ಗುತ್ತಲ: ಮದುವೆಗೂ ಮುನ್ನ ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ. ನಿಲೇಶ್ ಎಂ.ಎನ್. ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರು ಮಾತನಾಡಿ, ಹದಿಹರೆಯದವರ ದೇಹದಲ್ಲಿ ಪ್ರಾಕೃತಿಕ ಬದಲಾವಣೆಗಳು ಸಹಜ. ಅದಕ್ಕೆ ಹೊಂದಿಕೊಂಡು ಬದುಕಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಂ.ಎಂ. ವಗ್ಗಣ್ಣನವರ ಮಾತನಾಡಿ, ದೇಶದ ಯುವಕರು ಸ್ವಾಮಿ ವಿವೇಕಾನಂದರ ಹಿತನುಡಿಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಸುಧಾಕರ್ ದೈವಜ್ಞ ರಕ್ತದಾನದ ದೃಢಸಂಕಲ್ಪ ಹಾಗೂ ಪ್ರತಿಜ್ಞಾ ವಿಧಿಯನ್ನುಬೋಧಿಸಿದರು. ಸಮುದಾಯ ಆರೋಗ್ಯ ಕೇಂದ್ರ ಗುತ್ತಲದ ಆಪ್ತ ಸಮಾಲೋಚಕ ನಾಗರಾಜ ಇಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿ.ವಿ. ಹಳ್ಳಿಕೇರಿ ಕಾಲೇಜಿನ ಪ್ರಾಂಶುಪಾಲರಾದ ಎಫ್.ಐ. ಶಿಗ್ಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಪುಟ್ಟನಗೌಡ್ರು, ಉಪನ್ಯಾಸಕ ವೈ.ಇ. ಸವೂರ ಇತರರು ಇದ್ದರು. ಇಂದಿನಿಂದ ತಾಲೂಕು, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ತಾಲೂಕು ಮಟ್ಟದ ದಸರ ಕ್ರೀಡಾಕೂಟ ಆ. 29ರಂದು ಬ್ಯಾಡಗಿ, ಆ. 30ರಂದು ರಾಣಿಬೆನ್ನೂರು, ಆ. 31ರಂದು ಶಿಗ್ಗಾಂವಿ, ಹಿರೇಕೆರೂರು, ಹಾವೇರಿ, ಸೆ. 1ರಂದು ರಟ್ಟೀಹಳ್ಳಿ, ಸೆ. 2ರಂದು ಹಾನಗಲ್ಲ ಹಾಗೂ ಸೆ. 3ರಂದು ಸವಣೂರು ತಾಲೂಕಿನಲ್ಲಿ ಜರುಗಲಿದೆ. ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್ ಹಾಗೂ ಯೋಗಾಸನ ಕ್ರೀಡೆಗಳನ್ನು ಆಯೋಜಿಸಲಾಗುವುದು.