ಜಿಲ್ಲಾ ಆರೋಗ್ಯಾಧಿಕಾರಿಗಳು ವಿಜಯಪುರ ಇವರಿಂದ ಗುತ್ತಿಗೆ ಆಧಾರದ ಮೇಲೆ ಕೋಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಯೋಗ ಶಿಕ್ಷಣ ತರಬೇತಿ ನೀಡಲು ನೇಮಕಗೊಂಡ ಬಸವನಬಾಗೇವಾಡಿಯ ಯೋಗ ಶಿಕ್ಷಕಿ ಕುಮಾರಿ ಶ್ರೀರಕ್ಷಾ ಉಪಾಧ್ಯೆ ಹಾಗೂ ಅವರ ತಂದೆ ಸಿದ್ಧ ಸಮಾಧಿಯೋಗದ ಆಚಾರ್ಯ ದಯಾಸಾಗರ ಉಪಾಧ್ಯೆ ಇವರಿಂದ ಕೋಲ್ಹಾರದ ಪ್ರಾಥಮಿಕ ಕೇಂದ್ರದ ಆಡಳಿತ ಆರೋಗ್ಯಾಧಿಕಾರಿ ಲಕ್ಷ್ಮೀ ತೆಳ್ಳೂರ ಸೂಚನೆಯ ಮೇರೆಗೆ ಕೋಲ್ಹಾರದ ಆಝಾದ್ ನಗರದಲ್ಲಿನ ಅಂಗನವಾಡಿಯಲ್ಲಿ ಸುಮಾರು ಒಂದುವರೆ ಗಂಟೆಯ ಯೋಗದ ಕುರಿತು ಮಾಹಿತಿ ಮತ್ತು ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನಗಳ ಕುರಿತು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಜಿಲ್ಲಾ ಆರೋಗ್ಯಾಧಿಕಾರಿಗಳು ವಿಜಯಪುರ ಇವರಿಂದ ಗುತ್ತಿಗೆ ಆಧಾರದ ಮೇಲೆ ಕೋಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಯೋಗ ಶಿಕ್ಷಣ ತರಬೇತಿ ನೀಡಲು ನೇಮಕಗೊಂಡ ಬಸವನಬಾಗೇವಾಡಿಯ ಯೋಗ ಶಿಕ್ಷಕಿ ಕುಮಾರಿ ಶ್ರೀರಕ್ಷಾ ಉಪಾಧ್ಯೆ ಹಾಗೂ ಅವರ ತಂದೆ ಸಿದ್ಧ ಸಮಾಧಿಯೋಗದ ಆಚಾರ್ಯ ದಯಾಸಾಗರ ಉಪಾಧ್ಯೆ ಇವರಿಂದ ಕೋಲ್ಹಾರದ ಪ್ರಾಥಮಿಕ ಕೇಂದ್ರದ ಆಡಳಿತ ಆರೋಗ್ಯಾಧಿಕಾರಿ ಲಕ್ಷ್ಮೀ ತೆಳ್ಳೂರ ಸೂಚನೆಯ ಮೇರೆಗೆ ಕೋಲ್ಹಾರದ ಆಝಾದ್ ನಗರದಲ್ಲಿನ ಅಂಗನವಾಡಿಯಲ್ಲಿ ಸುಮಾರು ಒಂದುವರೆ ಗಂಟೆಯ ಯೋಗದ ಕುರಿತು ಮಾಹಿತಿ ಮತ್ತು ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನಗಳ ಕುರಿತು ಮಾಹಿತಿ ನೀಡಿ ಅವುಗಳನ್ನು ಪ್ರತಿದಿನ ಸಾಧನೆ ಮಾಡುತ್ತಾ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆಗುವ ಲಾಭ, ಸದಾ ಆರೋಗ್ಯವಾಗಿರಲು ಯಾವ ರೀತಿ ನಾವು ಅಳವಡಿಸಿಕೊಂಡರೆ ಸಾಧ್ಯ ಎನ್ನುವ ಕುರಿತು ಸಂಪೂರ್ಣ ವಿವರಣೆ ನೀಡಿದರು. ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಿದರು. ನಾವು ಸಂಪೂರ್ಣ ಆರೋಗ್ಯದಿಂದ ಇರಲು ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇತರೆ ಕಾಯಿಲೆಗಳಿಂದ ದೂರವಿರಲು ಹಾಗೂ ಬೆನ್ನುನೋವು, ಸೊಂಟ ನೋವುಗಳ ನಿವಾರಣೆಗೆ ಮಾಡುವ ಯೋಗಾಭ್ಯಾಸ ಹಾಗೂ ಪ್ರಾಣಾಯಾಮ ಕುರಿತು ಮಾಹಿತಿ ನೀಡಿ ಎಲ್ಲರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ ಇವುಗಳನ್ನು ಮಾಡಿಸಿದರು. ಎಲ್ಲ ಮುಸ್ಲಿಂ ಮಹಿಳೆಯರು ಅಭೂತಪೂರ್ವವಾಗಿ ಸ್ಪಂದಿಸಿ, ಪ್ರಭಾವಿತರಾಗಿ ಯೋಗಾಸನ, ಪ್ರಾಣಾಯಾಮ, ಧ್ಯಾನದ ಸಾಧನೆಗಳನ್ನು ಪ್ರತಿದಿನ ಮಾಡುವುದಾಗಿ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಅಶೋಕ ಎಸ್.ಕೊಲ್ಹಾರ, ಲಕ್ಷ್ಮಣ ಕಟಗಿ, ಸುಧಾ ಚವ್ಹಾಣ ಹಾಗೂ ಆಶಾ ಕಾರ್ಯಕರ್ತೆಯರಾದ ರಿಯಾನ್ ಶಿವಣಗಿ, ಶಿವಲೀಲಾ ಹುಲ್ಯಾಳ, ಹುಸೇನ್ ಬೈಗಂಪಲ್ಲಿ ಯೋಗ ತರಬೇತಿಯಲ್ಲಿ ಪಾಲ್ಗೊಂಡು ತರಬೇತಿಯ ನಂತರ ಕುಷ್ಠರೋಗ ಜಾಗೃತಿ ಅಭಿಯಾನ ಕೈಕೊಂಡು ಕುಷ್ಠರೋಗದ ಕುರಿತು ವಿವರ ಮಾಹಿತಿ ನೀಡಿ ಅದರ ಆರಂಭ ಹಾಗೂ ಚಿಕಿತ್ಸೆಯ ಕುರಿತು ವಿವರವಾಗಿ ಮಾಹಿತಿ ನೀಡಿದರು.
04ಕೆ ಎಲ್‌ಆರ್ 02
ಕೊಲ್ಹಾರ ಪಟ್ಟಣದ ಆಝಾದ್ ನಗರದ ಅಂಗನವಾಡಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಯೋಗ ತರಬೇತಿಯನ್ನು ಶಿಕ್ಷಕಿ ಕುಮಾರಿ ಶ್ರೀರಕ್ಷಾ ಉಪಾಧ್ಯೆ ಹಾಗೂ ಸಿದ್ಧ ಸಮಾಧಿಯೋಗದ ಆಚಾರ್ಯ ದಯಾಸಾಗರ ಉಪಾಧ್ಯೆ ನೀಡುತ್ತಿರುವುದು. ಪ್ರಾಥಮಿಕ ಆರೋಗ್ಯ ಕೇಂದ್ರದ ಅಶೋಕ ಎಸ್.ಕೊಲ್ಹಾರ, ಲಕ್ಷ್ಮಣ ಕಟಗಿ, ಸುಧಾ ಚವ್ಹಾಣ ಹಾಗೂ ಆಶಾ ಕಾರ್ಯಕರ್ತೆಯರಾದ ರಿಯಾನ್ ಶಿವಣಗಿ, ಶಿವಲೀಲಾ ಹುಲ್ಯಾಳ, ಹುಸೇನ್ ಬೈಗಂಪಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.