ದಾವಣಗೆರೆ: ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆಯನ್ನು ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ಉಪನ್ಯಾಸಕ ಡಿ.ಅಂಜಿನಪ್ಪ ಹೇಳಿದರು.
ವಿದ್ಯಾರ್ಥಿಗಳು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಿರಿ. ಪದವಿ ಮುಗಿದ ನಂತರ ನಿಮಗೆ ಮುಂದೆ ಸಾಕಷ್ಟು ಅವಕಾಶಗಳಿವೆ. ಅವುಗಳ ಸದುಪಯೋಗಪಡೆದುಕೊಳ್ಳಿ. ನಿಮಗೆ ನೀವೇ ದಾರಿದೀಪವಾಗಿ, ಸಮಾಜಕ್ಕೆ ಮಾರ್ಗದರ್ಶಕರಾಗಿ ಎಂದರು.
ಕಾಲೇಜಿನ ಎಂ.ಡಿ.ಅಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲ ಬರುತ್ತವೆ, ಹೋಗುತ್ತವೆ. ಅದನ್ನು ಸ್ವೀಕರಿಸಿ ಮುಂದೆ ಹೋಗುವುದೇ ಜೀವನ. ಶೈಕ್ಷಣಿಕ ಅವಧಿಯಲ್ಲಿ ನೀವು ಕಲಿತ ಕಲಿಕೆಯ ಮೇಲೆ ನಿಮ್ಮ ಜೀವನ ನಿರ್ಧಾರವಾಗುತ್ತದೆ. ಕಂಪ್ಯೂಟರ್ ಯುಗದಲ್ಲಿ ಪದವಿ ಪ್ರಮಾಣ ಪತ್ರ ಉಪಯೋಗಕ್ಕೆ ಬರುವುದಿಲ್ಲ. ನಾವು ಕಲಿತ ಜ್ಞಾನದ ಕೌಶಲಗಳು ಉಪಯೋಗಕ್ಕೆ ಬರುತ್ತವೆ. ಅನುಭವದ ಶಿಕ್ಷಣಬೇಕು. ಅದರ ಆಧಾರದ ಮೇಲೆ ಜೀವನ ಕಟ್ಟಿಕೊಳ್ಳಬೇಕು. ಜೀವನಕ್ಕೆ ಅನುಭವ ದೊಡ್ಡದು. ಕೆಲಸ ಸಣ್ಣದಿರಲಿ, ದೊಡ್ಡದಿರಲಿ ನಿಷ್ಠೆಯಿಂದ ದುಡಿಯಬೇಕು.ಜೀವನದಲ್ಲಿ ನಂಬಿಕೆ, ಪ್ರಯತ್ನ ಪರಿಶ್ರಮದಿಂದ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಸಿ.ಡಿ. ತ್ರಿವೇಣಿ, ಎಂ.ಕಾಂ. ವಿಭಾಗದ ಗುರುಮೂರ್ತಿ ನಾಯ್ಕ್, ಗಣೇಶ ಬಿ, ಎಂ.ಮಮತ. ಎನ್.ಎಚ್. ಗೀತಾ ಪಟೇಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.