ಯುವಕರು ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಬೇಕು: ಡಾ ಪಿಎಚ್ ಮಹೇಂದ್ರಪ್ಪ

KannadaprabhaNewsNetwork | Updated : Jan 15 2024, 05:06 PM IST

ಸಾರಾಂಶ

ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಚಿಂತನೆಯ ವಿಶ್ವಗುರುಗಳಾಗಿದ್ದರು, ಅವರು ಯುವ ಪೀಳಿಗೆಯನ್ನು ಜಾಗೃತಗೊಳಿಸಿ ಗುರಿ ಮುಟ್ಟುವ ಚೈತನ್ಯ ಶಕ್ತಿಯನ್ನು ತುಂಬಿದವರು, ಅವರ ಸಾಧನೆಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಬೇಕು.

ಕನ್ನಡಪ್ರಭ ವಾರ್ತೆ ಶಿರಾ

ಯುವ ಸಮುದಾಯ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ ಎಂದು ಶ್ರೀ ಕೆ.ಮಲ್ಲಣ್ಣ ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ ಪಿಎಚ್ ಮಹೇಂದ್ರಪ್ಪ ಹೇಳಿದರು.

ನಗರದ ಶ್ರೀ ಕೆ. ಮಲ್ಲಣ್ಣ ಸ್ಮಾರಕ ರಂಗನಾಥ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸ್ವಾಮಿ ವಿವೇಕಾನಂದರು, ಏಳಿ ಏದ್ದೇಳಿ, ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ! ಎಂದು ಜಾಗೃತಿ ಮೂಡಿಸಿದವರು, ತಮ್ಮ ಪ್ರಖರ ಆಧ್ಯಾತ್ಮಿಕ ಚಿಂತನೆಯ ಮೂಲಕ ಪ್ರಪಂಚದಲ್ಲಿ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸದಿಂದ ತಮ್ಮ ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲರು ಎಸ್. ಎಚ್. ರಂಗನಾಥ್ ಮಾತನಾಡಿ, ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಚಿಂತನೆಯ ವಿಶ್ವಗುರುಗಳಾಗಿದ್ದರು, ಅವರು ಯುವ ಪೀಳಿಗೆಯನ್ನು ಜಾಗೃತಗೊಳಿಸಿ ಗುರಿ ಮುಟ್ಟುವ ಚೈತನ್ಯ ಶಕ್ತಿಯನ್ನು ತುಂಬಿದವರು, ಅವರ ಸಾಧನೆಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯದರ್ಶಿ ಗುಳಿಗೆನಹಳ್ಳಿ ಆರ್. ನಾಗರಾಜ್ ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಅಧಿಕಾರಿ ಜಿ.ಡಿ. ಹನುಮಂತರಾಯಪ್ಪ, ಉಪನ್ಯಾಸಕ ಆರ್.ಎಚ್. ರಂಗರಾವ್, ಡಿ. ರವಿಕುಮಾರ್. ಸಿ.ವಿ ವೆಂಕಟಾಚಲ, ಎಚ್. ರಂಗನಾಥ್, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಬಿ. ರಾಮಚಂದ್ರಪ್ಪ ಸೇರಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.

ಶ್ರೀ ಕೆ. ಮಲ್ಲಣ್ಣ ಸ್ಮಾರಕ ರಂಗನಾಥ ಪರವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಡಾ.ಪಿ.ಎಚ್.ಮಹೇಂದ್ರಪ್ಪ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಎಸ್.ಎಚ್.ರಂಗನಾಥ್ ಮತ್ತಿತರರಿದ್ದರು.

Share this article