ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶಾಂತಾ ವಿದ್ಯಾನಿಕೇತನದಲ್ಲಿ ಗುರುವಾರ ಬುದ್ಧ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಬುದ್ಧ ಸ್ಮರಣೆ ಕಾರ್ಯಕ್ರಮದಲ್ಲಿ ಬುದ್ದನ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಗೌತಮ ಬುದ್ಧ ಏಷ್ಯಾದ ಬೆಳಕೆನಿಸಿ ಜಗತ್ತಿಗೆ ಜ್ಞಾನ, ವೈಚಾರಿಕತೆ, ಕಾರುಣ್ಯ ಹಾಗೂ ತಾಯ್ತತನದ ಸಂದೇಶ ನೀಡಿದ ಮನುಕುಲದ ಗುರು ಎಂದರು. ಎಲ್ಲವನ್ನೂ ತ್ಯಜಿಸಿದ ರಾಜಕುಮಾರ
ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಅರಮನೆಯಲ್ಲಿ ಹುಟ್ಟಿಬೆಳೆದ ಬುದ್ಧನು ಜಗತ್ತಿನ ದುಖಃಕ್ಕೆ ಪರಿಹಾರ ಹುಡುಕುವ ಸಂಕಲ್ಪದಿಂದ ತನ್ನ ರಾಜ್ಯ, ಮನೆ, ಮಡದಿ ಮಕ್ಕಳು ಸರ್ವಸ್ವವನ್ನು ತ್ಯಾಜಿಸಿ ದೇಶ ಸುತ್ತಿ ಸತ್ಯವನ್ನು ಕಂಡುಕೊಂಡು ಬುದ್ಧನಾಗುತ್ತಾನೆ. ಬುದ್ಧನೆಂದರೆ ಜ್ಞಾನೋದಯ ಕಂಡವನು ಎಂದರ್ಥ. ಆಸೆಯೇ ದುಖಃಕ್ಕೆ ಕಾರಣ, ಆಸೆಯನ್ನು ಮಿತಿಗೊಳಿಸುವುದರಿಂದ ಮನುಷ್ಯ ನೆಮ್ಮದಿ ಕಾಣಬಹುದು. ಇದರಿಂದಾಗಿ ಹಂತಹಂತವಾಗಿ ಇಡೀ ಸಮಾಜ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.ಸೌಹಾರ್ದದಿಂದ ಬಾಳಬೇಕು
ಬುದ್ಧನ ತತ್ವ ಮತ್ತು ವಿಚಾರಗಳು ಜಗತ್ತಿನ ಹಲವು ದೇಶಗಳಲ್ಲಿ ಮಾನ್ಯತೆ ಹೊಂದಿದ್ದು ಅವರ ವಿಚಾರಗಳು ಯಾವುದೇ ಧರ್ಮ ಅಥವಾ ತತ್ವ ಆಚರಣೆಗೆ ವಿರುದ್ಧವಾಗಿರದೆ ಮನುಷ್ಯ ಜೀವನದ ಪರವಾಗಿರುವುದರಿಂದ ಬುದ್ಧನ ಜೀವನ ತತ್ವಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳುವ ಮೂಲಕ ಮಾನವಿಯತೆ ನೆಲೆಯ ಸಮಸಮಾಜ ನಿರ್ಮಾಣಕ್ಕೆ ನಾವೆಲ್ಲರು ಒಂದು ಹನಿಯಷ್ಟು ಕೊಡುಗೆ ನೀಡಿ ನಮ್ಮ ಬದುಕಿನ ಧನ್ಯತೆಗೆ ಮುಂದಾಗೋಣ ಎಂಬ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಶಾಂತಾ ವಿದ್ಯಾನಿಕೇತನದ ಉಪಪ್ರಾಂಶುಪಾಲೆ ಕಲ್ಯಾಣಿ, ಆಡಳಿತಾಧಿಕಾರಿ ಕೆನೆಥ್, ಅಧ್ಯಾಪಕರಾದ ಅಂಬಿಕಾ, ರಾಧ, ರಂಗರಾಜನ್, ಕಲೀಂ ಉಲ್ಲಾ, ಲವಕುಮಾರ್, ಸಂದೇಶ್, ರಾಜೇಶ್, ಶಿವು ಮತ್ತು ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿಗಳು ಇದ್ದರು.