ಪ್ರಜಾಪ್ರಭುತ್ವ ಅರಿವು ಮೂಡಿಸಲು ಯುವ ಸಂಸತ್ತು ಸಹಕಾರಿ: ಶಾಸಕ ಎಂ.ಟಿ. ಕೃಷ್ಣಪ್ಪ

KannadaprabhaNewsNetwork |  
Published : Nov 12, 2026, 01:30 AM IST
 11 ಟಿವಿಕೆ 2 – ತುರುವೇಕೆರೆಯಲ್ಲಿ ನಡೆದ ಯುವ ಸಂಸತ್ ಸ್ಪರ್ಧೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಯುವ ಸಂಸತ್ತು ವಿದ್ಯಾರ್ಥಿಗಳಿಗೆ ಸಂಸತ್ತಿನ, ವಿಧಾನ ಸೌಧದ ಕಾರ್ಯವೈಖರಿ, ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಗಳ ತಿಳಿವಳಿಕೆ ನೀಡುವುದೇ ಆಗಿದೆ. ಇದೊಂದು ಶೈಕ್ಷಣಿಕ ಅಧ್ಯಯನ ಎಂದರೂ ತಪ್ಪಾಗಲಾರದು. ಇದರಿಂದ ಪ್ರಜಾಪ್ರಭುತ್ವದ ಅರಿವು ಮೂಡುತ್ತದೆ. ಸಂಸತ್ತಿನ ಕಾರ್ಯವೈಖರಿಯನ್ನು ತಿಳಿಸಿಕೊಡಲು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಅನುಕೂಲವಾಗಲಿದೆ. ಮಾತನಾಡುವ ಮತ್ತು ಚರ್ಚಿಸುವ ಕೌಶಲ್ಯವನ್ನು ವೃದ್ಧಿಗೊಳಿಸುತ್ತದೆ.

ಕನ್ನಡಪ್ರಭವಾರ್ತೆ, ತುರುವೇಕೆರೆ

ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಲು ಯುವ ಸಂಸತ್ತು ಸಹಕಾರಿಯಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸಹಕಾರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಸಂಸತ್ತು ವಿದ್ಯಾರ್ಥಿಗಳಿಗೆ ಸಂಸತ್ತಿನ, ವಿಧಾನ ಸೌಧದ ಕಾರ್ಯವೈಖರಿ, ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಗಳ ತಿಳಿವಳಿಕೆ ನೀಡುವುದೇ ಆಗಿದೆ. ಇದೊಂದು ಶೈಕ್ಷಣಿಕ ಅಧ್ಯಯನ ಎಂದರೂ ತಪ್ಪಾಗಲಾರದು. ಇದರಿಂದ ಪ್ರಜಾಪ್ರಭುತ್ವದ ಅರಿವು ಮೂಡುತ್ತದೆ. ಸಂಸತ್ತಿನ ಕಾರ್ಯವೈಖರಿಯನ್ನು ತಿಳಿಸಿಕೊಡಲು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಅನುಕೂಲವಾಗಲಿದೆ. ಮಾತನಾಡುವ ಮತ್ತು ಚರ್ಚಿಸುವ ಕೌಶಲ್ಯವನ್ನು ವೃದ್ಧಿಗೊಳಿಸುತ್ತದೆ. ದೇಶದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ತಿಳಿಯಲು ಸಾಧ್ಯವಾಗಲಿದೆ. ದೇಶದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಅಭಿವ್ಯಕ್ತಪಡಿಸುವ ಶಕ್ತಿಯನ್ನು ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಎನ್. ನಂಜೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಗ್ಲೋಬಲ್ ಎಂಬಸಿ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರಮನೆ, ವಕೀಲರ ಸಂಘದ ಅಧ್ಯಕ್ಷ ನಂಜೇಗೌಡ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಈ. ರಾಜು, ಗುರುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದಲ್ಲಿ ನಡೆಯುವ ಯುವ ಸಂಸತ್ ಸಭೆಗೆ ತಾಲೂಕಿನಿಂದ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಿ.ಆರ್. ಕುಸುಮಾ, ಗ್ಲೋಬಲ್ ಎಂಬಸಿ ಪ್ರಥಮ ದರ್ಜೆ ಕಾಲೇಜಿನ ಪವಿತ್ರಾ, ಅಮೂಲ್ಯ, ಎಸ್.ನವ್ಯಶ್ರೀ, ಶ್ರೀ ವಿವೇಕಾನಂದ ಕಾಲೇಜಿನ ಎನ್. ಶ್ರೇಯಾ, ಕೊಡಗೀಹಳ್ಳಿಯ ಜಿ.ಎಚ್.ಎಸ್. ನ ಎಲ್.ನಿಖಿತ, ಟಿ.ಎಸ್.ಚಂದನ, ಬಾಣಸಂದ್ರ ವಿಎಸ್‌ಎಸ್‌ಜಿಸಿಯ ಕೆ. ವಿ. ಮೋನಿಕಾ, ದಂಡಿನಶಿವರ ಎಸ್‌ಎಚ್‌ಜಿಎಫ್‌ಸಿಯ ದುಶ್ಯಂತ್, ತುರುವೇಕೆರೆ ಬಾಲಕಿಯರ ಪದವಿ ಫೂರ್ವ ಕಾಲೇಜಿನ ಪಲ್ಲವಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ರಮೇಶ್ ನಾಯಕ್, ಪ್ರಾಂಶುಪಾಲರಾದ ನಂಜೇಗೌಡ, ಗಂಗಾಧರ ದೇವರಮನೆ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌