ಹೊಸಪೇಟೆ: ಶಿಕ್ಷಣ ಮತ್ತು ಕ್ರೀಡೆಯಲ್ಲಿ ಯುವಜನರಿಗೆ ಸರ್ಕಾರ ಮತ್ತು ಸಮುದಾಯದ ಉತ್ತೇಜನ ಅಗತ್ಯ ಎಂದು ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ ಅಶೋಕ್ ಭೀಮಾನಾಯ್ಕ ಹೇಳಿದರು.
ಪುರಸಭೆ ಮಾಜಿ ಸದಸ್ಯ ಜಿ.ಮಂಜುನಾಥ ಮಾತನಾಡಿ, ಬದುಕಿನ ಸವಾಲುಗಳನ್ನು ಎದುರಿಸಲು ಕ್ರೀಡಾಸ್ಫೂರ್ತಿ ಸಹಕಾರಿ. ನಿರಂತರ ಸಾಧನೆಯ ಮೂಲಕ ಉನ್ನತ ಗುರಿ ತಲುಬೇಕು ಎಂದರು.
ಸಮಾಜ ಸೇವಕ ರಾಜವರ್ಧನ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಯುವ ಮುಖಂಡ ಪ್ರದೀಪ್ ನಾಯಕ್. ಸಮಾಜಸೇವಕರಾದ ಸರಳಾ ಕಾವ್ಯ, ಮಂಜುಜಾಕಿ, ವಿಜಯನಗರ ಕ್ರಿಕೆಟರ್ಸ್ ಅಧ್ಯಕ್ಷ ಗಂಗಾಧರ ಕಟಿಗಿ, ಪರಶುರಾಮ, ಆನಂದ್, ಓಬಳೇಶ್, ಸುಧಾಕರ್, ಸಾಗರ್, ನಜೀರ್, ನಾಗರಾಜ. ರಸೂಲ್ ಮತ್ತಿತರರಿದ್ದರು. ಶಿಕ್ಷಕ ವಿರೂಪಾಕ್ಷ ನಿರ್ವಹಿಸಿದರು. ಹುಬ್ಬಳ್ಳಿ, ಧಾರವಾಡ, ಉಡುಪಿ, ದಾವಣಗೆರೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಬೆಂಗಳೂರಿನ ಸ್ಯಾಂಡಿ ಬೆಸ್ಟ್ ಆಲ್‌ರೌಂಡರ್ ಬಹುಮಾನ ಪಡೆದರು. ಪಂದ್ಯಾವಳಿಯಲ್ಲಿ ವಿಜೇತರಾದ ಅಶೋಕ್ ಎಫ್‌ಎಂ 11 ತಂಡ ಬಹುಮಾನವಾಗಿ ಒಂದು ಲಕ್ಷ ರು.ನಗದು ಮತ್ತು ಅತ್ಯಂತ ಆಕರ್ಷಕ ಕಪ್ ತಮ್ಮದಾಗಿಸಿಕೊಂಡರು. ಉಡುಪಿಯ ಬಿಕೆ ಬ್ರದರ್ಸ್ ತಂಡ ರನ್ನರ್ ಅಪ್ ವಿಜೇತರಾಗಿ ₹50 ಸಾವಿರ ಬಹುಮಾನ ಮತ್ತು ಕಪ್ ಗಳಿಸಿದರು.