ಕನ್ನಡಪ್ರಭ ವಾರ್ತೆ ಕೋಲಾರಪರಿಸರ ನಾಶದಿಂದ ಮನುಷ್ಯ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ ಎಂಬುದರ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ. ಆ ಮೂಲಕ ಪರಿಸರ ರಕ್ಷಣೆ ಮಾಡಲು ಸಮುದಾಯ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆ, ವಂಶೋದಯ ಆಸ್ಪತ್ರೆ, ಜಿಲ್ಲಾ ಪರಿಸರ ಮತ್ತು ನೈರ್ಮಲ್ಯ ಇಲಾಖೆ ಹಾಗೂ ರೋಟರಿ ಕೋಲಾರ ನಂದಿನಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರ ಸ್ಕೌಟ್ಸ್ ಭವನದಲ್ಲಿ, ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ
ಪ್ರಾಣಿ, ಪಕ್ಷಿಗಳು ಮನುಷ್ಯ ಅವಲಂಭನೆಯಾಗಿರುತ್ತವೆ. ಮನುಷ್ಯನ ದುರಾಸೆಗೆ ಅರಣ್ಯದಲ್ಲಿ ಮರಗಳು ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ಎದುರಾಗಿದೆ. ಹಸಿರೀಕರಣ ಹೆಚ್ಚಾದಂತೆ ಮನುಕುಲದ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ಪರಿಸರದಲ್ಲಿ ಸಮತೋಲನ ಉಂಟಾಗುತ್ತದೆ ಎಂದು ತಿಳಿಸಿದರು.ಪರಿಸರ ಸಮತೋಲನ ಅಗತ್ಯ
ವಾತಾವರಣದಲ್ಲಿ ಉಂಟಾಗುವ ವೈಪರಿತ್ಯದಿಂದ ಕೆಲವೊಮ್ಮೆ ಪ್ರಕೃತಿಯೂ ಮುನಿಸಿಕೊಳ್ಳುತ್ತದೆ. ಆಗ ಮಳೆ ಕೊರತೆಯಾಗುತ್ತದೆ. ಇನ್ನು ಕೆಲವೊಮ್ಮೆ ಅತಿಯಾದ ಮಳೆಯಾಗಿ ಪ್ರವಾಹಗಳು ಉಂಟಾಗುತ್ತವೆ. ಇದಕ್ಕೆಲ್ಲ ನಾವೇ ಕಾರಣರಾಗಿದ್ದೇವೆ. ನಮ್ಮ ಕಡೆ ಮಳೆ ಕೊರತೆಯಿಂದ ಬರಪರಿಸ್ಥಿತಿ ಎದುರಾಗುತ್ತದೆ. ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆಯಾಗಿ ಗುಡ್ಡ ಕುಸಿತಗಳಾಗುತ್ತವೆ. ಇಂತಹ ಸಮಸ್ಯೆಗಳಿಂದ ಮುಕ್ತರಾಗಬೇಕಾದರೆ ಪರಿಸರ ಸಮತೋಲನ ಮಾಡಬೇಕು ಎಂದು ಎಚ್ಚರಿಸಿದರು.ವಿವಿಧ ಸ್ಪರ್ಧೆಗಳ ವಿಜೇತರುಚಿತ್ರಕಲೆ ಸ್ಪರ್ಧೆಯಲ್ಲಿ ಮಾಧ್ಯಮಿಕ ವಿಭಾಗದಲ್ಲಿ ಚಿನ್ಮಯ ಶಾಲೆ ಎ.ಜಮುನ ಪ್ರಥಮ, ಎಸ್.ಲಕ್ಷಿ?ಮ ದ್ವಿತೀಯ ಹಾಗೂ ವೈಷ್ಣವಿ ತೃತೀಯ. ಪ್ರೌಢ ಶಾಲಾ ವಿಭಾಗಲ್ಲಿ ಮಹಿಳಾ ಸಮಾಜ ಶಾಲೆಯ ಪಿ.ಆಕಾಶ್ ಪ್ರಥಮ, ಸುವರ್ಣ ಸೆಂಟ್ರಶಾಲೆ ಶ್ರೀಲೇಖಾ ದ್ವಿತೀಯ, ಎಸ್‌ಡಿಸಿ ಶಾಲಸಯ ಎಸ್.ಪ್ರಶಾಂತಿ ತೃತೀಯ. ಪ್ರಾಥಮಿಕ ವಿಭಾಗದಲ್ಲಿ ಚಿನ್ಮಯ ಶಾಲೆ ಎಂ.ಎಸ್.ಶ್ರೀರಕ್ಷಾ ಪ್ರಥಮ, ಬಿಜಿಎಸ್ ವಲ್ಡ್ ಶಾಲೆಯ ನಿಕಲ್ಪ ದ್ವಿತೀಯ, ವೆಂಕಟೇಶ್ವರ ಶಾಲೆ ವೈ.ಶಯಸ್ವಿನಿ ತೃತೀಯ. ಪ್ರಬಂಧ ಸ್ಪರ್ಧೆ ವಿಜೇತರಾದ ಚಿನ್ಮಯ ವಿದ್ಯಾಲಯದ ಇಂಪನ ಜೆ.ರಾಜ್ ಪ್ರಥಮ, ಎಸ್.ಲಕ್ಷಿ?ಮ ದ್ವಿತೀಯ ಹಾಗೂ ಎಸ್.ಅವನಿಕಾ ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಕುಮಾರ್, ರೋಟರಿ ಕೋಲಾರ ನಂದಿನಿ ಅಧ್ಯಕ್ಷ ವಿ.ಬಾಬು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಕೆ.ಅರ್.ಸುರೇಶ್, ಕಾರ್ಯದರ್ಶಿ ಉಮಾದೇವಿ, ರಾಜು ಡೆಂಟಲ್ ವೈದ್ಯೆ ಡಾ.ಪಂಕಜ ಜನಾರ್ದನ್, ಶಿಕ್ಷಕಿ ಸುಷ್ಮಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಇದ್ದರು.