ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದಿಂದ ಆಯೋಜಿಸಿರುವ ‘ರಾಜ್ಯಮಟ್ಟದ ಪ್ರಥಮ ಯೋಗ ಸಮ್ಮೇಳನ-2024’ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು,
ಯೋಗವನ್ನು ಇಂತಿಷ್ಟೆ ವಯಸ್ಸಿನವರೇ ಮಾಡಬೇಕು ಎನ್ನುವ ನಿಯಮವೂ ಇಲ್ಲ. ಕಿರಿಯರಿಂದ ಹಿಡಿದು ವೃದ್ಧರ ತನಕವೂ ಅಭ್ಯಾಸ ಮಾಡಬಹುದು. ಆದರೆ ಆ ವಯೋಮಾನಕ್ಕೆ ತಕ್ಕಂತೆ ಇರುವ ಆಸನಗಳನ್ನು ಮಾಡಬೇಕು. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಮನಸ್ಸಿನ ಏಕಾಗ್ರತೆ ಶಕ್ತಿ ಹೆಚ್ಚುತ್ತದೆ ಎಂದರು.ಭಾರತ ದೇಶದ ದೊಡ್ಡ ಆಸ್ತಿ ಎಂದರೆ ಜನಸಂಖ್ಯೆ. ಇಲ್ಲಿರುವ ಎಲ್ಲರೂ ಆರೋಗ್ಯದಿಂದ ಇದ್ದರೆ ಅದೊಂದು ರೀತಿ ಸಂಪನ್ಮೂಲ. ದೇಶದ ಪ್ರತಿಯೊಬ್ಬರು ಸಶಕ್ತ ಆಸ್ತಿಯಾಗಬೇಕಾದರೇ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯವಂತರಾಗಬೇಕು. ಆಗ ನಮ್ಮ ದೇಶವನ್ನು ಹಿಡಿಯಲು ವಿಶ್ವದ ಯಾವ ಪ್ರಭಾವಶಾಲಿಯಿಂದಲೂ ಸಾಧ್ಯವಾಗುವುದಿಲ್ಲ ಎಂದರು.
ಯೋಗಕ್ಕೆ ಒಂದು ಪರಂಪರೆಯೇ ಇದೆ. ಸ್ವಾಮಿ ವಿವೇಕಾನಂದರು ಷಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಯೋಗದ ಬಗ್ಗೆ ಪರಿಚಯ ಮಾಡಿಸಿದ್ದಾರೆ. ಯೋಗದ ಮುಖಾಂತರ ನಮ್ಮ ದೇಶದ ಭವ್ಯ ಪರಂಪರೆ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ತೋರ್ಪಡಿಸಲು ಸಾಧ್ಯ ಎನ್ನುವುದನ್ನು ಆಗಲೇ ತಿಳಿಸಿಕೊಟ್ಟಿದ್ದಾರೆ ಎಂದರು.
ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಷ್ ಅಧ್ಯಕ್ಷತೆ ವಹಿಸಿದ್ದರು. ಎನ್. ಅನಂತ ಅವರು ರಚಿಸಿರುವ ಮೈಸೂರು ಯೋಗ ಪರಂಪರೆ ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಿಡುಗಡೆ ಮಾಡಿದರು.
ಶಾಲೆಗಳಲ್ಲಿ ಮತ್ತೆ ಯೋಗ ಕಲಿಸಲು ಶಿಕ್ಷಕರ ನೇಮಕ: ದಿನೇಶ್ ಗುಂಡೂರಾವ್
ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಯೋಗವನ್ನು ರೂಢಿಗೊಳಿಸಬೇಕು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಮತ್ತೆ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸಮಾಜದಲ್ಲಿ ಜನರು ಆರೋಗ್ಯವಾಗಿರಬೇಕು ಎನ್ನುವ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಕ್ಷೇಮ ಕೇಂದ್ರಗಳಲ್ಲಿ ಯೋಗಾಭ್ಯಾಾಸ ಮಾಡಲು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಲಾಗಿದೆ. ಇಲ್ಲಿ ಯೋಗ ಶಿಕ್ಷಕರು ಬಂದು ಯೋಗವನ್ನು ಹೇಳಿಕೊಡುತ್ತಾಾರೆ. ಕ್ಷೇಮ ಕೇಂದ್ರದ ಸುತ್ತಮುತ್ತಲಿನ ಜನರು ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಮೈಸೂರಿನ ಕಲಾಮಂದಿರಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ಯೋಗ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷ ಡಾ.ಕೆ.ಎಸ್. ಶಂಕರನಾರಾಯಣ ಜೋಯಿಸ್ ಅವರನ್ನು ಸನ್ಮಾನಿಸಲಾಯಿತು.ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮ್ಮೇಳಾಧ್ಯಕ್ಷ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರನ್ನು ಮುಖ್ಯದ್ವಾರದಿಂದ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಅವರಿಗೆ ಹಾಗೂ ಗಣ್ಯರಿಗೆ ಮಂಗಳವಾಧ್ಯ ಸಮೇತ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಭಾರತೀಯ ಯೋಗಧಾಮದ ವಟುಗಳು ವೇದಘೋಷ ಮೊಳಗಿಸಿದರು.