ಯುವಕರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Sep 08, 2026, 02:00 AM IST
7ಕೆಎಂಎನ್ ಡಿ11 | Kannada Prabha

ಸಾರಾಂಶ

ಗ್ರಾಮೀಣ ನಿರುದ್ಯೋಗಿ ಯುವಕರು ಸ್ವಂತ ಉದ್ಯೋಗ ಕಟ್ಟಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕೆಂದು ಉದ್ದೇಶದಿಂದ ಸರ್ಕಾರದಿಂದ ವೃತ್ತಿ ಅನುಸಾರವಾಗಿ ಸಾಮಗ್ರಿ ವಿತರಿಸಲಾಗುತ್ತಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು.

ಮಳವಳ್ಳಿ:

ನಿರುದ್ಯೋಗಿ ಯುವಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿರುದ್ಯೋಗಿ ಯುವಕರಿಗೆ ಸಲಕರಣೆಗಳ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ಗ್ರಾಮೀಣ ನಿರುದ್ಯೋಗಿ ಯುವಕರು ಸ್ವಂತ ಉದ್ಯೋಗ ಕಟ್ಟಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕೆಂದು ಉದ್ದೇಶದಿಂದ ಸರ್ಕಾರದಿಂದ ವೃತ್ತಿ ಅನುಸಾರವಾಗಿ ಸಾಮಗ್ರಿ ವಿತರಿಸಲಾಗುತ್ತಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ವಿಶೇಷ ಚೇತನ ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ. ರಾಜು, ದೊಡ್ಡಯ್ಯ, ಮುಖಂಡರಾದ ಸಿ.ಮಾದು, ಮಹೇಶ್, ಅಂಬರೀಶ್ ಸಂತೋಷ ಸೇರಿದಂತೆ ಇತರರು ಇದ್ದರು.

ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಮಳವಳ್ಳಿ: ನಗರ ಉಪವಿಭಾಗ ವ್ಯಾಪ್ತಿಯ ಮಳವಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ಸೆ.8ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆವೆರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೇಂದ್ರ ವ್ಯಾಪ್ತಿಯ ಮಳವಳ್ಳಿ ಪಟ್ಟಣ, ನಿಡಘಟ್ಟ, ಕಂದೇಗಾಲ, ಚೋಳನಹಳ್ಳಿ, ಗಾಜನೂರು, ಗೌಡಗೆರೆ, ಸುಣ್ಣದದೊಡ್ಡಿ, ಕ್ಯಾತೇಗೌಡನದೊಡ್ಡಿ, ಅಂಕನಹಳ್ಳಿ, ಅಂಚೆದೊಡ್ಡಿ, ಅಮೃತೇಶ್ವರನಹಳ್ಳಿ, ಮೊಳ್ಳೆದೊಡ್ಡಿ, ಅಣ್ಣಹಳ್ಳಿ, ಕಲ್ಲುವೀರನಹಳ್ಳಿ, ಕೆಂಬೂತಗೆರೆ, ತಮ್ಮಡಹಳ್ಳಿ, ಬುಗತಗಹಳ್ಳಿ, ಗುಳಘಟ್ಟ, ಎಂ.ಬಸವನಪುರ, ಟಿ.ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು, ತಳಗವಾದಿ, ದೇವಿಪುರ, ಜೆ.ಸಿ.ಪುರ, ಹೊಂಬೇಗೌಡನದೊಡ್ಡಿ, ಕಾಳಕೆಂಪನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.

ನಾಳೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಹಲಗೂರು: ರಾಯರ ಬೀದಿಯಲ್ಲಿರುವ ಪ್ರಭು ಆಸ್ಪತ್ರೆಯಲ್ಲಿ ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ಮೈಸೂರು ಮತ್ತು ಪ್ರಭು ಆಸ್ಪತ್ರೆ ಸಹಯೋಗದಲ್ಲಿ ಸೆ.9 ರಂದು ಉಚಿತ ಕ್ಯಾನ್ಸರ್ ಮತ್ತು ಮೂತ್ರ ಶಾಸ್ತ್ರ ಮತ್ತು ವೈದ್ಯಕೀಯ ಉಚಿತ ತಪಾಸಣೆ ಶಿಬಿರವನ್ನು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಸಲಾಗುವುದು. ಇದರ ಸದುಪಯೋಗವನ್ನು ಹಲಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳುವಂತೆ ಪ್ರಭು ಆಸ್ಪತ್ರೆ ವೈದಾಧಿಕಾರಿಗಳಾದ ಉಮೇಶ್ ಮಠಪತಿ ಪತ್ರಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕನ್ನಡಿಗರ ಮಹೋತ್ಸವಕ್ಕೆ ಭಾವಪೂರ್ಣ ಮಂಗಳ
ಮರುಳಸಿದ್ದೇಶ್ವರ ಸನ್ನಿಧಿಯಲ್ಲಿ ಸಚಿವ ಬಸವಂತಪ್ಪ