ಯುವ ಪ್ರತಿಭೆಗಳಿಗೆ ಯುವಜನೋತ್ಸವ ಪ್ರೇರಣೆ: ನಾರಾಯಣಸಾ ಭಾಂಡಗೆ

KannadaprabhaNewsNetwork |  
Published : Nov 18, 2026, 02:45 AM IST
ಫೋಟೊ17ಬಿಕೆಟಿ2,(1) ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಕಲೆಗಳನ್ನು ಉಳಿಸಿ ಬೆಳಸುವ ಸ್ಪರ್ಧೆಯನ್ನು  ಪ್ರದರ್ಶಿಸಲಾಯಿತು) | Kannada Prabha

ಸಾರಾಂಶ

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿವರ್ಷ ನಡೆಯುವ ಜಿಲ್ಲಾಮಟ್ಟದ ಯುವಜನೋತ್ಸವ ಯುವ ಪ್ರತಿಭೆಗಳಿಗೆ ಪ್ರೇರಣೆ ಹಾಗೂ ಸ್ಫೂರ್ತಿ ನೀಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ತಂತ್ರಜ್ಞಾನ ಯುಗದ ಯುವಕರು ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಕಲೆಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಯುವಜನೋತ್ಸವದಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮನೋಭಾವ ಬೆಳೆಸಿಕೊಂಡು ನಮ್ಮ ಸಂಪ್ರದಾಯ, ಸಂಸ್ಕಾರ ಹಾಗೂ ಜನಪದ ಕಲೆಗಳನ್ನು ಉಳಿಸುವ ಕೆಲಸವಾಗಬೇಕೆಂದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಯುವಜನರಲ್ಲಿ ನಾಡು ಹಾಗೂ ದೇಶದ ಸಾಂಸ್ಕೃತಿಕ ಕಲೆಗಳ ಬಗ್ಗೆ ಆಸಕ್ತಿ ಮತ್ತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಅಗತ್ಯವಾಗಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವ ಸಮೂಹದಲ್ಲಿ ಆತ್ಮವಿಶ್ವಾಸ, ಸಾಮರ್ಥ್ಯ ಹಾಗೂ ಮನೋಬಲ ಹೆಚ್ಚುತ್ತದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಂಜುನಾಥ ಡೋಂಬರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಚಾರ್ಯ ಗಿರಿಜಾ ನಡುವಿನಮನಿ, ಪದವಿಪೂರ್ವ ವಿಭಾಗದ ಪ್ರಭಾರಿ ಪ್ರಾಚಾರ್ಯ ಜಿ.ಡಿ. ಲಮಾಣಿ ಸೇರಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ಣಾಯಕರಾಗಿ ಡಾ.ಮಾರುತಿ ಪಾಟೋಳಿ, ಡಾ.ಚಂದ್ರಶೇಖರ ಕಾಳನ್ನವರ, ಸಂಗಮೇಶ ಸಣ್ಣತಂಗಿ, ಪ್ರೊ.ಶ್ರೀಹರಿ ಧೂಪದ, ಪವಿತ್ರಾ ಜಕ್ಕಪ್ಪನವರ, ಬಸವರಾಜ ಸಿಂದಗಿಮಠ, ವೀರೇಶ ರುದ್ರಸ್ವಾಮಿ, ಸಂಗಮೇಶ ಬಡಿಗೇರ, ಪ್ರೊ.ರವಿ ಗೌಡರ ಸೇರಿದಂತೆ 15 ಮಂದಿ ಪಾಲ್ಗೊಂಡಿದ್ದರು. ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಯುವ ಕಲಾವಿದರು, ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ವಿಜೇತರ ಮಾಹಿತಿ: ಜನಪದ ಗೀತೆ (ಗುಂಪು) ಸ್ಪರ್ಧೆಯಲ್ಲಿ ಶ್ರೇಯಾ ಜೋರಾಪೂರ ತಂಡ (ಪ್ರಥಮ), ಕೀತಿ ಗುರಪ್ಪನವರ ತಂಡ (ದ್ವಿತೀಯ), ಜನಪದ ನೃತ್ಯ (ಗುಂಪು) ಸ್ಪರ್ಧೆಯಲ್ಲಿ ನಾರಾಯಣ ಚಿತ್ರಗಾರ ತಂಡ (ಪ್ರಥಮ), ಶ್ರೇಯಾ ಕಾಳಮ್ಮನವರ ತಂಡ (ದ್ವಿತೀಯ), ಬೀದಿ ನಾಟಕ (ಗುಂಪು) ಸ್ಪರ್ಧೆಯಲ್ಲಿ ಪೂರ್ವಿಕಾ ಘಟ್ಟದ ತಂಡ (ಪ್ರಥಮ), ಸ್ಪೂರ್ತಿಮಡಿವಾಳರ ತಂಡ (ದ್ವಿತೀಯ), ಕವಿತೆ ಬರೆಯುವ ಸ್ಪರ್ಧೆಯಲ್ಲಿ ಫಾತಿಮಾ ಖಾಜಿ ಬೂದಿಹಾಳ (ಪ್ರಥಮ), ಬಾಲವ್ವ ದಿಬ್ಬದಮನಿ (ದ್ವಿತೀಯ), ಸ್ಫೂರ್ತಿ ಬಾಡ (ತೃತೀಯ), ಚಿತ್ರಕಲೆ ಸ್ಪರ್ಧೆಯಲ್ಲಿ ಹುಸೇನಸಾಬ ದಡೇದ (ಪ್ರಥಮ), ರಾಚಣ್ಣ ಮದಿ (ದ್ವಿತೀಯ), ಗೀತಾಂಜಲಿ ನಿರಂಜನ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ