ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಜೆಎಸ್ಎಸ್ ಮಹಿಳಾ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಬಸವ ಸೇವಾ ಪತ್ತಿನ ಸಂಘ, ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಅಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಹೆಚ್ಚಿನ ರೀತಿ ಆಗಬೇಕು, ಈ ನಿಟ್ಟಿನಲ್ಲಿ ಲಿಂಗಾಯತ ನೌಕರರ ಸಂಘ, ಬಸವ ಸೇವಾ ಸಂಘ ಮುಂದಾಗಿರುವುದು ಶ್ಲಾಘನೀಯ ವಿಚಾರ, ಅಲ್ಲದೆ ನಿವೃತ್ತರನ್ನು ಗೌರವಿಸಿರುವುದು ಬಹಳ ಸಂತಸದ ವಿಷಯವಾಗಿದೆ. ಪ್ರತಿಭಾ ಪುರಸ್ಕೃತಗೊಂಡ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಸಾಧನೆಮಾಡುವ ಮೂಲಕ ಸಾಥಕ ಜೀವನ ನಡೆಸಿ, ತಂದೆ, ತಾಯಿಗಳನ್ನು, ಹಿರಿಯರನ್ನು ಗೌರವಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ಮಾತನಾಡಿ, ಸಮಾಜದ ಪ್ರತಿಭಾವಂತಹ ಮಕ್ಕಳನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವ ಈ ಸಂಘಟನೆ ಕೆಲಸ ಶ್ಲಾಘನೀಯ, ಇಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ಸ್ಪಂದಿಸಿದ ಪೋಷಕರು ಶ್ರಮ ಸ್ಮರಣೀಯವಾದುದು ಎಂದರು.
ಈ ವೇಳೆ ಸಂಸ್ಕೃತ ವಿದ್ವಾನ್, ಹಿರಿಯ ಶಿಕ್ಷಕರಾದ ಪರಶಿವಮೂರ್ತಿ ಅವರಿಗೆ ಸದಾಶಿವ ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ 20ಕ್ಕೂ ಅಧಿಕನಿವೃತ್ತ ಶಿಕ್ಷಕರು, 90ಕ್ಕೂ ಅಧಿಕ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಆದರ್ಶ ಶಾಲೆಯ ಕನ್ನಡ ಶಿಕ್ಷಕರಾದ ಪ್ರದೀಪ್ ಕುಮಾರ್, ನಾಗಮಲ್ಲೇಶ್, ಯರಿಯೂರು ಸರ್ಕಾರಿ ಶಾಲೆಯ ಪೊನ್ನಾಚಿ ಜಯಪ್ರಕಾಶ್, ಮಹಾಲಿಂಗನಕಟ್ಟೆ ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.