೆ ಇರುವ ರಾಜಮಾರ್ಗ ‘ಶರೀರಂ ಆಧ್ಯಾಂ ಖಲು ಧರ್ಮ ಸಾಧನಂ’ ಮಾನವ ಬದುಕಿನ ಪುಣ್ಯ ಕರ್ಮಗಳು, ಸೇವಾ ವೃತ್ತಿ, ಕರ್ತವ್ಯ, ಸದಾಚಾರ, ಇತ್ಯಾದಿ ಆಚರಣೆ ಮಾಡುವುದಕ್ಕೆ ಶರೀರ ಮಾರ್ಗದಿಂದಲೇ ಸಾಧ್ಯ. ಇಂತಹ ಶರೀರದ ಸ್ವಾಥ್ಯ ಕಾಪಾಡಲು ಯೋಗ ಒಂದು ಉನ್ನತ ಸಾಧನ. ಯೋಗ ವಿದ್ಯೆಯು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾದ ಅಭ್ಯಾಸ ಕ್ರಮವಲ್ಲ. ಯೋಗವು ಮಾನವನ ಸಮಗ್ರ ಆರೋಗ್ಯಕ್ಕೆ ಪ್ರೇರಕವಾದ ಅಭ್ಯಾಸ ಅನುಷ್ಠಾನ ಪದ್ಧತಿ. ಸಮಗ್ರ ಆರೋಗ್ಯವೆಂದರೆ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆದ್ಯಾತ್ಮಿಕ ಸ್ವಸ್ಥತೆ ಹಾಗೂ ರೋಗಗಳಿಂದ ಮುಕ್ತವಾದ ಜೀವನದೊಂದಿಗೆ ಸಾರ್ಥಕ ಬದುಕು ಕಾಣುವುದು.ಚರಕ ಸಂಹಿತೆ ವ್ಯಾಖ್ಯಾನಿಸಿದಂತೆ ಸಮದೋಷಃ, ಸಮಾಗ್ನಿತ್ವ ಸಮಧಾತು ಮಲಕ್ರೀಯಾಃ ಪ್ರಸನ್ನಾತೇಂದ್ರಿಯ ಪ್ರಸನ್ನಾ ಆತ್ಮ, ಇಂದ್ರಿಯಾ, ಮನಃ ಸ್ವಸ್ಥ ಇತ್ಯಭಿಧೀಯತೆ. ಈ ವ್ಯಾಖ್ಯಾನವು ಒಂದು ಆರೋಗ್ಯದ ಸಮಗ್ರ ವಿವರಣೆಯನ್ನು ಒದಗಿಸುತ್ತದೆ. ಒಂದು ಆರೋಗ್ಯವೆಂದರೆ ಪ್ರಸನ್ನವಾದ ಮನಸ್ಸು, ಇಂದ್ರಿಯ, ಆತ್ಮ ಹಾಗೂ ದೇಹದ ಸಮ್ಮಿಲನ ಇಲ್ಲಿ ಸಾಮರಸ್ಯ ಇದ್ದಷ್ಟು ದಿನ ಪೂರ್ಣ ಆರೋಗ್ಯ ಪಡೆಯುವ ಮಾರ್ಗ. ಮನೋ ದೈಹಿಕ ಸಾಮರಸ್ಯದಲ್ಲಿ ವ್ಯತ್ಯಾಸವಾದ ಸಹಜವಾಗಿಯೇ ಮನೋ ದೈಹಿಕ ಕಾಯಿಲೆ ಪ್ರಾರಂಭವಾಗಿ ಅದು ದುಃಖಕ್ಕೆ ಕಾರಣವಾಗುತ್ತದೆ. ಭವಿಷ್ಯತ್ತಿನ ದುಃಖಗಳನ್ನು ದೂರ ಮಾಡಲು ಯೋಗ ವಿದ್ಯೆಯು ಒಂದು ಸಾಧನಾ ಮಾರ್ಗ. ಪಾತಂಜಲ ಯೋಗ ಸೂತ್ರದ ಸಾಧನಾ ಪಾದವು ೧೬ ಶ್ಲೋಕ ಹೇಳುವಂತೆ ಹೇಯಂ ದುಃಖ ಮನೂಗತಮ್ ಹೇಳುವಂತೆ ಬರಲಿರುವ ದುಃಖವನ್ನು ತಪ್ಪಿಸಬಹುದಾಗಿದೆ ಎಂದರ್ಥ.ಪಂಚಭೂತ ಹಾಗೂ ಯೋಗ ಸಾಧನೆ: ಗಾಳಿ, ಬೆಳಕು, ನೀರು, ಆಕಾಶ, ಭೂಮಿ ಎಂಬ ಪಂಚಭೂತಗಳು ಪ್ರಕೃತಿ ನೀಡಿದ ಕೊಡುಗೆ ಜೀವ ಮತ್ತು ಜೀವನಕ್ಕೆ ಈ ಐದು ಮೂಲ. ಪಂಚ ಭೂತಗಳಲ್ಲಿ ಒಂದಾದ ಭೂಮಿ ಸಮಸ್ತ ಜೀವಕ್ಕೆ ಆಶ್ರಯ ನೀಡುವುದು ಇಂತಹ ಭೂಮಿಯ ಮಧ್ಯದಲ್ಲಿ ಯಾವುದೇ ಬೇಧ ಭಾವವಿಲ್ಲದೆ ಜೀವನ ನಡೆಸಿದರೆ ಬದುಕು ಸಾರ್ಥಕ. ದೇಹ, ಉಸಿರು, ಮನಸ್ಸು, ಚಿತ್ತದ ಮಧ್ಯೆ ಸಾಮರಸ್ಯ ಸಾಧಿಸಿ ಆತ್ಮ ಜ್ಞಾನವನ್ನು ಪಡೆದು ತನ್ನಷ್ಟೇ ಶ್ರೇಷ್ಠವಾದ ಪ್ರತಿಯೊಬ್ಬರ ಆತ್ಮವು ಶ್ರೇಷ್ಠವಾದುದ್ದು ಎಂಬ ಜ್ಞಾನವನ್ನು ಅರಿತಾಗ ಈ ಭೂಮಿಯಲ್ಲಿ ಯಾವುದೇ ರೀತಿಯ ದ್ವೇಷಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಆತ್ಮ ಆತ್ಮಗಳ ಸಮ್ಮಿಲನ ಪರಮಾತ್ಮನನ್ನು ಐಕ್ಯವಾಗುವ ಮಾರ್ಗ ಆತ್ಮ ಪರಮಾತ್ಮನ ಒಂದುಗೂಡುವಿಕೆಯೇ ಯೋಗ. ಒಟ್ಟಿನಲ್ಲಿ ಒಂದು ಭೂಮಿ ಒಂದು ಆರೋಗ್ಯ-ಯೋಗ ಎಂಬ ಘೋಷ ವಾಕ್ಯ ಸಮಸ್ತ ಜಗತ್ತನ್ನು ಒಂದಾಗಿಸಲಿ.-ಕುಶಾಲಪ್ಪ ಗೌಡ, ಯೋಗ ಚಿಕಿತ್ಸಕರು/ ಸ್ಥಾಪಕರು,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.