ಯೋಗ ನಮ್ಮ ಆರೋಗ್ಯಕ್ಕೆ ಸಂಜೀವಿನಿ: ಟಿ.ಎಸ್.ಅನೂಪ್

KannadaprabhaNewsNetwork |  
Published : Jun 26, 2024, 12:33 AM IST
10ನೇ ಅಂತರ ರಾಷ್ಟ್ರೀಯ ಯೋಗದಿನ ಹಾಗೂ ವಿಶ್ವ ಸಂಗೀತದ  ದಿನ ಕಾಯ೯ಕ್ರಮ | Kannada Prabha

ಸಾರಾಂಶ

ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ. ಯೋಗ ನಮ್ಮ ದೇಶದ ಹೆಮ್ಮೆ, ಆರೋಗ್ಯ ಸಂಜೀವಿನಿ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್.ಅನೂಪ್ ಹೇಳಿದರು. ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಏರ್ಪಡಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗದಿನ ಹಾಗೂ ವಿಶ್ವ ಸಂಗೀತದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

10ನೇ ಅಂತಾರಾಷ್ಟ್ರೀಯ ಯೋಗದಿನ । ವಿಶ್ವ ಸಂಗೀತದ ದಿನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ. ಯೋಗ ನಮ್ಮ ದೇಶದ ಹೆಮ್ಮೆ, ಆರೋಗ್ಯ ಸಂಜೀವಿನಿ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್.ಅನೂಪ್ ಹೇಳಿದರು.

ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಏರ್ಪಡಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗದಿನ ಹಾಗೂ ವಿಶ್ವ ಸಂಗೀತದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗ ಮಾಡುವುದರಿಂದ ತಾಳ್ಮೆ, ಶಾಂತಿ, ನೆಮ್ಮದಿ, ಜ್ಞಾನಾಭಿವೃದ್ಧಿ ಉತ್ತಮ ಬೆಳೆವಣಿಗೆಯನ್ನು ಜೀವನದಲ್ಲಿ ಕಾಣಬಹುದು. ಯೋಗದ ನಿಯಮಿತ ಅಭ್ಯಾಸದಿಂದ ಶಿಸ್ತು ಬದ್ಧ ಮತ್ತು ಸಂತೋಷಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಾನಸಿಕ-ದೈಹಿಕ ಒತ್ತಡವನ್ನು ದೂರ ಮಾಡುತ್ತದೆ. ಯೋಗ ನಮ್ಮ ಭಾರತೀಯ ಸಂಪತ್ತು. ಭವಿಷ್ಯಕ್ಕೆ ಸುಂದರ ಬದುಕನ್ನು ನೀಡಲು ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ, ಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗ, ವಿದ್ಯಾರ್ಥಿಗಳಿಗೆ ಯೋಗ ದೇಹಕ್ಕೆ ಮತ್ತು ಮೆದುಳಿಗ ಹೆಚ್ಚಿನ ಪ್ರಯೋಜನಕಾರಿ. ಸಂಗೀತ ಒಂದು ಸುಂದರ ಲೋಕ ಸೃಷ್ಟಿ ಮಾಡುತ್ತದೆ. ಜೀವನದಲ್ಲಿ ಸಂಗೀತ ಕೇಳದವರೆ ಇಲ್ಲ. ಖುಷಿಯಾಗಲಿ, ದುಃಖವಾಗಲಿ ನಮ್ಮ ಜೊತೆ ಇರುವುದು ಸಂಗೀತ ಮಾತ್ರ, ಮಧುರ ಧ್ವನಿಯಲ್ಲಿ ಕೋಗಿಲೆ ಗಾನ ಕೇಳುವುದೇ ಚೆಂದ ಎಂದು ತಿಳಿಸಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ ಮಾತನಾಡಿ ಎಲ್ಲಿ ಯೋಗ ವಿದೆಯೋ ಅಲ್ಲಿ ಆರೋಗ್ಯ ವಿದೆ. ದೇಹಕ್ಕೆ ಆರೋಗ್ಯ, ಮನಸ್ಸಿಗೆ ಶಾಂತಿ ದೊರಕಲು ಯೋಗ ಮಾಡಬೇಕು. ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು.

ಪೋಷಕರು, ಶಿಕ್ಷಕಿಯರು.ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.--------------

24ಕೆಟಿಆರ್.ಕೆ.3

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ 10ನೇ ಅಂತಾರಾಷ್ಟ್ರೀಯ ಯೋಗದಿನ ಹಾಗೂ ವಿಶ್ವ ಸಂಗೀತ ದಿನ ಕಾರ್ಯಕ್ರಮ ನಡೆಯಿತು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ