ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವ 2024 ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿರುವ 10 ದಿನಗಳ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರದ 5ನೇ ದಿನವಾದ ಭಾನುವಾರ ಮುಂಜಾನೆ ಯೋಗ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.
ಯೋಗಾಸನ ಮಾಡುವ ಮುನ್ನ ದೇಹವನ್ನು ಶಾಖಗೊಳಿಸಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕೈ ಕಾಲು ಹಿಡಿದುಕೊಳ್ಳುವುದು, ಉಳುಕುವುದು ಇತರ ಸಮಸ್ಯೆ ಉಂಟಾಗುತ್ತವೆ. ಬೆನ್ನು ಹುರಿ ಕ್ರಿಯಾಶೀಲನೆ ಮಾಡುವ ಆಸನ. ಮಕ್ಕಳಂತೆ ಚಂಚಲವಾಗಿರಿ ಚಿಂತೆಗಳನ್ನು ದೂರವಿಡಿ. ಯೋಗ ಮಾಡುವುದರಿಂದ ದೇಹದ ಕಾಂತಿ ಹೆಚ್ಚುವುದು. ಕಾಸ್ಮೆಟಿಕ್, ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದರು.ಮಂಗಾಸನ ಮಾಡುವುದರಿಂದ ಹೃದಯದ ಬಡಿತವು ಸಮತೋಲನ ನಿರ್ವಹಿಸುತ್ತದೆ. ಇದರಿಂದ ಹೃದಯಘಾತ ಸುಳಿಯುವುದಿಲ್ಲ. ವೀರಭದ್ರಾಸನದಿಂದ ದೇಹ ಸದೃಢವಾಗುತ್ತದೆ. ಪ್ರತಿಯೊಬ್ಬರ ಹಸ್ತದಲ್ಲಿ ಕಾಸ್ಮಿಕ್ ಎನರ್ಜಿ ಇರುತ್ತದೆ. ಆ ಶಕ್ತಿಯನ್ನು ಆಹ್ವಾನ ಮುದ್ರೆಯಿಂದ ಆಹ್ವಾನಿಸಿ ಕಾಸ್ಮಿಕ್ ಎನರ್ಜಿಯನ್ನು ಹೆಚ್ಚಿಸಿಕೊಳ್ಳಬಹುದು. ದೇಹದ ಯಾವುದೇ ಭಾಗದಲ್ಲಿ ಹೆಚ್ಚಿನ ನೋವು ಬಂದಾಗ ಎರಡು ಹಸ್ತವನ್ನು ಆ ಜಾಗದಲ್ಲಿ ಸ್ವಲ್ಪ ಹೊತ್ತು ಇರಿಸಿದಾಗ ನೋವು ಉಪಶಮನಗೊಳ್ಳುವುದು. ಅದಕ್ಕೆ ರೇಖಿ ಚಿಕಿತ್ಸೆ ಎಂದು ಕರೆಯುತ್ತಾರೆ ಎಂದು ಹೇಳಿದರು.
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಯೋಗ ನಮ್ಮ ಪ್ರತಿದಿನದ ಭಾಗವಾಗಲಿ. ಬಹುತೇಕ ಎಲ್ಲ ಕಾಯಿಲೆಗೆ ಯೋಗವೇ ಔಷಧಿ. ಆದರೆ ಜಡತ್ವ, ಸೋಮಾರಿತನಕ್ಕೆ ಇಲ್ಲವೆನಿಸುತ್ತದೆ. ಅದನ್ನ ಹೋಗಲಾಡಿಸುವ ಕ್ರಮವೇ ಈ ಯೋಗ ತರಬೇತಿ ಎಂದು ಹೇಳಿದರು.
ಯೋಗಾಸನ ಶಿಬಿರದಲ್ಲಿ ನಗರದ ವಿವಿಧ ಬಡಾವಣೆಗಳ ಯೋಗ ತರಬೇತುದಾರರು, ವಿವಿಧ ಮಠಗಳ ಸ್ವಾಮಿಗಳು, ಸಾರ್ವಜನಿಕರು, ಯೋಗಾಸಕ್ತರು ಭಾಗವಹಿಸಿದ್ದರು.