ಯೋಗ ದೇಹದ ಮನಸ್ಸನ್ನು ಸಮನ್ವಯಗೊಳಿಸುವ ಪ್ರಕ್ರಿಯೆ

KannadaprabhaNewsNetwork |  
Published : Oct 18, 2023, 01:02 AM IST
17ಕೆಎಂಎನ್ ಡಿ12,13ಶ್ರೀರಂಗಪಟ್ಟಣದಲ್ಲಿ ದಸರಾ ಅಂಗವಾಗಿ ನಡೆದ ಯೋಗ ಪ್ರದರ್ಶನದಲ್ಲಿ ಶಾಸಕರು, ಅಧಿಕಾರಿಗಳು , ಸಾರ್ವಜನಿಕರು ಯೋಗಭ್ಯಾಸ ನಡೆಸಿದರು. | Kannada Prabha

ಸಾರಾಂಶ

ಯೋಗ ದೇಹದ ಮನಸ್ಸನ್ನು ಸಮನ್ವಯಗೊಳಿಸುವ ಪ್ರಕ್ರಿಯೆ, ನಿತ್ಯ ಯೋಗವು ಮನುಷ್ಯನ ಆರೋಗ್ಯಕ್ಕೆ ದಿವ್ಯ ಔಷಧ

- ಡಾ.ಎಚ್.ಎಲ್.ನಾಗರಾಜು ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಯೋಗವು ಮನುಷ್ಯನ ದೇಹ ಮನಸ್ಸನ್ನು ಸಮನ್ವಯಗೊಳಿಸುವ ಒಂದು ಪ್ರಕ್ರಿಯೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು. ಶ್ರೀರಂಗಪಟ್ಟಣ ದಸರಾ ಎರಡನೇ ದಿನ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಎದುರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ಯೋಗಾಭ್ಯಾಸ ನಡೆಸಿ ಮಾತನಾಡಿದರು. ನಿತ್ಯ ಯೋಗವು ಮನುಷ್ಯನ ಆರೋಗ್ಯಕ್ಕೆ ದಿವ್ಯ ಔಷಧ ಪ್ರಸಾರಣವಾಗಿದೆ. ಭಾರತೀಯರು ಪ್ರಪಂಚಕ್ಕೆ ನೀಡಿದ ಅತ್ಯುತ್ತಮವಾದ ಸಂಶೋದನೆಯಾಗಿದೆ ಎಂದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ನಮ್ಮ ನಿತ್ಯದ ಬದುಕಿನಲ್ಲಿ ಯೋಗಭ್ಯಾಸ ಪ್ರಮುಖವಾಗಿದೆ. ಅದ್ದರಿಂದ ಎಲ್ಲರೂ ಯೋಗಾಭ್ಯಾಸ ಮೂಲಕ ಉತ್ತಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಯೋಗ ಶಾಲೆಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ ನೀಡಿದರು. ಈ ವೇಳೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಾಲ, ಎಎಫ್‌ಐನ ಅಧ್ಯಕ್ಷ ಕಲಾಧರ್, ಶ್ರೀರಂಗಪಟ್ಟಣ ಆಯುಷ್ ವೈದ್ಯಾಧಿಕಾರಿ ವೆಂಕಟೇಶ್, ಯೋಗ ಗುರು ಸತ್ಯನಾರಾಯಣ ಶಾಸ್ತ್ರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಯೋಗ ಪಟುಗಳು ಇದ್ದರು. 17ಕೆಎಂಎನ್ ಡಿ12,13 ಶ್ರೀರಂಗಪಟ್ಟಣದಲ್ಲಿ ದಸರಾ ಅಂಗವಾಗಿ ನಡೆದ ಯೋಗ ಪ್ರದರ್ಶನದಲ್ಲಿ ಶಾಸಕರು, ಅಧಿಕಾರಿಗಳು, ಸಾರ್ವಜನಿಕರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ