ಕನಕಗಿರಿ:
ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಸುವರ್ಣಗಿರಿ ಯೋಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗ ರೂಢಿಸಿಕೊಂಡಿರುವ ಮನುಷ್ಯ ರೋಗದಿಂದ ಮುಕ್ತನಾಗುತ್ತಾನೆ. ಯೋಗವಿಲ್ಲದವ ಬದುಕಿನಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಆಲಸ್ಯ, ಸೋಮಾರಿತನ, ಅಸಡ್ಡೆ ಮೂಡುತ್ತದೆ ಎಂದ ಅವರು, ಪರಿಸರವು ತನಗೆ ಏನುಬೇಕೋ ಅದನ್ನು ಮಾತ್ರ ತೆಗೆದುಕೊಳ್ಳುತ್ತದೆಯೋ ಹಾಗೆಯೇ ಮನುಷ್ಯ ಯೋಗದಿಂದ ದೇಹಕ್ಕೆ ಏನು ಬೇಕೋ ಅದನ್ನು ತೆಗೆದುಕೊಳ್ಳುತ್ತಾನೆ. ಯೋಗದಿಂದ ಯಾವ ಅಡ್ಡ ಪರಿಣಾಮವಿಲ್ಲ. ಸೂರ್ಯ ಉದಯಿಸುವ ಮೊದಲೇ ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವಂತೆ ತಿಳಿಸಿದರು.ಸುವರ್ಣಗಿರಿ ಯೋಗ ಟ್ರಸ್ಟ್ ಹಲವು ವರ್ಷಗಳಿಂದ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರಗಳನ್ನು ಹಮ್ಮಿಕೊಂಡು ಅನೇಕರಿಗೆ ಯೋಗದಲ್ಲಿ ಲೀನವಾಗಿಸುವ ಕಾರ್ಯ ಮಾಡುತ್ತಿದೆ. ದೇಶದ ಪರಂಪರೆ, ಸಂಸ್ಕೃತಿ ಪ್ರೇರೇಪಿಸುವ ಯೋಗವನ್ನು ಹಳ್ಳಿ-ಹಳ್ಳಿಗೂ ತಲುಪಿಸುವ ಸತ್ಕಾರ್ಯ ಮಾಡಲಿ ಎಂದರು.
ಈ ವೇಳೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸುವರ್ಣಗಿರಿ ಯೋಗ ಟ್ರಸ್ಟ್ ಅಧ್ಯಕ್ಷ ವಾಗೀಶ ಹಿರೇಮಠ, ಎಪಿಎಂಸಿ ವರ್ತಕರ ಅಧ್ಯಕ್ಷ ಮಹಾಂತೇಶ ಸಜ್ಜನ, ಚಂದ್ರಕಾಂತ ರಾಯ್ಕರ್, ಸಣ್ಣ ಕನಕಪ್ಪ, ಬಸಯ್ಯಸ್ವಾಮಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.