ಕನ್ನಡಪ್ರಭ ವಾರ್ತೆ ತುಮಕೂರು
ವಿಶ್ವದ ಜಾಗತೀಕ ತಾಪಮಾನ ದಿನೇ ದಿನೇ ಹೆಚ್ಚಾಳವಾಗುತ್ತಿದ್ದು ನಮ್ಮ ಪರಿಸರ ಕೆಡುವ ಹಂತದಲ್ಲಿದೆ ಮನುಷ್ಯ ತನ್ನ ಅಭಿವೃದ್ಧಿಗಾಗಿ ಕಾಡು ನಾಶ ಮಾಡುತ್ತಿದ್ದು ಮುಂದಿನ ಪೀಳಿಗೆಗೆ ವಿನಾಶ ಬರುವ ಮೊದಲು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡುವ ಭಾರ ಇಂದಿನ ಯುವ ಸಮೂಹದ ಮೇಲಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಝಡ್. ಕುರಿಯನ್ ತಿಳಿಸಿದರು.ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಹಾಗೂ ತುಮಕೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನ, ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸರಸ್ವತಿಪುರಂನ 28 ನೇ ವಾರ್ಡಿನಲ್ಲಿರುವ ಉದ್ಯಾನವನದಲ್ಲಿ ಸಸಿ ನೆಟ್ಟು, ಪ್ಲಾಗಥಾನ್ ಮತ್ತು ರಾಷ್ಟ್ರೀಯಯುವ ದಿನಾಚರಣೆಗೆ ಚಾಲನೆ ನೀಡಿ, ಉದ್ಯಾನವನ್ನು ಸ್ವಚ್ಛಗೊಳಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ತುಮಕೂರು ಮಹಾನಗರ ದೇಶದ ಗಮನ ಸೆಳೆದಿದೆ. ಸ್ಮಾರ್ಟ್ ಸಿಟಿ ಗರಿಮೆಗೆ ಪಾತ್ರವಾಗಿರುವ ನಗರದಲ್ಲಿ ಪರಿಸರ ಸಂರಕ್ಷಣೆ ಮಾಡಿ ಸ್ವಚ್ಛ ನಗರವೆಂಬ ಕೀರ್ತಿ ತರಲು ನಾವೆಲ್ಲರೂ ಅಧಿಕಾರಿ ವರ್ಗದೊಂದಿಗೆ ಶ್ರಮಿಸಬೆಕಿದೆ ಎಂದು ಕರೆ ನೀಡಿದರು.ಮಹಾನಗರ ಪಾಲಿಕೆಯ 28 ನೇ ವಾರ್ಡ್ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ತುಮಕೂರು ನಗರವನ್ನು ಹಸಿರು ವಲಯ ಮಾಡುವ ಗುರಿಯನ್ನ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಆಯೋಗ ಹೊಂದಿದ್ದು ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಸಾಕ್ಷೀಕರಿಸಿದೆ. ಪರಿಸರ ಸಂರಕ್ಷೀಸುವ ಹೊಣೆ ಎಲ್ಲಾ ಸಾರ್ವಜನಿಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ್, ಡೀನ್ ಡಾ. ರೇಣುಕಾ ಲತಾ, ಎನ್‌ಸಿಸಿ ಅಧಿಕಾರಿ ಡಾ. ಜಯಪ್ರಕಾಶ್, ಎನ್‌ಎಸ್‌ಎಸ್ ಸಂಯೋಜಕ ಡಾ. ರವಿಕಿರಣ್, ತರಬೇತಿ ಮತ್ತು ನೇಮಕಾತಿ ವಿಭಾಗದ ಡಾ. ಅಶೋಕ್ ಮೆಹ್ತಾ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ. ಮುದ್ದೇಶ್, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಅನಂದ್, ಸತ್ಯ, ಜಯದೇವಯ್ಯ, ರಾಜೇಶ್, ಉಮೇಶ್ ಮತ್ತು ಸಿಬ್ಬಂದಿ ವರ್ಗ, ಜೊತೆಗೆ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗಿಯಾಗಿಯಾಗಿದ್ದರು.