ಯುವಕರೇ, ಸಾಧನೆಯತ್ತ ಚಿತ್ತ ಹರಿಸಿ: ಮುಖ್ಯ ಶಿಕ್ಷಕ ಶಿವರಾಮು ಕರೆ

KannadaprabhaNewsNetwork |  
Published : Jan 15, 2024, 01:45 AM IST
12ಕೆಎಂಎನ್‌ಡಿ-13ಹಲಗೂರು ವಿದ್ಯಾಸಂಸ್ಥೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ವಿವೇಕಾನಂದರು ತಮ್ಮ ವೈಜ್ಞಾನಿಕ ಬೋಧನೆಗಳಿಂದ ದೇಶಾದ್ಯಂತ ಲಕ್ಷಾಂತರ ಯುವಜನರನ್ನು ಪ್ರೇರೇಪಿಸಿದರು. ಮೌಢ್ಯ, ಕಂದಾಚಾರಗಳನ್ನು ಖಂಡಿಸುತ್ತಿದ್ದ ಇವರು ಲಕ್ಷಾಂತರ ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಇವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಕರೆಯಲಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಯುವಜನತೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ ನಿರ್ದಿಷ್ಟ ಗುರಿ ಹೊಂದಿ ಸಕಾಲಕ್ಕೆ ಗುರಿ ಸಾಧಿಸುವ ಛಲ ತಮ್ಮದಾಗಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಶಿವರಾಮು ತಿಳಿಸಿದರು.

ಹಲಗೂರು ವಿದ್ಯಾ ಸಂಸ್ಥೆ ಅವರಣದಲ್ಲಿ ಹಲಗೂರು ಲಯನ್ಸ್ ಕ್ಲಬ್ ಮತ್ತು ಹಲಗೂರು ಪ್ರೌಢಶಾಲೆಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ದಿನಾಚರಣೆ ಮತ್ತು ಹೋಬಳಿ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿವೇಕಾನಂದರು ತಮ್ಮ ವೈಜ್ಞಾನಿಕ ಬೋಧನೆಗಳಿಂದ ದೇಶಾದ್ಯಂತ ಲಕ್ಷಾಂತರ ಯುವಜನರನ್ನು ಪ್ರೇರೇಪಿಸಿದರು. ಮೌಢ್ಯ, ಕಂದಾಚಾರಗಳನ್ನು ಖಂಡಿಸುತ್ತಿದ್ದ ಇವರು ಲಕ್ಷಾಂತರ ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಇವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಕರೆಯಲಾಗುತ್ತದೆ ಎಂದರು.

‘ಯುವ ಸಂಪತ್ತನ್ನು ಸದ್ಬಳಕೆ ಮಾಡದೇ ನಮ್ಮ ದೇಶಕ್ಕೆ ಉಳಿಗಾಲವಿಲ್ಲ’ ಎಂಬ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಪ್ರಥಮ ಸ್ಥಾನ, ತನುಜಾ ದ್ವಿತೀಯ ಸ್ಥಾನ, ಮಹಾಲಕ್ಷ್ಮಿ ತೃತೀಯ ಸ್ಥಾನ ಪಡೆದುಕೊಂಡರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸಾಚಾರಿ, ಖಜಾಂಚಿ ಡಿ.ಎಲ್.ಮಾದೇಗೌಡ, ಸದಸ್ಯರಾದ ಎ.ಎಸ್. ದೇವರಾಜು, ಎನ್.ಕೆ.ಕುಮಾರ್, ಎಚ್.ಎಂ.ಆನಂದ್ ಕುಮಾರ್, ಮನೋಹರ್, ಎನ್.ಎಸ್.ಗುಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ವಾಮಿ ವಿವೇಕಾನಂದರು ಯುವಕರ ಆತ್ಮಶಕ್ತಿಯ ಸಂಕೇತದಂತಿದ್ದರು

ಮದ್ದೂರು:ಸ್ವಾಮಿ ವಿವೇಕಾನಂದರು ಯುವಕರ ಆತ್ಮಶಕ್ತಿಯ ಸಂಕೇತದಂತಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯ ಪಟ್ಟರು.ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಯುವಕರು ಈ ದೇಶದ ಆಸ್ತಿ. ದೇಶದ ಭದ್ರತೆಗೆ ಅವರ ಕೊಡುಗೆ ಹೆಚ್ಚಾಗಿ ಸಿಗಬೇಕೆಂದು ಬಯಸಿದ್ಧ ವಿವೇಕಾನಂದರು ಯುವಶಕ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು. ಅವರ ತತ್ವ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಕೊಂದು ಅರ್ಥ ಎಂದರು.ವಿದ್ಯಾರ್ಥಿಗಳು ಶಿಕ್ಷಣ ಕಲಿಕೆ ಮಾತ್ರವಲ್ಲದೆ ನೈತಿಕ ಶಿಕ್ಷಣಕ್ಕೂ ಒತ್ತು ನೀಡಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ನೈತಿಕತೆ ಪ್ರಾಮಾಣಿಕತೆಯನ್ನು ಮೂಡಿಸಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಕನ್ನಡ ಉಪನ್ಯಾಸಕಿ ಸರ್ವ ಮಂಗಳ, ಪ್ರಥಮ ದರ್ಜೆ ಸಹಾಯಕಿ ಕುಮಾರಿ, ಸಹಾಯಕ ವೆಂಕಟೇಶ್, ಭವಾನಿ ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ