ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮದುವೆಗೆ ವಧು ಸಿಗಲಿಲ್ಲ ಎಂದು ಹೈ ಟೆನ್ಷನ್ ತಂತಿ ಮುಟ್ಟಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗ್ರಾಮಾಂತರ ಠಾಣಾ ವ್ಯಾಪ್ತಿಯ ತಾಲೂಕಿನ ಟಿಸಿ ಹುಂಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಮಧುವನಹಳ್ಳಿ ಗ್ರಾಮದ ಸಿದ್ದರಾಜಮ್ಮ ಅವರ ಪುತ್ರ ಮಸಣಶೆಟ್ಟಿ (27) ಹೈಟೆನ್ಷನ್ ವೈರ್ ಮುಟ್ಟಿ ಆತ್ಮಹತ್ಯೆಗೆ ಶರಣಾದ ಯುವಕ. ಈತನ ಆತ್ಮಹತ್ಯೆ ಕೇಸ್‌ಗೆ ಮೇಜರ್ ಟ್ವಿಸ್ಟ್ ದೊರೆತಿದ್ದು ಈತ ಮದ್ಯದ ಗೀಳಿಗೆ ದಾಸನಾಗಿದ್ದ. ಮದುವೆ ಮಾಡಿಕೊಡು ಎಂದು ತಾಯಿಯನ್ನು ಕಾಡಿದ್ದ, ಇದಕ್ಕೆ ತಾಯಿ ನೀನು ಕುಡಿತ ಬಿಡು ಎಂದು ಬುದ್ದಿವಾದ ಹೇಳಿದ್ದ ಹಿನ್ನೆಲೆ ಹಲವು ತಿಂಗಳಿಂದ ಈತ ಮದ್ಯ ತ್ಯಜಿಸಿದ್ದ. ಈ ಹಿನ್ನೆಲೆ ಯುವಕನಿಗೆ ವಧು ಅನ್ವೇಷಣೆ ಮಾಡಲಾಗಿತ್ತು.
ಮನೆ ಚಿಕ್ಕದು, ಜಮೀನು ಇಲ್ಲ ಎಂಬ ಕಾರಣಕ್ಕೆ ಎರಡು ಸಂಬಂಧಗಳು ಸಹಾ ಮುರಿದು ಬಿದ್ದಿತ್ತು, ಇದರಿಂದ ಮಸಣಶೆಟ್ಟಿ ವಿಚಲಿತನಾಗಿದ್ದ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ತಾಯಿ ಸಿದ್ದರಾಜಮ್ಮ ಅವರ ಮಗನಿಗೆ ಹೊಟೇಲ್‌ನಿಂದ ತಿಂಡಿ ತಂದು ನೀಡಿದ್ದರು ಎನ್ನಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತ ತಿಂಡಿ ತಿಂದು ಹೊರಗಡೆ ತೆರಳಿದ್ದ, ಹೊರಗಡೆ ತೆರಳಿದ್ದ ಮಗನನ್ನು ತಾಯಿ ಹುಡುಕತ್ತ ತೆರಳಿದರು. ಅಷ್ಟರಲ್ಲಿ ಆತ ಟಿಸಿ ಹುಂಡಿ ಬಳಿ ಬೆಳಗ್ಗೆ ಹೈಟೆನ್ಷನ್ ಕಂಬ ಏರಿದ್ದ.ಮಸಣಶೆಟ್ಟಿ ಕಂಬವನ್ನು ಏರಿದ್ದ ತನ್ನ ತಾಯಿ ಎದುರೆ ಸಾವಿಗೆ ಶರಣಾಗಿದ್ದಾನೆ. ಈ ದೃಶ್ಯ ನೋಡುತ್ತಿದ್ದಂತೆ ಕೆಲಕಾಲ ಆತನ ತಾಯಿ ದಿಗ್ಬ್ರಾಂತರಾಗಿದ್ದು ನಿತ್ರಾಣರಾದರು ಎನ್ನಲಾಗಿದೆ. ನಂತರ ಸಂಬಂಧಿಕರು ಆಕೆಯನ್ನು ಸಂತೈಸಿದರು. ಬಳಿಕ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು, ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.ತಾಯಿ ಪರಿಪರಿಯಾಗಿ ಕೇಳಿಕೊಂಡರೂ
ಮೃತ ಯುವಕ ಕೆಳಗೆ ಇಳಿಯಲಿಲ್ಲಮಗ ಎಲ್ಲಿ ಎಂದು ಹುಡುಕುತ್ತಿದ್ದ ತಾಯಿಗೆ ಮಗ ವಿದ್ಯುತ್ ಹೈಟೆನ್ಷನ್ ತಂತಿ ಏರಿರುವ ವಿಚಾರ ಸ್ಥಳೀಯರಿಂದ ತಿಳಿದು ಸ್ಛಳಕ್ಕೆ ಆಗಮಿಸಿದ ತಾಯಿ ಸಿದ್ದರಾಜಮ್ಮ ಪರಿಪರಿಯಾಗಿ ಇಳಿದು ಬಾ ಮಗನೇ ಎಂದರೂ ಆತ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ, ಆಕೆ ಕಣ್ಣಿರು ಹಾಕುತ್ತಾ ಇಳಿ ಎಂದರೂ ಮಸಣಶೆಟ್ಟಿ ಜಗಲಿಲ್ಲ, ಕೊನೆಗೆ ಕಂಬದ ಮೇಲೆ ನಿಂತು ಬಾಯ್ (ಕೈ ಎತ್ತಿ ಮೇಲೆ ಮಾಡಿ) ವೈರ್ ಮುಟ್ಟಿದ ತಕ್ಷಣವೇ ಮಗನ ಶವ ನೇತಾಡಿದ್ದನ್ನು ಕಂಡ ತಾಯಿ ಕೆಲಕಾಲ ವಿಚಲಿತರಾಗಿ ಮರುಗಿದ ದೃಶ್ಯ ಮನಕಲಕುವಂತಿತ್ತು. ಬಳಿಕ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಕಂಬದಿಂದ ನೇತಾಡುತ್ತಿದ್ದ ಯುವಕನ ಶವ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡರು.