ಕುರಿಕೋಟಾ ಸೇತುವೆ ಮೇಲಿಂದ ಜಿಗಿದು ಯುವತ್ತಿ ಆತ್ಮಹತ್ಯೆ

KannadaprabhaNewsNetwork |  
Published : Jul 23, 2025, 03:18 AM IST
ಸಾಕ್ಷಿ ಮನೋಜ | Kannada Prabha

ಸಾರಾಂಶ

Young woman commits suicide by jumping off Kurikota bridge

ಕಮಲಾಪುರ: ಬೆಣ್ಣೆತೋರಾ ಹಿನ್ನೀರಿನ ಕುರಿಕೋಟಾ ಸೇತುವೆ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಭೊಸಣಗಿ ಗ್ರಾಮದ ಸಾಕ್ಷಿ ಮನೋಜ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಹಿಳೆಗೆ ರಾಜನಾಳ ಗ್ರಾಮದ ಅಭಿಶೇಕ ದುಬೈನಲ್ಲಿದ್ದು, ಆತ ಸಾಮಾಜಿಕ ಜಾಲತಾಣದಲ್ಲಿ ನನ್ನ ಮಗಳ ಪೋಟೋ ಹರಿಬಿಟ್ಟು ವಾಟ್ಸಪ್ ನಲ್ಲಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಹಾಗಾಗಿ, ಸೋಮವಾರ ಮನನೊಂದು ಬೆಳಗ್ಗೆ 9ಕ್ಕೆ ಮಹಾಗಾಂವ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ, ತನ್ನ ಸಹೋದರಿಯನ್ನು ಕರೆದುಕೊಂಡು ಸಿಂಗಾಪುರ ಕ್ರಾಸ್ ಹತ್ತಿರ ಬಂದಾಗ ಶೌಚಾಕ್ಕೆ ಹೋಗಿ ಬರುತ್ತೇನೆಂದು ಹೇಳಿದ್ದಾಳೆ ಎನ್ನಲಾಗಿದೆ. ಅಭಿಶೇಕ್‌ ಜೊತೆಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ನನ್ನ ಮಗಳು ಸೇತುವೆ ಮೇಲಿಂದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ತಾಯಿ ಮಹಾಗಾಂವ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾಯಿಯ ದೂರು ಆಧರಿಸಿ ಸ್ಥಳಕ್ಕೆ ಆಗಮಿಸಿದ ಮಹಾಗಾಂವ ಠಾಣೆಯ ಪಿಎಸ್ಐ ಬಸವರಾಜ, ಸಿಪಿಐ ಶಿವಶಂಕರ ಸಾಹು, ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಎನ್‌ಡಿಆರ್‌ಎಫ್‌ ತಂಡ ಹಾಗೂ ಈಜುಗಾರರ ತಂಡ ಜುಲೈ 21ರಂದು ಮಧ್ಯಾಹ್ನ ಕಾರ್ಯಾಚರಣೆ ನಡೆಸಿತಾದರೂ ಯುವತಿಯ ಶವ ದೊರೆತಿಲ್ಲ. ಕಾರ್ಯಾಚರಣೆ ಮುಂದುವರೆದಿದೆ ಎಂದು ಮಹಾಗಾಂವ ಪೋಲಿಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ