ಲಿಂಕ್‌ ಕಾಮಗಾರಿ ನಿಲ್ಲಲು ಯುವಶಕ್ತಿ ಕಾರಣ

KannadaprabhaNewsNetwork |  
Published : Sep 23, 2026, 01:15 AM IST
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜಿ.ಹರಿವೇಸಂದ್ರ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ಗಣೇಶೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು , | Kannada Prabha

ಸಾರಾಂಶ

ತಾಲೂಕಿನ ರೈತರ ಜೀವನಾಡಿಯಾದ ಹೇಮಾವತಿ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ಬೃಹತ್ ಹೋರಾಟದ ಮೂಲಕ ಸ್ಥಗಿತ ಮಾಡಲಾಗಿದೆ. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವಶಕ್ತಿಯಿಂದ ಈ ಕಾಮಗಾರಿ ನಿಲ್ಲಲು ಕಾರಣ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ರೈತರ ಜೀವನಾಡಿಯಾದ ಹೇಮಾವತಿ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ಬೃಹತ್ ಹೋರಾಟದ ಮೂಲಕ ಸ್ಥಗಿತ ಮಾಡಲಾಗಿದೆ. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವಶಕ್ತಿಯಿಂದ ಈ ಕಾಮಗಾರಿ ನಿಲ್ಲಲು ಕಾರಣ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು. ತಾಲೂಕಿನ ಜಿ.ಹರಿವೇಸಂದ್ರ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ಗಣೇಶೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬರಗಾಲದ ಛಾಯೆ ಈಗಾಗಲೇ ತಾಲೂಕಿನ ರೈತರನ್ನು ಕಂಗಾಲು ಮಾಡಿದೆ. ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಹೇಮಾವತಿ ನೀರು ಈ ಬಾರಿ ಹರಿಯಲು ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರೇ ಕಾರಣ ಎಂದರು. ಕೃಷಿ ಚಟುವಟಿಕೆ ಸ್ಥಗಿತವಾಗಿದೆ. ಗಣೇಶ ಹಬ್ಬ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ಮಾಡಬೇಕಿದೆ. ಮುಂಗಾರು ಕೈಕೊಟ್ಟಿದೆ. ಹಿಂಗಾರು ಮಳೆಯಾದರೂ ತಾಲೂಕಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಗಣೇಶ ವಿಸರ್ಜನೆ ಎಲ್ಲೆಡೆ ಮಾಡುತ್ತಿದ್ದಾರೆ ಎಂದರು. ರಾಜಕೀಯ ಮಾಡುವುದು ಚುನಾವಣಾ ಸಮಯದಲ್ಲಿ ಎಂಬುದು ಎಲ್ಲರಿಗೂ ತಿಳಿದಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಲ್ಲದ ರಾಜಕಾರಣ ಬೇಕಿಲ್ಲ. ಗ್ರಾಮದಲ್ಲಿ ಯಾವುದೇ ಹಬ್ಬ ಆಚರಿಸಿದರೂ ಜಾತ್ಯತೀತ ಪಕ್ಷಾತೀತ ನಿಲುವು ಇರಬೇಕು. ಎಲ್ಲರೂ ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಮಾಜಿ ಸದಸ್ಯ ಚನ್ನಶೆಟ್ಟಿಹಳ್ಳಿ ಯತೀಶ್, ಸಿದ್ದರಾಜು, ರಂಗಸ್ವಾಮಿ, ಜೆಡಿಎಸ್ ಕಸಬ ಹೋಬಳಿ ಅಧ್ಯಕ್ಷ ಕಾಂತರಾಜು, ಮುಖಂಡ ಜಿ.ಎಂಶಿವಾನಂದ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾದಲ್ಲಿ ಕಂಬಳ ಸರಿಯಲ್ಲ: ಪ್ರಮೋದಾ ದೇವಿ
ಮುಂಗಾರು ಅಂತ್ಯದ ಮಳೆಗೆ ಮೂರು ಸಾವು