ಯೋಗ ಬರೀ ದೈಹಿಕ ಕಸರತ್ತಲ್ಲ: ಕರಬಸಪ್ಪ ಹಂಚಿನಾಳ‍

KannadaprabhaNewsNetwork |  
Published : Jun 23, 2026, 02:45 AM IST
ಯೋಗ ಸಾಧಕರಾದ ಕರಬಸಪ್ಪ ಹಂಚಿನಾಳ, ಅಶೋಕ ಹುಬ್ಬಳ್ಳಿ, ಡಾ. ಡಿ.ಸಿ. ಮಠದ, ಎಸ್.ಟಿ. ಮಾಳಾಪೂರ, ಮಂಜುನಾಥ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ದಿನಕ್ಕೆ 15ರಿಂದ 20 ನಿಮಿಷ ಯೋಗಾಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.

ಮುಂಡರಗಿ: ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ. ಅದು ನಮ್ಮ ಮನಸ್ಸು, ಶರೀರ ಮತ್ತು ಆತ್ಮವನ್ನು ಜೋಡಿಸುವ ಅದ್ಭುತ ಕಲೆ. ಒತ್ತಡದ ಜಗತ್ತಿನಲ್ಲಿ ಅದರಲ್ಲೂ ಮೊಬೈಲ್ ಮತ್ತು ತಂತ್ರಜ್ಞಾನದ ಮಧ್ಯೆ ಬದುಕುತ್ತಿರುವ ವಿದ್ಯಾರ್ಥಿಗಳಿಗೆ ಯೋಗದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಹಿರಿಯ ಯೋಗ ಸಾಧಕ ಕರಬಸಪ್ಪ ಹಂಚಿನಾಳ‍ ತಿಳಿಸಿದರು.

ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಅನ್ಮೋಲ್ ಯೋಗ ಕೇಂದ್ರದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

​ಸರ್ಕಾರಿ ಶಾಲೆಯ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ದಿನಕ್ಕೆ 15ರಿಂದ 20 ನಿಮಿಷ ಯೋಗಾಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ನೆನಪಿನ ಶಕ್ತಿ ಉತ್ತಮಗೊಳ್ಳುತ್ತದೆ ಮತ್ತು ಪರೀಕ್ಷೆಯ ಭಯ ದೂರವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ ಅಶೋಕ ಹುಬ್ಬಳ್ಳಿ, ಡಾ. ಡಿ.ಸಿ. ಮಠದ, ಎಸ್.ಟಿ. ಮಾಳಾಪೂರ, ಮಂಜುನಾಥ ಹಂಚಿನಾಳ ಉಪಸ್ಥಿತರಿದ್ದರು. ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಪಿ.ಆರ್. ಗಾಡದ, ಶಿವಲೀಲಾ ಅಬ್ಬೀಗೇರಿ, ಅಶೋಕ ಕೋಳಿ, ಕೋಟೆಪ್ಪ ಸುಣಗಾರ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಂ.ಆರ್. ಗುಗ್ಗರಿ ಸ್ವಾಗತಿಸಿ, ಬಿ.ಎಚ್. ಹಲವಾಗಲಿ ವಂದಿಸಿದರು. ಕಾರ್ಯಕ್ರಮದ ನಂತರ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಯೋಗದ ವಿವಿಧ ಅಭ್ಯಾಸವನ್ನು ಅತ್ಯಂತ ಶಿಸ್ತಿನಿಂದ ಪ್ರದರ್ಶಿಸಿದರು.ಸಂಭ್ರಮದ ಬ್ರಹ್ಮಾನಂದರ ರಥೋತ್ಸವ

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ರಥವು ಸಂಪೂರ್ಣ ಕನ್ನಡಮಯವಾದ ಬ್ರಹ್ಮಾನಂದರ ರಥೋತ್ಸವನ್ನು ಭಕ್ತರು ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಿದರು.ರಥಕ್ಕೆ 15 ಅಡಿ ಎತ್ತರದ ಬೃಹತ್ ರುದ್ರಾಕ್ಷಿ ಮಾಲೆ ಸೇರಿದಂತೆ ತೇರಿನ ಸುತ್ತ ಕನ್ನಡ ಬಾವುಟಗಳಿಂದ ಅಲಂಕಾರ ಮಾಡಿದ ಕನ್ನಡಾಭಿಮಾನಿಗಳು ರಥವನ್ನು ಎಳೆದು ಧನ್ಯತಾಭಾವ ಸಮರ್ಪಿಸಿದರು.ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಬ್ರಹ್ಮಾನಂದ ಮಹಾರಾಜಕೀ ಜೈ ಎಂಬ ಜಯಘೋಷ ಮೊಳಗಿಸಿದರು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೊರೆಸ್ವಾಮಿ ವಿರಕ್ತಮಠದ ಶಾಂತವೀರೇಶ್ವರ ಪಾಠಶಾಲೆಯ ವಟುಗಳಿಂದ ಪೂಜಾವಿಧಿ- ವಿಧಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಭೈರನಹಟ್ಟಿ ಹಾಗೂ ಸುತ್ತಲಿನ ಹಲವಾರು ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಎಂವಿಟಿಐ ವಿದ್ಯಾರ್ಥಿಗಳ ಸಂಶೋಧನೆ: ‘ನಡಿಗೆಯಿಂದ ವಿದ್ಯುತ್ ಉತ್ಪಾದನೆ’
ಸಂಶೋಧನಾ ಕ್ಷೇತ್ರ ಬಡವಾಗುತ್ತಿದೆ: ಪ್ರೊ. ವಿವೇಕ ರೈ ಕಳವಳ‍