ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ: ಶಾಸಕ ಬಸನಗೌಡ ಯತ್ನಾಳ

KannadaprabhaNewsNetwork |  
Published : Sep 30, 2024, 01:22 AM IST
ರಾಮದುರ್ಗ ತಾಲೂಕಿನ ಬಟಕುರ್ಕಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಜನತೆಯ ಬೆಂಬಲ ನೋಡಿದ್ರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ ಆಗ್ತೇನೆ. ರಾಜ್ಯದಲ್ಲಿ ಹಿಂದುಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಅವಧಿಯಲ್ಲಿ ಮೇಲು-ಕೀಳು ಎನ್ನುವುದು ಇರೋದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಜನತೆಯ ಬೆಂಬಲ ನೋಡಿದ್ರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ ಆಗ್ತೇನೆ. ರಾಜ್ಯದಲ್ಲಿ ಹಿಂದುಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಅವಧಿಯಲ್ಲಿ ಮೇಲು-ಕೀಳು ಎನ್ನುವುದು ಇರೋದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ಶನಿವಾರ ಸಂಜೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ 60ನೇ ಹಿಂದು ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯಲ್ಲ. ಸಂಗೊಳ್ಳಿ ರಾಯಣ್ಣಗೆ ನಮ್ಮವರೆ ಮೋಸ ಮಾಡಿದ್ದು ಇಂದು ನನಗೂ ನನ್ನ ಜೋಡಿ ಇದ್ದವರೆ ಬೆನ್ನಾಗ ಚೂರಿ ಹಾಕುತ್ತಾರೆ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದ ಅವರು, ರಾಜ್ಯದ ಪೊಲೀಸರನ್ನು ಫ್ರೀಯಾಗಿ ಬಿಟ್ಟರೆ ರಾಜ್ಯದಲ್ಲಿ ಯಾವುದೇ ಗಲಾಟೆ ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಜಾತಿ ಬಿಟ್ಟು ಒಂದಾಗಿ ಬಾಳಿ:

ದೇಶದಲ್ಲಿ ಜಾತಿ ವ್ಯವಸ್ಥೆ ಇರೋವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದಲಿತರಾದ ಅಂಬೇಡ್ಕರ್‌ ಬರೆದಿರುವ ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡಿದ್ದು, ವಾಲ್ಮೀಕಿ ಬರೆದ ರಾಮಯಾಣ, ವೇದವ್ಯಾಸ ಬರೆದ ಮಹಾಭಾರತವನ್ನು ಬ್ರಾಹ್ಮಣರು ಏನೂ ಮಾಡಿಲ್ಲ, ಅವರ ಬಗ್ಗೆ ಟೀಕೆ ಬೇಡ. ದೇವರೆಲ್ಲ ದಲಿತರಲ್ಲಿದ್ದು, ಜಾತಿ ಮಾಡುತ್ತ ಹೋದರೆ ಭವಿಷ್ಯವಿಲ್ಲ, ಎಲ್ಲರೂ ಒಂದಾಗಿ ಬದುಕಿ ಬಾಳುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ದೇಶಭಕ್ತಿ ಇರೋ ಪಕ್ಷಕ್ಕೆ ಮತ ನೀಡಿ:

ವಿಶ್ವದಲ್ಲಿ ಹಿಂದುಗಳಿಗೆ ಇರುವುದು ಭಾರತ ಮಾತ್ರ. ಭಾರತ ಹಾಗೂ ಹಿಂದು ಸುರಕ್ಷಿತವಾಗಿರಲು ಹಿಂದುತ್ವ ಬೆಂಬಲಿಸುವ ರಾಜಕೀಯ ಪಕ್ಷವನ್ನು ಬೆಂಬಲಿಸುವ ಅವಶ್ಯಕತೆ ಇದೆ. ದುಡ್ಡಿಗೆ ಮತ ಮಾರಿಕೊಳ್ಳದೆ ಹಿಂದುತ್ವದ ಬೆಳವಣಿಗೆಗೆ ದೇಶಭಕ್ತಿ ಇರುವ ವ್ಯಕ್ತಿಗಳಿಗೆ ಮತ ನೀಡಬೇಕು. ಇಂದು ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಪರದಾಡಬೇಕಾಗಿದೆ. ಗೋಹತ್ಯೆ ನಿಷೇಧವಾದರೂ ನಿತ್ಯ ಗೋಹತ್ಯೆಗಳು ನಡೆಯುತ್ತಿವೆ. ಇದೆಲ್ಲ ಸರಳವಾಗಿ ನಡೆಯಲು ದೇಶಭಕ್ತರ ರಾಷ್ಟ್ರೀಯ ಪಕ್ಷಕ್ಕೆ ಮತ ನೀಡಬೇಕು. ಹಿಂದುಗಳೆಲ್ಲ ಒಂದಾದರೆ ದೇಶ ಸುಭಿಕ್ಷ ಮತ್ತು ಸುರಕ್ಷಿತವಾಗಿರಲಿದೆ ಎಂದ ಅವರು, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಬಂದಿದ್ರೆ ಇನ್ನುಷ್ಟು ಹಿಂದುಪರ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದವು ಎಂದು ಯತ್ನಾಳ ಹೇಳಿದರು.ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಭವಿಷ್ಯವಿಲ್ಲ. ಕಳೆದ ಬಾರಿ ನನ್ನನ್ನು ಮಂತ್ರಿ ಮಾಡಲಿಲ್ಲ. ಮಂತ್ರಿಯಾದರೆ ಮುಂದೆ ಮುಖ್ಯಮಂತ್ರಿ ಆಗುತ್ತೇನೆಂದು ಮಾಡಲಿಲ್ಲ. ಯಾವುದಕ್ಕೂ ನಾನು ಹೆದರುವವನಲ್ಲ. ಹೊಸ ಅಧ್ಯಾಯ ಪ್ರಾರಂಭಿಸಲು ಕಾಲ ಕೂಡಿ ಬಂದಿದೆ. ತಾವೆಲ್ಲ ಆಶೀರ್ವಾದ ಮಾಡಬೇಕು.

-ಬಸನಗೌಡ ಪಾಟೀಲ ಯತ್ನಾಳ, ಶಾಸಕ ವಿಜಯಪುರ ಕ್ಷೇತ್ರ

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ