ಬೀರೂರಿನಲ್ಲಿ ಯುವ ಸಾಹಿತ್ಯ ಸಮ್ಮೇಳನ ಆಯೋಜನೆ: ಸೂರಿ ಶ್ರೀನಿವಾಸ್‌

KannadaprabhaNewsNetwork |  
Published : Sep 06, 2025, 01:00 AM IST
5ಕೆಕೆಡಿಿಯು1 | Kannada Prabha

ಸಾರಾಂಶ

ಕಡೂರು, ಕನ್ನಡ ಕಟ್ಟುವ ಯುವಕರ ಪಾತ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತುಂಬಾ ಹಿರಿದು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಕಸಾಪ ಯುವ ಘಟಕ ಪ್ರಾರಂಭವಾಗುತ್ತಿದ್ದು. ಮುಂದಿನ ದಿನಗಳಲ್ಲಿ ಬೀರೂರಿನಲ್ಲಿ ಜಿಲ್ಲಾ ಮಟ್ಟದ ಯುವ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಕಡೂರು ತಾಲೂಕು ಯುವ ಘಟಕ, ಸೇವಾ ದೀಕ್ಷೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಕನ್ನಡ ಕಟ್ಟುವ ಯುವಕರ ಪಾತ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತುಂಬಾ ಹಿರಿದು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಕಸಾಪ ಯುವ ಘಟಕ ಪ್ರಾರಂಭವಾಗುತ್ತಿದ್ದು. ಮುಂದಿನ ದಿನಗಳಲ್ಲಿ ಬೀರೂರಿನಲ್ಲಿ ಜಿಲ್ಲಾ ಮಟ್ಟದ ಯುವ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಕಡೂರಿನ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕಡೂರು ತಾಲೂಕು ಯುವ ಘಟಕ ಹಾಗೂ ಸೇವಾ ದೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀರೂರಿನಲ್ಲಿ ನಡೆಯುವ ಯುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸವಿತಾ ರಮೇಶ್ ಅವರನ್ನು ಸಭೆ ಆಯ್ಕೆ ಮಾಡಿಕೊಂಡಿದಕ್ಕೆ ಒಪ್ಪಿಗೆ ಸೂಚಿಸಿದರು.

ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು. ಸೇವಾ ದೀಕ್ಷ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಮಹಿಳಾ ಘಟಕದ ಪ್ರಧಾನ ಕಾರ್ಯ ದರ್ಶಿ ಸವಿತಾ ರಮೇಶ್ ಮಾತನಾಡಿ, ಯುವ ಘಟಕದ ಮೂಲಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಘಟಕವನ್ನು ಚೇತನಗೊಳಿಸುವುದು, ಮಾರ್ಗದರ್ಶನ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳಿಗೆ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾ ದೀಕ್ಷಾ ಭೋಧಿಸಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಯುವ ಘಟಕ ಅಧ್ಯಕ್ಷ ಪ್ರಿಯಾಂಕಾ ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ. ಪ್ರಕಾಶ್ ನೂತನ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಎಸ್‌. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್ ಕೆ.ವಿ, ಗೌರವಾಧ್ಯಕ್ಷ ಭರತ್ ಕೆಂಪರಾಜು, ಮರಗುದ್ದಿ ಮನು, ಕಾರ್ಯದರ್ಶಿಗಳಾಗಿ ಶಬರೀಶ್ ಜೀವ , ಕಲ್ಲೇಶ್ ಎಸ್ ನಗರ್ಕರ್, ಗೌರವ ಸಲಹೆಗಾರರಾಗಿ ಸವಿತಾ ರಮೇಶ್, ಶ್ರೀಧರ್, ಮಂಜುನಾಥ ಜೈನ್, ಪ್ರಧಾನ ಸಂಚಾಲಕರಾಗಿ ಅರುಣ್ , ಕುಮಾರ್, ರಕ್ಷಿತ್ ಸಿ, ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜು ಹಾಗೂ ವಿಜಯ್ ವರ್ಣೇಕರ್, ಯುವ ಘಟಕದ ಹೋಬಳಿ ಅಧ್ಯಕ್ಷರಾಗಿ ಕುರುಬಗೆರೆ ಲೋಕೇಶ್, ಕಡೂರು ಕಸಬಾ ಹೋಬಳಿ, ಸುಪ್ರೀತ್ ಬೀರೂರು ಹೋಬಳಿ ದಿಲೀಪ್ ಹುಲಿಕೆರೆ ಸಖರಾಯಪಟ್ಟಣ ಹೋಬಳಿ, ಸಂದೀಪ್, ಚೌಳಹಿರಿಯೂರು ಹೋಬಳಿ, ವರುಣ್ ಎಚ್. ಟಿ. ಹಿರೇನಲ್ಲೂರು ಹೋಬಳಿ, ಗಿರೀಶಾರಾಧ್ಯ ಸಿಂಗಟಗೆರೆ ಹೋಬಳಿ, ಸಂಜಯ್ ಪಂಚನಹಳ್ಳಿ ಹೋಬಳಿಗಗನ್ ರಾಥೋಡ್, ಪಂಚನಹಳ್ಳಿ ಹೋಬಳಿ ಅಧ್ಯಕ್ಷ ಜಯ ಸ್ವಾಮಿ, ಕಸಬಾ ಹೋಬಳಿ ಅಧ್ಯಕ್ಷ ಕೆ. ಜಿ. ವಸಂತ್ ಕುಮಾರ್ ಯಗಟಿ ಹೋಬಳಿ ಅಧ್ಯಕ್ಷ ರುದ್ರಾಚಾರ್, ಕಸಾಪ ಯುವ ಘಟಕದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

5ಕೆಕೆಡಿಯು1.

ಕಡೂರು ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಯುವ ಘಟಕದ ಉದ್ಘಾಟನೆ ಹಾಗೂ ಸೇವಾ ದೀಕ್ಷೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್