ಇಬ್ಬರಿಗೆ ಯೋಗ ರತ್ನ, ಆರು ಮಂದಿಗೆ ಯೋಗಾಚಾರ್ಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Mar 02, 2025, 01:18 AM IST
14 | Kannada Prabha

ಸಾರಾಂಶ

ಗರ್ಭೀಣಿಯರು ಕೂಡ ಯೋಗ ಕಲಿಯಬಹುದು. ಇದರಿಂದ ಸಾಕಷ್ಟು ಅನುಕೂಲತೆಗಳಿವೆ

ಕನ್ನಡಪ್ರಭ ವಾರ್ತೆ ಮೈಸೂರುಇಲ್ಲಿನ ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಶನಿವಾರ ಶ್ರೀ ರಾಮಕೃಷ್ಣ ಪರಮಹಂಸರ 190ನೇ ಜಯಂತಿ ಆಚರಿಸಲಾಯಿತು. ಇಬ್ಬರಿಗೆ ಯೋಗ ರತ್ನ ಹಾಗೂ ಆರು ಮಂದಿಗೆ ಯೋಗಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಣಿ ಸ್ವಾಮಿಗೌಡ ಹಾಗೂ ಎಸ್‌. ಕಾವ್ಯಾ ಅವರಿಗೆ ಯೋಗ ರತ್ನ, ಬಿ.ಜಿ. ವಿಜಯಕುಮಾರ್‌, ಎಸ್‌. ಕಾವ್ಯಾ, ಆನಂದ್‌ ಬಾಳು ಶಿರೋಳ್‌, ಎನ್.ಆರ್‌. ರೂಪಶ್ರೀ, ಎಂ.ಡಿ. ಸ್ವಪ್ನಾ, ವಿ. ಹರಿಪ್ರಸಾದ್‌ ಅವರಿಗೆ ಯೋಗಾಚಾರ್ಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪ್ರದಾನ ಮಾಡಿದರು.ಪ್ರಶಸ್ತಿ ಪುರಸ್ಕೃತರ ಪರವಾಗಿ ರಾಣಿ ಸ್ವಾಮಿಗೌಡ ಮಾತನಾಡಿ, ಯೋಗದಿಂದ ಪಾರ್ಶವಾಯು ಪೀಡಿತನ್ನು ಗುಣಪಡಿಸಬಹುದು ಎಂದು ಹಲವಾರು ನಿದರ್ಶನಗಳ ಸಹಿತ ವಿವರಿಸಿದರು.ಆರ್‌. ಕಾವ್ಯಾ ಮಾತನಾಡಿ, ಗರ್ಭೀಣಿಯರು ಕೂಡ ಯೋಗ ಕಲಿಯಬಹುದು. ಇದರಿಂದ ಸಾಕಷ್ಟು ಅನುಕೂಲತೆಗಳಿವೆ ಎಂದು ತಮ್ಮದೇ ನಿದರ್ಶನ ನೀಡಿದರು. ಪರಮಹಂಸ ಯೋಗ ಮಹಾವಿದ್ಯಾಲಯದ ಸಂಸ್ಥಾಪಕರೂ ಆದ ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪ್ರಕಾಶ್‌ ಮಾತನಾಡಿ, ಇದುವರೆಗೆ 13 ತಂಡಗಳಿಗೆ ಅಂತಾರಾಷ್ಟ್ರೀಯ ಯೋಗ ಶಿಕ್ಷಕ [ಐವೈಟಿ] ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದವರು ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟಾಂಗ ಯೋಗ, ಪವರ್‌ ಯೋಗ, ಗರ್ಭಿಣಿಯರಿಗೆ ಯೋಗ, ಪ್ರಾಣಾಯಾಮ, ಧ್ಯಾನ, ವಿನ್ಯಾಸ ಯೋಗ, ಯೋಗ ಥೆರಪಿ, ಫ್ಯಾಷಿಯಲ್‌ ಯೋಗ, ಹಠ ಯೋಗ, ಮುದ್ರಾ ಯೋಗ, ಆಯುರ್ವೇದ, ಒತ್ತಡ ಮತ್ತು ತೂಕ ನಿರ್ವಹಣೆ ಅಂತರ್‌ ದೃಷ್ಟಿ ವಿದ್ಯೆ ಕಲಿಸಲಾಗುತ್ತಿದೆ ಎಂದರು.ಪರಮಹಂಸ ಯೋಗ ಮಹಾವಿದ್ಯಾಲಯದ ಸಂಯೋಜಕಿ ಆರ್‌. ಭಾವನಾ, ಪ್ರಾಂಶುಪಾಲ ಬಿ.ಜಿ. ವಿಜಯಕುಮಾರ್‌, ನೇಚರ್‌ ಹೀಲಿಂಗ್‌ ಮತ್ತು ಕಲರ್‌ ಥೆರಪಿ ಚಿಕಿತ್ಸಕಿ ಗಾಯಿತ್ರಿ ಅರುಣ್‌, ಮೈಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ಎನ್‌. ಪಶುಪತಿ, ರಾಮಚಂದ್ರನಾಯಕ್‌ ಇದ್ದರು.ಎಸ್, ಕಾವ್ಯಾ ನಿರೂಪಿಸಿದರು. ಆನಂದ್‌ ಶಿರೋಳ್‌ ಸ್ವಾಗತಿಸಿದರು. ಸ್ನಪ್ನಾ ಪ್ರಾರ್ಥಿಸಿದರು. ಪುಟಾಣಿ ಪ್ರಾಧ್ಯಾ ಅಂತರ್‌ದೃಷ್ಟಿ ವಿದ್ಯೆ ಪ್ರದರ್ಶಿಸಿದಳು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ