ವಿವಾಹ ಭಾಗ್ಯದ ನೆಪದಲ್ಲಿಯುವತಿಗೆ 2 ಲಕ್ಷ ಮೋಸ

KannadaprabhaNewsNetwork |  
Published : Jan 05, 2026, 04:15 AM IST
ಆನ್‌ಲೈನ್‌  | Kannada Prabha

ಸಾರಾಂಶ

ಪಿ.ಜಿಯಲ್ಲಿ ವಾಸವಾಗಿದ್ದ ಯುವತಿಯೊಬ್ಬರಿಗೆ ಆನ್‌ಲೈನ್‌ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ ₹2.05 ಲಕ್ಷ ವಂಚಿಸಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಿ.ಜಿಯಲ್ಲಿ ವಾಸವಾಗಿದ್ದ ಯುವತಿಯೊಬ್ಬರಿಗೆ ಆನ್‌ಲೈನ್‌ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ ₹2.05 ಲಕ್ಷ ವಂಚಿಸಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆಡುಗೋಡಿ ನಿವಾಸಿಯಾದ 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಜ.2ರಂದು ಚಂದ್ರಶೇಖರ್ ಸುಗತ್ ಗುರೂಜಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ‘ಕಷ್ಟಕ್ಕೆ ಪರಿಹಾರ’ ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಆ ಜಾಹೀರಾತು ಗಮನಿಸಿದ ಯುವತಿ ತನಗೆ ಮದುವೆ ಆಗುತ್ತದೆಯೇ ಎನ್ನುವುದರ ಬಗ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅದಕ್ಕೆ ಗುರೂಜಿ ಮದುವೆ ಆಗುತ್ತದೆ. ಆದರೆ, ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಒಪ್ಪಿಕೊಂಡ ಯುವತಿ ಗುರೂಜಿ ಸೂಚನೆ ಮೇರೆಗೆ ಆತ ನೀಡಿದ್ದ ನಂಬರ್‌ಗೆ ಆನ್‌ಲೈನ್ ಮೂಲಕ ಕಳೆದ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ₹2.05 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಮದುವೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಯುವತಿ ಹಣ ವಾಪಸ್ ಕೇಳಿದ್ದಾರೆ. ಅದಕ್ಕೆ ಹಣ ನೀಡುವುದಿಲ್ಲ. ಏನು ಮಾಡುತ್ತಿಯೋ ಮಾಡಿಕೋ ಎಂದು ಗುರೂಜಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾತುಕತೆ, ಹಣ ವರ್ಗಾವಣೆ ಎಲ್ಲವೂ ಆನ್‌ಲೈನ್ ಮೂಲಕ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ