ಮೂರು ತಿಂಗಳಿನಿಂದ ಪದವೀಧರರಿಗೆ ತಲುಪದ ಯುವ ನಿಧಿ

KannadaprabhaNewsNetwork |  
Published : May 30, 2026, 02:30 AM IST
ಸಸಸಸಸ | Kannada Prabha

ಸಾರಾಂಶ

ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಯುವ ನಿಧಿ ಯೋಜನೆಯ ಕೋಟ್ಯಂತರ ಅನುದಾನ ಗೃಹಲಕ್ಷ್ಮೀ ಯೋಜನೆಗೆ ವರ್ಗಾವಣೆಯಾಗಿರುವದರ ಬಗ್ಗೆ ದೂರು ಕೇಳಿ ಬರುತ್ತದೆ.

ರಾಮಮೂರ್ತಿ ನವಲಿ ಗಂಗಾವತಿ

ಸರ್ಕಾರ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆ ಮುಂದುವರಿದಿದ್ದರೂ ಪದವೀಧರರಿಗೆ ಮಾತ್ರ ಮೂರು ತಿಂಗಳಿಂದ ಯುವ ನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಮರೀಚಿಕೆಯಾಗಿದೆ.

ಪದವಿ ಮುಗಿಸಿ ಕೆಲಸ ದೊರೆಯದೆ ಯುವ ನಿಧಿ ಯೋಜನೆಗಾಗಿ ತಿಂಗಳ ಕೊನೆಯ ಸಮಯಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಮೂರು ತಿಂಗಳಿಂದ ಬಾರದ ಹಿನ್ನೆಲೆ ಪದವೀಧರರು ಪರದಾಡುವಂತಾಗಿದೆ. ಪದವೀಧರರಿಗೆ ₹3000, ಡಿಪ್ಲೊಮಾ ಪದವೀಧರರಿಗೆ ₹1500 ಸರ್ಕಾರ ನಿಗದಿ ಮಾಡಿದೆ. ಈಗಾಗಲೇ ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗೆ ಅನುದಾನ ಬರುತ್ತಿದ್ದು, ಯುವ ನಿಧಿ ಫಲಾನುಭವಿಗಳಿಗೆ ಮಾತ್ರ ತಲುಪಲು ವಿಳಂಬವಾಗುತ್ತಿದೆ.

14404 ಪದವೀಧರ ನೋಂದಣಿ: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 14404 ಪದವೀಧರರು ನೋಂದಣಿ ಮಾಡಿದ್ದು, ಕೊಪ್ಪಳ ತಾಲೂಕಿನಲ್ಲಿ ಜನವರಿ 2026ರ ವೇಳೆಗೆ 3805 ಪದವೀಧರರ ಖಾತೆಗೆ 80292000 ಹಣ ಸಂದಾಯವಾಗಿದೆ. ಕುಷ್ಟಗಿ ತಾಲೂಕಿನಲ್ಲಿ 3037 ಪದವಿ ಫಲಾನುಭವಿಗಳಿದ್ದು, ₹63876000 ಸಂದಾಯವಾಗಿದೆ. ಗಂಗಾವತಿ ತಾಲೂಕಿನಲ್ಲಿ 3381 ಫಲಾನುಭವಿಗಳಿದ್ದು, ₹90637500 ಸಂದಾಯವಾಗಿದೆ. ಕಾರಟಗಿ ತಾಲೂಕಿನಲ್ಲಿ 790 ಫಲಾನುಭವಿಗಳಿದ್ದು, ₹7911000 ಸಂದಾಯವಾಗಿದೆ. ಕನಕಗಿರಿ 727 ಫಲಾನುಭವಿಗಳಿದ್ದು, 70320007 ಸಂದಾಯವಾಗಿದೆ. ಯಲಬುರ್ಗಾ ತಾಲೂಕಿನಲ್ಲಿ 2064 ಫಲಾನುಭವಿಗಳಿದ್ದು, 47167500 ಹಣ ಸಂದಾಯವಾಗಿದ್ದು, ಕುಕನೂರು ತಾಲೂಕಿನಲ್ಲಿ 600 ಫಲಾನುಭವಿಗಳಿದ್ದಾರೆ. ಇವರ ಖಾತೆಗೆ 6286500 ಸಂದಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 14404 ಫಲಾನುಭವಿಗಳಿದ್ದು, 303202500 ಹಣ ಸಂದಾಯವಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ವರ್ಗಾವಣೆ: ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಯುವ ನಿಧಿ ಯೋಜನೆಯ ಕೋಟ್ಯಂತರ ಅನುದಾನ ಗೃಹಲಕ್ಷ್ಮೀ ಯೋಜನೆಗೆ ವರ್ಗಾವಣೆಯಾಗಿರುವದರ ಬಗ್ಗೆ ದೂರು ಕೇಳಿ ಬರುತ್ತದೆ. ಕಳೆದ ಫೆಬ್ರುವರಿಯಿಂದ ಯೋಜನೆ ಹಣ ತಲುಪದ ಕಾರಣ ಫಲಾನುಭವಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಯುವ ನಿಧಿ ಕಚೇರಿಗೆ ಸಂಪರ್ಕ ಮಾಡುತ್ತಿದ್ದಾರೆ. ನಿರುದ್ಯೋಗಿಗಳಿಗೆ ಈ ಯೋಜನೆ ಆಶ್ರಯವಾಗಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಹಣ ಬಾರದ ಕಾರಣ ವಂಚಿತರಾಗುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ ಯುವ ನಿಧಿ ಹಣ ಬಂದಿಲ್ಲ, ಪ್ರತಿ ತಿಂಗಳು ಈ ಯೋಜನೆಯ ಅಪ್ಡೇಟ್ ಮಾಡುತ್ತಾ ಬಂದಿರುತ್ತೇವೆ ಈ ಯೋಜನೆಯ ಅನುದಾನ ಗೃಹ ಲಕ್ಷ್ಮಿ ಯೋಜನೆಗೆ ವರ್ಗಾಯಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಯುವ ನಿಧಿ ಫಲಾನುಭವಿ ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಯುವ ನಿಧಿ ಬಂದಿಲ್ಲ. ಕೆಲವೊಂದು ತಾಂತ್ರಿಕ ಕಾರಣದಿಂದ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ತಲುಪಿಲ್ಲ. ಈ ಕುರಿತು ಸಚಿವರ ಜತೆಗೆ ಮಾತನಾಡಿದ್ದು, ಇನ್ನೂ 3-4 ದಿನಗಳಲ್ಲಿ ಫಲಾನುಭವಿಗಳಿಗೆ ಭತ್ಯೆ ತಲುಪುತ್ತದೆ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ರಡ್ಡಿ ಶ್ರೀನಿವಾಸ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆ ನಿರ್ಲಕ್ಷ್ಯ ಧೋರಣೆ ಆರೋಪ: ಮಾಜಿ ಸದಸ್ಯ ಪ್ರತಿಭಟನೆ
ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನಿರೀಕ್ಷೆ!