ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು, ಕನ್ನಡ ನಾಡಿನ ಇತಿಹಾಸ ಚಂದ್ರಗುಪ್ತ ಮೌರ್ಯನಿಂದ ಆರಂಭವಾಗುತ್ತದೆ. ೨೩೦೦ ವರ್ಷಗಳಿಂದ ಕನ್ನಡ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ದಾಖಲೆ ಇದ್ದು, ೯೪೯ರಿಂದ ಕನ್ನಡದಲ್ಲಿ ಕಾವ್ಯಗಳು ಆರಂಭವಾದವು. ಪಂಪ, ಪೊನ್ನ, ರನ್ನ ಅವರ ಕಾಲಘಟ್ಟದಲ್ಲಿ ಬಂದ ಸಾಹಿತ್ಯ ಯಾರ ಕಾಲಘಟ್ಟದಲ್ಲಿಯು ಬಂದಿಲ್ಲ. ಬಸವಣ್ಣ ಅವರು ಅನುಭವ ಮಂಟಪದಲ್ಲಿ ವಚನ ಸಾಹಿತ್ಯ, ಕನ್ನಡಿಗರು ಕೊಟ್ಟ ಕೊಡುಗೆ ಹಾಗೂ ಜನಸಾಮಾನ್ಯರು ಮಾತನಾಡುವ ಸರಳ ನಿರೂಪಣೆ ಎಂಬ ವಚನಗಳನ್ನು ಬರೆಸಿದ್ದಾರೆ. ನಮ್ಮ ಕರ್ನಾಟಕದ ಬಹುಭಾಗ ಆಳ್ವಿಕೆ ಮಾಡಿದ ಅಶೋಕ ಚಕ್ರವರ್ತಿ ಅಂದು ಕಲ್ಲಿನ ಮೇಲೆ ಅಕ್ಷರವನ್ನು ಕೆತ್ತಿಸಿದ್ದಾನೆ ಎಂದರು
ಕನ್ನಡಪ್ರಭ ವಾರ್ತೆ ಹಾಸನ
ಕನ್ನಡ ನಾಡು ನುಡಿ, ಭಾಷೆಯ ಹಾಗೂ ನಮ್ಮ ನೆಲದ ಕಲೆ, ಸಂಸ್ಕೃತಿಗಳ ಕುರಿತು ಇಂದಿನ ಯುವ ಸಮುದಾಯ ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಮೊಸಳೆಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶೇಖರ ಹೊಡೆನೂರು ಹೇಳಿದರು.ನಗರದ ಆರ್. ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು, ಕನ್ನಡ ನಾಡಿನ ಇತಿಹಾಸ ಚಂದ್ರಗುಪ್ತ ಮೌರ್ಯನಿಂದ ಆರಂಭವಾಗುತ್ತದೆ. ೨೩೦೦ ವರ್ಷಗಳಿಂದ ಕನ್ನಡ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ದಾಖಲೆ ಇದ್ದು, ೯೪೯ರಿಂದ ಕನ್ನಡದಲ್ಲಿ ಕಾವ್ಯಗಳು ಆರಂಭವಾದವು. ಪಂಪ, ಪೊನ್ನ, ರನ್ನ ಅವರ ಕಾಲಘಟ್ಟದಲ್ಲಿ ಬಂದ ಸಾಹಿತ್ಯ ಯಾರ ಕಾಲಘಟ್ಟದಲ್ಲಿಯು ಬಂದಿಲ್ಲ. ಬಸವಣ್ಣ ಅವರು ಅನುಭವ ಮಂಟಪದಲ್ಲಿ ವಚನ ಸಾಹಿತ್ಯ, ಕನ್ನಡಿಗರು ಕೊಟ್ಟ ಕೊಡುಗೆ ಹಾಗೂ ಜನಸಾಮಾನ್ಯರು ಮಾತನಾಡುವ ಸರಳ ನಿರೂಪಣೆ ಎಂಬ ವಚನಗಳನ್ನು ಬರೆಸಿದ್ದಾರೆ. ನಮ್ಮ ಕರ್ನಾಟಕದ ಬಹುಭಾಗ ಆಳ್ವಿಕೆ ಮಾಡಿದ ಅಶೋಕ ಚಕ್ರವರ್ತಿ ಅಂದು ಕಲ್ಲಿನ ಮೇಲೆ ಅಕ್ಷರವನ್ನು ಕೆತ್ತಿಸಿದ್ದಾನೆ ಎಂದರು. ಕನ್ನಡಿಗರ ನಾಡಲ್ಲಿ ಮೊದಲು ಶಾಸನ ಲಿಪಿ ಮೂಡಿಸಿದವರು ಕದಂಬರು ಮತ್ತು ಗಂಗರು. ಅವರ ಕಾಲದಲ್ಲಿ ೫೮ ಅಡಿ ಎತ್ತರದ ಮೂರ್ತಿ ತಾಮ್ರದ ಮೇಲೆ ಕನ್ನಡದ ಬರವಣಿಗೆಯನ್ನು ಕೆತ್ತಿದರು. ವಿಜಯನಗರ ಸಾಮ್ರಾಜ್ಯದ ಅರಸರು ಸರ್ವಧರ್ಮ ಸಮನ್ವಯ ಸಾರಿದರು ಹಾಗೂ ವಚನ ಸಾಹಿತ್ಯವನ್ನು ಹುಡುಕಿಸಿದರು. ಮೈಸೂರು ಅರಸರು ಆಧುನಿಕ ಕರ್ನಾಟಕದ ನಿರ್ಮಾತೃರುಗಳಾಗಿದ್ದು, ಕನ್ನಡ ಭಾಷೆಯ ಬೆಳೆವಣಿಗೆಗೆ ಕನ್ನಡ ನಾಡಿನ ಬೆಳೆವಣಿಗೆಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರವಾಗಿದೆ. ಫರ್ಡಿನಾಂಡ್ ಕಿಟಲ್ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಜರ್ಮನ್ ವಿದ್ವಾಂಸರು. ಕಿಟಲ್ ಅವರನ್ನು ಪ್ರತಿಯೊಬ್ಬ ಕನ್ನಡಿಗರು ನೆನಪು ಮಾಡಿಕೊಳ್ಳಬೇಕಾದ ಒಬ್ಬ ವ್ಯಕ್ತಿ. ಅವರು ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಕನ್ನಡ ಭಾಷೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಆದ್ದರಿಂದ ಅವರನ್ನು ಕನ್ನಡ ಭಾಷೆಯ ಪ್ರಮುಖ ಸೇವಕರಲ್ಲಿ ಒಬ್ಬರೆಂದು ಸ್ಮರಿಸಲಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಕನ್ನಡ ಎಂದರೆ ಬಾಷೆ ಅಲ್ಲ, ಸಾಹಿತ್ಯ ಅಲ್ಲ, ಎಲ್ಲರಿಗೂ ಅನ್ನದ ಭಾಷೆ. ಭೌಗೋಳಿಕವಾಗಿ ನೆಲೆ, ಜಲ, ಸಂಪತ್ತಿನಿಂದ ನಿರ್ಮಾಣವಾದ ಈ ಕನ್ನಡನಾಡಿನಲ್ಲಿ ಹುಟ್ಟಿ ಹೆಮ್ಮೆ ಪಡಬೇಕು. ೨೦೦೦ ಸಾವಿರದಿಂದ ಹುಟ್ಟಿದ ಈ ಕನ್ನಡ ಮಹಾಭಾರತದಲ್ಲೇ ಕನ್ನಡ ಮಾತನಾಡುವವರ ಉಲ್ಲೇಖಗಳಿಲ್ಲ. ಜನಪದರೇ ನಿಜವಾದ ಸಾಹಿತ್ಯದ ವಾರಸುದಾರರು ಆಚಾರ, ವಿಚಾರ, ಮೂಢನಂಬಿಕೆಗಳು. ವಚನ ಸಾಹಿತ್ಯದ ಬಸವಣ್ಣ ಚಾರಿತ್ರಿಕ ಚಿಂತನೆ ಬಹಳ ಶ್ರೇಷ್ಠ ಅನುಭವವೇ ಮುಖ್ಯವೇ ಹೊರತು ಯಾವ ಜಾತಿ ಧರ್ಮವಲ್ಲ ಎಂದರು. ವೃತ್ತಿ ಆಧಾರಿತ ಎಲ್ಲರನ್ನೂ ಒಂದುಗೂಡಿಸಿ ೧೨ನೇ ಶತಮಾನವನ್ನು ಮರೆಯುವಂತಿಲ್ಲ. ಜನ್ನನ ಯಶೋಧರ ಚರಿತೆಯು ಇಂದಿನ ಕಾಲಘಟ್ಟವನ್ನು ಬಹಳ ವಿಭಿನ್ನವಾಗಿ ಆ ಕೃತಿಯಲ್ಲಿ ವಿಡಂಬಿಸಿದ್ದಾರೆ. ಭಾಷಾ ಪದಾಗುಚ್ಚ ತನ್ನೊಳಗೆ ಒಳಗೂಡಿಸಿಕೊಂಡು ಬೆಳೆಯಬೇಕು. ಕರ್ನಾಟಕದ ಹಲವಾರು ಭಾಷೆಗಳು ನಾನಾ ರೀತಿಯಲ್ಲಿ ಬಳಕೆ ಆಗಿವೆ. ಕನ್ನಡ ಭಾಷೆ ಉಳಿಸಿ ಬೆಳೆಸಬೇಕೆಂದಿಲ್ಲ ಮಾತನಾಡದರೆ ಸಾಕು. ಕನ್ನಡ ಅನ್ನದ ಭಾಷೆಯಾಗಿದೆ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಓದುವಾವರಿಗೆ ಆದ್ಯತೆ ಹೆಚ್ಚು ಎಂದು ಹೇಳಿದರು.ಕಾರ್ಯಕ್ರಮವನ್ನು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಖಜಾಂಚಿ ಜಯೇಂದ್ರ ಉದ್ಘಾಟಿಸಿ ಮಾತನಾಡಿದರು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ. ಆರ್. ಸುರೇಶ್ ಕುಮಾರ್, ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಕಾಂತೇಶ ಸಣ್ಣಿಂಗಮ್ಮ, ಅಧ್ಯಾಪಕರಾದ ಮೋಹನ್ ಕುಮಾರ್ ಜಿ. ಆರ್., ನಂದನ್ ಪಿ., ಆಡಳಿತ ಸಿಬ್ಬಂದಿ ಮಹೇಶ್ ಜಿ.ಎನ್., ಉಪನ್ಯಾಸಕರಾದ ಕಾಂತರಾಜು ಜಿ.ಎಂ., ಪೂರ್ಣಿಮಾ ಎಚ್. ಡಿ., ರಾಜಯ್ಯ ಎಚ್.ಡಿ., ಡಾ. ರಂಜಿತ ಬಿ. ಹಾಗೂ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.