ಕನ್ನಡಪ್ರಭ ವಾರ್ತೆವಿಜಯಪುರ
ಧಾರವಾಡದ ಎಎಸ್‌ಎಇ ವಿಶೇಷ ನೋಡಲ್ ಅಧಿಕಾರಿ ರಾಕೇಶ್ ಸಿಂಧೆ ಅವರು ಭಾಗವಹಿಸಿ, ಅಂತಾರಾಷ್ಟ್ರೀಯ ಯೋಗದ ಪ್ರಾಮುಖ್ಯತೆ ಹಾಗೂ ಈ ವರ್ಷದ ಧ್ಯೇಯವಾಕ್ಯವಾದ "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ " ಎಂಬುವುದರ ಬಗ್ಗೆ ಮಾತನಾಡಿದರು.
ಈ ವಿಶೇಷ ಯೋಗ ದಿನದ ನಿಮಿತ್ತ ವೃತ್ತಿಪರ ಯೋಗ ತರಬೇತುದಾರರಾದ ಸುರೇಶ್ ಆನಂದಿ ಮಾತನಾಡಿ, ಹಿಂದೆ ಖುಷಿ-ಮುನಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದ ಯೋಗವನ್ನು ಈಗ ಪ್ರತಿಯೊಬ್ಬರಲ್ಲೂ ಕಲಿಯುತ್ತಿದ್ದು, ವೈಜ್ಞಾನಿಕವಾಗಿ ಯೋಗದ ಮಹತ್ವ ಸಾಬೀತಾಗಿದೆ. ಯೋಗವು ಒತ್ತಡವನ್ನು ನಿವಾರಿಸಲು ಮತ್ತು ಮಾನಸಿಕ ಶಾಂತಿಯನ್ನು ನೀಡಲು ಅತ್ಯುತ್ತಮ ಔಷಧವಾಗಿದೆ. ದಿನನಿತ್ಯದ ಯೋಗ ಪ್ರದರ್ಶನವು ಹಲವು ಪ್ರಯೋಜನಗಳಿಗೆ ಸಾಕ್ಷಿಯಾಗುತ್ತದೆ. ನಮ್ಮ ಜ್ಞಾನವೃಧ್ದಿ, ಮತ್ತು ಕೆಲಸದ ಕಾರ್ಯಕ್ಕೆ ಉತ್ತಮ ಸಾಧನೆವಾಗುತ್ತದೆ ಎಂದು ಹೇಳಿದರು.ದೈಹಿಕ ಶಿಕ್ಷಕ ಎಸ್.ಎಂ.ಬಿರಾದರ, ಸಹ ಶಿಕ್ಷಕ ಸಂಜೀವ್‌ಕುಮಾರ್, ವಿಜಯಕುಮಾರ್ ತಳವಾರ, ಮುಖ್ಯೋಪಾಧ್ಯಾಯ ಬಿ.ಡಿ. ಬೆಳೆಣೆನವರು, ಸರ್ವೇಕ್ಷಣಾ ಇಲಾಖೆಯ ಎನ್. ಪ್ರಸನ್ನಕುಮಾರ್, ವಿಜಯಕುಮಾರ್, ಆರ್.ಎಂ.ಕರ್ಜಗಿ, ಮನೀಶ್‌ಕುಮಾರ್ ಇದ್ದರು.