ರಾಮನಗರ: ಯುವಜನರು ಮೊಬೈಲ್ - ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿದು ಹಾಗೂ ಪೋಷಕರನ್ನು ಗೌರವದಿಂದ ನೋಡಿಕೊಂಡಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.
ಪೋಷಕರು ಅಭಿಮಾನ ಇಟ್ಟು ನಿಮಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ನೀವು ಶಿಕ್ಷಣದಿಂದ ಏನನ್ನು ಕಲಿಯುತ್ತಿದ್ದೀರಿ ಎಂಬುದು ಮುಖ್ಯ. ಈಗ ಯುವಜನರಲ್ಲಿ ಮೊಬೈಲ್ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಾಗೃತಿ ಮೂಡಿಸಬೇಕಿದೆ. ಪೋಷಕರು ಮಕ್ಕಳ ತಪ್ಪುಗಳನ್ನು ಸಮರ್ಥಿಸಿಕೊಂಡು ಹೋದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಮತ್ತು ಬುದ್ಧಿಶಕ್ತಿ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ನಿರಂತರ ಪ್ರಯತ್ನದಿಂದ ಮುನ್ನಡೆದರೆ ಮಾತ್ರ ಯಶಸ್ಸು ಸಾಧಿಸಬಹುದು. ತಪ್ಪಿಗೆ ಶಿಕ್ಷೆ ಇದೆ. ಶಿಕ್ಷೆ ನಿಮ್ಮನ್ನು ಸರಿ ದಾರಿಗೆ ಕೊಂಡೊಯ್ಯುತ್ತದೆ. ಪೋಷಕರು ಮತ್ತು ಶಿಕ್ಷಕರಿಗೆ ದಂಡಿಸುವ ಹಕ್ಕಿದ್ದು, ಅದು ನಿಮ್ಮ ಒಳತಿಗೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ತಂತ್ರಜ್ಞಾನ ಬೆಳೆದಂತೆ ನಾವೆಲ್ಲರು ನಮ್ಮ ಜೀವನವನ್ನು ಅದಕ್ಕೆ ಮುಡಿಪಾಗಿಡುತ್ತಿದ್ದೇವೆ. ಇದರ ಪರಿಣಾಮ ನಮ್ಮ ಆಲೋಚನಾ ಶಕ್ತಿಯನ್ನೇ ಮಾತ್ರವಲ್ಲ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೊಬೈಲ್ ಇಲ್ಲದೆ ಜೀವನ ನಡೆಯದ ಸ್ಥಿತಿ ಬಂದಿದೆ.
ಕುಟುಂಬ ಅಂದರೆ ಬಹುತೇಕರು ಅಪ್ಪ ಅಮ್ಮನನ್ನು ಬಿಟ್ಟು ಗಂಡ ಹೆಂಡತಿ ಮಕ್ಕಳು ಅಂತ ತಿಳಿದುಕೊಂಡಿದ್ದಾರೆ. ಅತ್ತೆ ಮಾವ, ಅಪ್ಪ ಅಮ್ಮ ಎಲ್ಲರು ಸೇರಿದಾಗ ಮಾತ್ರ ಅದು ಕುಟುಂಬ ಅನಿಸಿಕೊಳ್ಳುತ್ತದೆ. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಚರ್ಚೆ ನಡೆಯುವತ್ತಿರುವಾಗಲೇ ಅಂತಹ ಮಹತ್ವದ ಸಂದೇಶ ಸಾರಿ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ ಚಿತ್ರಾರಾವ್ ಪ್ರಯತ್ನ ಶ್ಲಾಘನೀಯ.ಅವರಿಗೆ ಸಲ್ಲಿಸುತ್ತಿರುವ ನಾಗರಿಕ ಸನ್ಮಾನ ದೊಡ್ಡ ಗೌರವ ಎಂದರು.
ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬಾಲ್ಯ ದಿಂದಲು ಉತ್ಸಾಹಿ ಯುವಕ. ಧ್ಯಾನಸ್ಥ ಸ್ವಭಾವದವರು. ಶಾಲಾ ದಿನಗಳಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ಮೇಲೆ ವಿವೇಕರ ಜೀವನ ದಿಕ್ಕು ಬದಲಾಯಿತು. ಅವರಿಂದ ಭಾರತೀಯ ದರ್ಶನ ಏನೆಂಬುದನ್ನು ಕಲಿಯುತ್ತಾರೆ. ಚಿಕಾಗೋದಲ್ಲಿ ವಿವೇಕಾನಂದರ ಮಾಡಿದ ಭಾಷಣ ಯುರೋಪಿನ್ನರಿಗೆ ಭಾರತೀಯರ ಬಗೆಗಿದ್ದ ನಿಕೃಷ್ಟ ಭಾವನೆ ಬದಲಾಯಿಸಿತು ಎಂದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಯುವಜನರು ಗುರುಗಳು ಮತ್ತು ಪೋಷಕರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ಇದಕ್ಕಾಗಿ ಆರೋಗ್ಯ ಕಾಪಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಗುರಿ ಸಾಧಿಸುವ ಕೆಲಸ ಮಾಡಬೇಕು. ಆಗ ನಿಮಗೆ ಸಿಗಬೇಕಾದ ಗೌರವ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.
ಕೋಟ್ ................
- ಡಿ.ಕೆ.ಸುರೇಶ್ , ಸಂಸದರು
ಗಮನ ಸೆಳೆದ ರ್ಯಾಲಿ ಮತ್ತು ಪ್ರದರ್ಶನ
ರಾಮನಗರದ ರೋಟರಿ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಯುವಕರು ನೂರಾರು ಬೈಕ್ ಗಳಲ್ಲಿ ರ್ಯಾಲಿ ನಡೆಸಿದರು. ಪುತ್ಥಳಿ ಬಳಿಯಿಂದ ಆರಂಭವಾದ ರ್ಯಾಲಿ ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು.ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಗಾಥೆ ಸಾರುವ ಚಿತ್ರಗಳ ಪ್ರದರ್ಶನ ಹಾಗೂ ಅವರನ್ನು ಕುರಿತಾದ ಪುಸ್ತಕಗಳು ವಿದ್ಯಾರ್ಥಿಗಳ ಗಮನ ಸೆಳೆದವು.
12ಕೆಆರ್ ಎಂಎನ್ 2,3.ಜೆಪಿಜಿ2.ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ , ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸಾದಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಸಮಾರಂಭವನ್ನು ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು.3.ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭದಲ್ಲಿ ಸಾಧಕಿ ಚಿತ್ರಾರಾವ್ ಅವರಿಗೆ ನಾಗರಿಕ ಸನ್ಮಾನ ಮಾಡಿ ಗೌರವಿಸಲಾಯಿತು.