ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಡಾ.ಕೆ.ಜೆ.ಕಾಂತರಾಜ್

KannadaprabhaNewsNetwork |  
Published : Jul 24, 2025, 12:53 AM IST
ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರಿಗೆ ಅಭಿನಂದನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆ, ಕರ್ತವ್ಯವನ್ನು ಗುರುತಿಸಿ ಒಳ್ಳೆಯ ಮಾತುಗಳನ್ನು ಆಡಿದ್ದೀರಿ, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಿಮ್ಮ ಪ್ರೀತಿಯ ಶ್ರೀ ರಕ್ಷೆ ಸದಾ ಇರಲಿ ಎಂದು ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.

ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರಿಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಕರ್ತವ್ಯವನ್ನು ಗುರುತಿಸಿ ಒಳ್ಳೆಯ ಮಾತುಗಳನ್ನು ಆಡಿದ್ದೀರಿ, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಿಮ್ಮ ಪ್ರೀತಿಯ ಶ್ರೀ ರಕ್ಷೆ ಸದಾ ಇರಲಿ ಎಂದು ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.

ಜಿಲ್ಲಾ ಕನ್ನಡ ಜನಪದ ಪರಿಷತ್ ಮಹಿಳಾ ಘಟಕ ಚಿಕ್ಕಮಗಳೂರು, ತಾಲೂಕು ಕನ್ನಡ ಜನಪದ ಪರಿಷತ್ತು ಮಹಿಳಾ ಘಟಕ ತರಿಕೆರೆ, ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಪ್ರಗತಿ, ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಕೆ.ಜಿ. ಕಾಂತರಾಜ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಯಾವ ಜನ್ಮದ ಪುಣ್ಯವೋ ಏನು ಗೊತ್ತಿಲ್ಲ ತರೀಕೆರೆ ತಾಲೂಕಿಗೆ ಉಪವಿಭಾಗಾಧಿಕಾರಿಯಾಗಿ ಬಂದ ನಂತರ ತಾಯಿ, ಸೋದರಿಯರ ಪ್ರೀತಿ ಇಷ್ಟು ಸಿಗುತ್ತದೆ ಎಂದು ಕನಸಿನಲ್ಲೂ ಕಂಡಿರಲಿಲ್ಲ, ಕಸಾಪ ಸರ್ವ ಅಧ್ಯಕ್ಷ, ಸದಸ್ಯರು ನನ್ನನ್ನು ಗುರುತಿಸಿ ಕನ್ನಡ ಶ್ರೀ ಪ್ರಶಸ್ತಿ ನೀಡಿದ್ದಾರೆ ಅವರ ಅಭಿಮಾನಕ್ಕೆ ಆಭಾರಿ. ಕಚೇರಿಗೆ ಬಂದಂತಹ ಸಾರ್ವಜನಿಕರು, ಅಧ್ಯಕ್ಷರು, ಸದಸ್ಯರು, ಮಹಿಳಾ ಸದಸ್ಯರಿಗೆ ಅಧಿಕಾರಿಯಾಗಿ ನನ್ನ ಜವಾಬ್ದಾರಿ ನಿಬಾಯಿಸಿದ್ದೇನೆ ಎಂದು ಹೇಳಿದರು.

ನಾನು ಬಡ ಕುಟುಂಬದಲ್ಲಿ ಬಂದಂತಹ ವಿದ್ಯಾರ್ಥಿ, ಹಾಸ್ಟೆಲ್ ನಲ್ಲಿ ಓದಿರುವ ಅನುಭವ ಇದೆ, ಉಪ ವಿಭಾಗಾಧಿ ಕಾರಿ ಯಾಗಿ ಹಾಸ್ಟಲ್ಲಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಊಟ, ವಸತಿ ವ್ಯವಸ್ಥೆ, ಎಲ್ಲಾ ಮಕ್ಕಳೊಡನೆ ಊಟ ಮಾಡಿ ಹಾಸ್ಟೆಲಿನ ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಗಮನ ನೀಡಬೇಕೆಂದು ತಿಳಿಸಿರುತ್ತೇನೆ ಎಂದು ಹೇಳಿದರು.

ಕಜಾಪ ಜಿಲ್ಲಾ ಅಧ್ಯಕ್ಷೆ ವಿಶಾಲಾಕ್ಷಮ್ಮಮಾತನಾಡಿ ಡಾ. ಕಾಂತರಾಜ್ ಸರಳ ಸಜ್ಜನ. ಇವರ ಆಡಳಿತಾವಧಿಯಲ್ಲಿ ತರೀಕೆರೆ ತಾಲೂಕಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಅಧಿಕಾರದ ಅವಧಿಯಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಸಬೇಕೆಂಬ ಕಜಾಪ ಅಧ್ಯಕ್ಷ ಹಾಗೂ ಸದಸ್ಯರ ಆಸೆಯಾಗಿತ್ತು ಎಂದು ತಿಳಿಸಿದರು.

ಕಜಾಪ ತಾಲೂಕು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಮಾತನಾಡಿ ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನರಾಗಿ ನೋಡುತ್ತಿದ್ದರು. ಕಚೇರಿಗೆ ಬಂದಂತ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಹೆಚ್ಚಿನ ಗಮನ ನೀಡಿ ಅರ್ಜಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾಹಿತಿ ನೀಡಿ. ಕೆಲಸವನ್ನು ಅದಷ್ಟು ಮಾಡಿಕೊಡುವಂತೆ ಸೂಚಿಸು ತ್ತಿದ್ದರು, ಇಂಥ ಅಧಿಕಾರಿಗಳಿಗೆ ಆರೋಗ್ಯ ಆಯಸ್ಸು ಸಕಲ ಸಂಪತ್ತು ಕೊಟ್ಟು ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರಬೇಕೆಂದು ಆಶಯ ವ್ಯಕ್ತಪಡಿಸಿದರು. ಕಜಾಪ ಚಿಕ್ಕಮಗಳೂರು ಸದಸ್ಯೆ ಕೆ. ಸಿ. ವಿಜಯ ಕುಮಾರಿ, ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಪ್ರಗತಿ ಅಧ್ಯಕ್ಷೆ ಆಶಾಭೋಸ್ಲೆ, ಸದಸ್ಯರಾದ ಮಮತ ಮಲ್ಲಿಕಾರ್ಜುನ್, ಯಶೋಧ ಆಂಜನೇಯ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಕಜಾಪ ಸದಸ್ಯೆ ಭವ್ಯ ರೇವಣ್ಣ, ಶ್ರೀಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ. ಆರ್.ಸೋಮಶೇಖರಯ್ಯ ಚಿಕ್ಕಾನವಂಗಲ ಗ್ರಾಮದ ಅಧ್ಯಕ್ಷೆ ಬಸಮ್ಮ ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ಶ್ರೀ ಹರಿ ಭಜನಾ ಮಂಡಳಿ ಅಧ್ಯಕ್ಷೆ ರತ್ನಮ್ಮ ಜಯಣ್ಣ, ಶ್ರೀ ಪತಿ ಭಜನಾ ಮಂಡಳಿ ಅಧ್ಯಕ್ಷೆ ವೀಣಾ ಪರಮೇಶ್, ಶ್ರೀಸಪ್ತಗಿರಿ, ಶ್ರೀ ಶೇಷಗಿರಿ ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಅನೂಪ್, ಮಧು, ನವೀನ್ ಉಪಸ್ಥಿತರಿದ್ದರು.

23ಕೆಟಿಆರ್.ಕೆ.15ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಉಪ ವಿಭಾಗಾದಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರನ್ನು ಅಬಿನಂದಿಸಲಾಯಿತು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ