ಕನ್ನಡಪ್ರಭ ವಾರ್ತೆ ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯನ್ನು ತಾಲೂಕಿನ ಬುರಣಾಪುರ ಆರೂಢಾಶ್ರಮದ ಮಾತಾಶ್ರೀ ಯೋಗೇಶ್ವರಿ ಮಾತಾಜಿ ಖಂಡಿಸಿದ್ದಾರೆ. ಕಾಲೇಜಿಗೆ ನುಗ್ಗಿ ಇಷ್ಟೊಂದು ಅಮಾನುಷವಾಗಿ ಚುಚ್ಚಿ ಕೊಲೆ ಮಾಡುತ್ತಾರೆ ಎಂದರೆ ಅವರ ಮನಸು ಎಷ್ಟು ಹೇಯವಾಗಿರಬೇಕು? ಅವರು ಮನುಷ್ಯರೋ ಅಥವಾ ರಾಕ್ಷಸರೊ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಕ್ರೂರಿಗಳಿಗೆ ಕಠಿಣ ಶಿಕ್ಷೆ ಒದಗಿಸುವಂತಹ ಕಾನೂನು ಬರಬೇಕಿದೆ. ಅಂದಾಗ ಮಾತ್ರ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಲಿದೆ. ಇನ್ನು ತಂದೆ-ತಾಯಿ ಆದವರು ತಮ್ಮ ಒತ್ತಡದ ಜೀವನದಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು ಅವರಿಗೆ ಸಂಸ್ಕಾರ ಕೊಡುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಗವಾಯಿಗಳಾದ ರಾಜು ಗುಬ್ಬೇವಾಡ, ತಬಲಾ ವಾದಕ ಯಲ್ಲಾಲಿಂಗ ಹೂಗಾರ, ಸಮಸ್ತ ರಂಭಾಪುರದ ಜನತೆ ಹಾಗೂ ಸಕಲ ಸದ್ಭಕ್ತರು ಪ್ರವಚನದಲ್ಲಿ ಭಾವಹಿಸಿದ್ದರು.