ತಾಲೂಕಿನ ವಿವಿಧೆಡೆ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್.ಕೆ.ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಮಾರ್ಗದರ್ಶನದಲ್ಲಿ ಮುಕ್ತ ಯೋಗ ಶಿಬಿರ ಜರುಗಿತು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ವಿವಿಧೆಡೆ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್.ಕೆ.ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಮಾರ್ಗದರ್ಶನದಲ್ಲಿ ಮುಕ್ತ ಯೋಗ ಶಿಬಿರ ಜರುಗಿತು. ಯೋಗ ಶಿಬಿರದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪಟ್ಟಣದ ಹಿರಿಯರು,ಯುವಕರು,ಶಿಕ್ಷಕರು ಭಾಗವಹಿಸಿ ಯೋಗಾಭ್ಯಾಸವನ್ನು ಮಾಡಿ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.
ರಾಣಿ ಚೆನ್ನಮ್ಮ ವಸತಿ ಶಾಲೆ:
ಪಟ್ಟಣದ ಹೊರವಲದಲ್ಲಿರುವ ಕಿತ್ತೂರು ರಾಣೆ ಚೆನ್ನಮ್ಮ ವಸತಿ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.
ಶಾಲೆಯ ದೈಹಿಕ ಶಿಕ್ಷಕ ಎಸ್.ಆರ್.ಬೀರುಣಗಿ ಮಕ್ಕಳಿಗೆ ಯೋಗ ತರಬೇತಿ ನೀಡಿದರು.ಈ ವೇಳೆ ಶಾಲೆಯ ಪ್ರಾಂಶುಪಾಲ್ ಗೋವಿಂದ ವಾಲಿಕಾರ ಮಾತನಾಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಸಂಜೀವ ದಿವಟಗಿ, ಬಿ.ಎಸ್.ಸಜ್ಜನ, ಎಸ್.ಜಿ.ಮೇತ್ರಿ, ಎ.ಎಸ್.ಲಮಾಣಿ, ಎಸ್.ಪಿ,ಕಂಬಾರ ಇದ್ದರು.
ರೋಣಿಹಾಳ:
ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾದ ಅಮೃತ ಸರೋವರ ದಂಡೆ ಮೇಲೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಈ ವೇಳೆ ರೋಣಿಹಾಳ ಗ್ರಾಪಂ ಪಿಡಿಒ ಸುಕನ್ಯಾ ಲಂಬು ಇದ್ದರು.
ಮಸೂತಿ:
ತಾಲೂಕಿನ ಮಸೂತಿ ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೇ ವಿಶ್ವಯೋಗದಿನ ಆಚರಿಸಲಾಯಿತು.
ಶಾಲೆಯ ಸಹ ಶಿಕ್ಷಕ ಜಗದೀಶ ಸಾಲಳ್ಳಿ ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿ.ಎ.ಗೂಗಿಹಾಳ, ಶಿಕ್ಷಕರಾದ ಎಚ್.ಎಸ್.ತಳವಾರ, ಎಮ್.ಎಚ್.ನಾಯಕ, ಎಸ್.ಆಯ್.ಅಮರಖೇಡ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಕೂಡಗಿ ಎನ್.ಟಿ.ಪಿ.ಸಿ:
ತಾಲೂಕಿನ ಎನ್.ಟಿ.ಪಿ.ಸಿ ಕೂಡಗಿಯ ಮಹಾಶಕ್ತಿನಗರದಲ್ಲಿ ಯೋಗದಿನ ಆಚರಿಸಲಾಯಿತು. ಈ ವೇಳೆ ಎನ್.ಟಿ.ಪಿ.ಸಿ.ಯ ಜನರಲ್ ಮ್ಯಾನೇಜರ್ ಬಿದ್ಯಾನಂದ ಝಾ ಮಾತನಾಡಿದರು. ಈ ಸಂದರ್ಭದಲ್ಲಿ ಮಿಥಾಲಿ ಮಹಿಳಾ ಸಮಿತಿಯ ಅಧ್ಯಕ್ಷೆ ಅಂಜು ಝಾ ಹಾಗೂ ಸದಸ್ಯರು, ಮೆಂಟೆನೆನಸ್ ಜಿ.ಎಮ್ ಓ.ಶ್ರೀನಿವಾಸ, ಎ.ಜಿ.ಎಮ್ ಅಚ್.ಆರ್ ಕಲಿಯಾ ಎಸ್,ಮೂರ್ತಿ ಸೇರಿದಂತೆ ಎನ್.ಟಿ.ಪಿ.ಸಿಯ ಎಲ್ಲಾ ಅಧಿಕಾರಿಗಳು,ಡಿ.ಸಿ ಸಿ.ಆಯ್.ಎಸ್.ಎಫ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.